ಸಿಂಧನೂರು ಜುಲೈ 27. ಖ್ಯಾತ ಉದ್ಯಮಿಗಳು ಹಾಗೂ ಬಿಜೆಪಿ ಮುಖಂಡರಾದ ಶ್ರೀ ರಾಜೇಶ್ ಹಿರೇಮಠ ಹುಟ್ಟು ಹಬ್ಬದ ಪ್ರಯುಕ್ತ ನಗರಸಭೆಯ ಪೌರಕಾರ್ಮಿಕರಿಗೆ ಅಗತ್ಯ ವಸ್ತುಗಳ ಕಿಟ್ ನೀಡಲಾಯಿತು ಈ ಸಂದರ್ಭದಲ್ಲಿ ಮಾತಾಡಿದ ಶಿವು ಹಿರೇಮಠ್ ಬುಕನಟ್ಟಿ ಕೈಗಾರಿಕೊದ್ಯಮಕ್ಕೆ ಭದ್ರ ಬುನಾದಿ ಹಾಕಿ ಹೊಸ ಭಾಷ್ಯ ಬರೆದು ಹೆಮ್ಮರವಾಗಿ ಬೆಳೆಸಿ ಸಾವಿರಾರು ದುಡಿಯುವ ಕೈಗಳಿಗೆ ಕೆಲಸ ನೀಡಿದವರು.
ಸಾವಿರಾರು ಕುಟುಂಬಗಳಿಗೆ ನೇರವಿನ ಸಹಾಯ ಹಸ್ತ ಚಾಚಿ ಆಸರೆಯಾದವರು. ಸಾರ್ವಜನಿಕರ ಬದುಕು ಹಸನಾಗಿಸಲು ನಿಸ್ವಾರ್ಥ ಮನೋಭಾವದೊಂದಿಗೆ ಅನೇಕ ವಿಧಗಳಲ್ಲಿ ಜನರಿಗೆ ಸಹಾಯ ನೀಡಿದವರು.ಮಾನವೀಯತೆ ಮೊದಲು ಎಂಬ ಸಂಕಲ್ಪದೊಂದಿಗೆ ಸಂಕಷ್ಟದಲ್ಲಿದ್ದವರನ್ನು ಸಂರಕ್ಷಿಸಬೇಕೆನ್ನುವ ಕಾಯಕ ಮಾಡಿದವರು. ಇಂದಿನ ದಿನಮಾನದಲ್ಲಿ ತಮ್ಮ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಸಾಸಿವೆಯಷ್ಟು ಸಹಾಯ ನೀಡಿ ಬೆಟ್ಟದಷ್ಟು ಪ್ರಚಾರ ಪಡೆಯುವ ಈ ದುನಿಯಾದಲ್ಲಿ ಬಲಗೈಲಿ ಮಾಡಿದ ದಾನ ಎಡಗೈ ಗೆ ತಿಳಿಯದಂತೆ, ಎಲೆಮರೆ ಕಾಯಿಯಂತೆ ಯಾವುದೇ ಪ್ರಚಾರ ಬಯಸದೆ ಕಾರ್ಯಗೈದವರು. ನೊಂದವರ ಪರ ಮಿಡಿಯುವ ಹೃದಯ ಈಗಿನ ಕಾಲದಲ್ಲಿ ಬಹಳ ವಿರಳ.
ಕೋಟಿ ಕೋಟಿ ಹಣವಿದ್ದರೂ ಸಹಾಯ ಮಾಡಬೇಕೆನ್ನುವ ಮನಸ್ಸು ತಮ್ಮನ್ನು ತಾವು ಕ್ರಿಯಾಶೀಲವಾಗಿ ತೊಡಗಿಸಿಕೊಂಡು ವಿಭಿನ್ನ ಆಲೋಚನೆಗಳ ಮೂಲಕ ಕನಸುಗಳನ್ನು ನನಸು ಮಾಡಲು ‘ಯೋಚನೆ -ಯೋಜನೆ’ ರೂಪಿಸಿದ ವಾಣಿಜ್ಯೋದ್ಯಮಿಗಳು, ರಾಜಕಾರಣಿಗಳು,ಶಿಕ್ಷಣ ಪ್ರೇಮಿಗಳು,ಯುವ ಪೀಳಿಗೆಗೆ ಆದರ್ಶ ಮಾರ್ಗದರ್ಶಕರು,ಸರಳ ಹಾಗೂ ಮಾತೃ ವಾತ್ಸಲ್ಯದ ಸಹೃದಯಿಗಳಾದ ಕಲಿಯುಗದ ಕರ್ಣ ಶ್ರೀ ರಾಜೇಶ್ ಹಿರೇಮಠ ಅವರ ಹುಟ್ಟುಹಬ್ಬವನ್ನು ಉಮಾಶಂಕರ ಫೌಂಡೇಶನ್ (ರಿ ) ವತಿಯಿಂದ ನಗರಸಭೆಯ ಆವರಣದಲ್ಲಿ ಸರಳವಾಗಿ ಸಮಾಜದ ಸ್ವಾಸ್ಥ್ಯ ಕಾಪಾಡುವ ವೈದ್ಯರು, ಶ್ರಮಿಕರಾದ ಪೌರಕಾರ್ಮಿಕರಿಗೆ ಸುರಕ್ಷಿತ ಅಗತ್ಯ ವಸ್ತುಗಳ ಕಿಟ್ (ಜಾಕೆಟ್, ಹ್ಯಾಂಡ ಗ್ಲೋಸ್, ಮಾಸ್ಕ್, ಬಟ್ಟೆ, ಸಿಹಿ )ವಿತರಿಸುವ ಮೂಲಕ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಉಮಾಶಂಕರ ಫೌಂಡೇಶನ್ ಅಧ್ಯಕ್ಷರು ಶ್ರೀ ಎಸ್. ಎಸ್.ಹಿರೇಮಠ,ಖಜಾಂಚಿ ಆನಂದ ಹಿರೇಮಠ, ಕಾರ್ಯದರ್ಶಿ ಶಿವಕುಮಾರ ಹಿರೇಮಠ,ಲಿಂಗರಾಜ ಕಡಕಲ್,ನಿರುಪಾದೇಪ್ಪ ಜೋಳದರಾಶಿ, ಮರೀಬಸವರಾಜ, ಮಂಜುನಾಥ ಅರಸೂರು,ಪ್ರಸಾದ ನಾಗಲಿಕರ,ಗುರುಮೂರ್ತಿ ಶ್ರೀನಿವಾಸ ಬಲೂಸು,ನಗರ ಸಭೆಯ ಹೆಲ್ತ್ ಇನ್ಸ್ಪೆಕ್ಟರ್ ಮಹಾಂತೇಶ್ ಅಂಗಡಿ, ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.