ಜ.10 ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀ ಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ನಮ್ಮ ಕರ್ನಾಟಕ ಸೇನೆ ಹಾಗೂ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ವತಿಯಿಂದ ನಮ್ಮ ಕರ್ನಾಟಕ ಸೇನೆಯ ರಾಯಚೂರು ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಬೂದೇಶ ಮರಾಠ ಅವರ ಹುಟ್ಟುಹಬ್ಬ ಸಮಾರಂಭ ಕಾರ್ಯಕ್ರಮವು ಆಶ್ರಮದಲ್ಲಿ ಮಹಾಪ್ರಸಾದ ಸೇವೆ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಬೂದೇಶ ಮರಾಠ ಅವರನ್ನು ಕಾರುಣ್ಯ ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಿ “ಕನ್ನಡದ ಕುವರ “ಎನ್ನುವ ಬಿರುದಿನ ಅಭಿದಾನದೊಂದಿಗೆ ಗೌರವಿಸಲಾಯಿತು.ಈ ಕಾರ್ಯಕ್ರಮದಲ್ಲಿ ನಮ್ಮ ಕರ್ನಾಟಕ ಸೇನೆಯ ತಾಲೂಕ ಅಧ್ಯಕ್ಷರಾದ ಮಂಜುನಾಥ ಗಾಣಿಗೇರ ಮಾತನಾಡಿ ಕನ್ನಡ ನೆಲ ಜಲ ಭಾಷೆಯ ರಕ್ಷಣೆಯೇ ನಮ್ಮ ಗುರಿ.
ನಮ್ಮ ಕರ್ನಾಟಕ ಸೇನೆಯ ಪ್ರಧಾನ ಕಾರ್ಯದರ್ಶಿಗಳಾಗಿ ಬೂದೇಶ ಮರಾಠ ಅವರ ಹಲವಾರು ಸಮಾಜ ಪರ ಕಾರ್ಯಗಳು ಮತ್ತು ಕೊರೊನಾದಂತಹ ಸಮಯದಲ್ಲಿ ನಿರ್ಗತಿಕರಿಗೆ ಅನಾಥ ಜೀವಿಗಳಿಗೆ ಹಾಸಿಗೆ ಹೊದಿಕೆಗಳನ್ನು ವಿತರಿಸಿ ಮತ್ತು ಬಡ ಕುಟುಂಬಗಳಿಗೆ ತಮ್ಮ ಜೀವನವನ್ನು ಲೆಕ್ಕಿಸಿದೆ ಮಾಡಿರುವ ಕಾರ್ಯಗಳು ನಮ್ಮ ಸಂಘಟನೆಯ ಗೌರವ ಘನತೆಯನ್ನು ಹೆಚ್ಚಿಸಿವೆ. ಬಡತನದಲ್ಲಿ ಹುಟ್ಟಿ ದುಡಿಮೆಯಲ್ಲಿ ಅರ್ಧದಷ್ಟು ಭಾಗ ಸಮಾಜ ಸೇವೆಗೆ ಮೀಸಲಿಡುವ ಬೂದೇಶ ಅವರು ನಮ್ಮ ಕರ್ನಾಟಕ ಸೇನೆಯ ಬಹು ದೊಡ್ಡ ಶಕ್ತಿಯಾಗಿದ್ದಾರೆ. ಸಿಂಧನೂರಿನ ಮನೆ ಮನೆಯ ಮಗನಾಗಿ ಎಲ್ಲರ ಜೊತೆ ಉತ್ತಮ ಸ್ನೇಹ ಸಂಬಂಧಗಳನ್ನು ಹೊಂದಿದ ಬೂದೇಶ ಮರಾಠ ಸಾರ್ವಜನಿಕರ ಪ್ರಿಯರಾಗಿದ್ದಾರೆ. ಅನ್ಯಾಯ ದೌರ್ಜನ್ಯದ ವಿರುದ್ಧ ನಿರಂತರ ಹೋರಾಟ ನಡೆಸುವ ಬೂದೇಶ ಮರಾಠ ಅವರಿಗೆ ಸಿಂಧನೂರಿನ ನಾಡಿನ ಹಾಗೂ ಕಾರುಣ್ಯ ಆಶ್ರಮದ ಎಲ್ಲಾ ಹಿರಿಯರ ಆಶೀರ್ವಾದ ಹಾರೈಕೆ ಇರಲಿ ಎಂದು ಮಾತನಾಡಿ ಶುಭ ಕೋರಿದರು.
ನಂತರ ಜೀವ ಸ್ಪಂದನಾ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿಗಳಾದ ಅವಿನಾಶ ದೇಶಪಾಂಡೆ ಮಾತನಾಡಿ. ಸರಳ ಸಾಮಾನ್ಯ ವ್ಯಕ್ತಿತ್ವ ಹೊಂದಿರುವ ಬೂದೇಶ ಮರಾಠ ಸಿಂಧನೂರಿನ ಯುವ ಶಕ್ತಿಯಾಗಿದ್ದಾರೆ. ಮತ್ತು ನಿರಂತರ ಒಂದಿಲ್ಲೊಂದು ಸಮಾಜ ಪರ ಕಾರ್ಯಗಳನ್ನು ಮಾಡುತ್ತಾ ನಮ್ಮ ಕರ್ನಾಟಕ ಸೇನೆಯ ರಾಯಚೂರು ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿಗಳಾಗಿ ಕನ್ನಡದ ನೆಲ ಜಲ ಭಾಷೆಯ ಉಳಿವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹವರ ಹುಟ್ಟುಹಬ್ಬ ಕಾರುಣ್ಯ ಆಶ್ರಮದಲ್ಲಿ ಅರ್ಥಪೂರ್ಣವಾಗಿದೆ ಎಂದು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜುನ ಕಾಟಗಲ್. ರುದ್ರಗೌಡ ಪಾಟೀಲ್. ನಾಗರಾಜ ಖಂಡಿಮಠ. ಮಹಾಂತೇಶ ರೌಡಕುಂದ. ಪ್ರದೀಪ್ ಪೂಜಾರಿ ಸಂಸ್ಥಾಪಕರು ಸೇವಾ ಸಿರಿ ಚಾರಿಟೇಬಲ್ ಟ್ರಸ್ಟ್. ಬಸವರಾಜ ಸಾಲಗುಂದ ಬಜರಂಗದಳ ಸಿಂಧನೂರು. ಮುದುಕಪ್ಪ ವನಸಿರಿ ಫೌಂಡೇಶನ್ ಸಿಂಧನೂರು. ಸುರೇಶ ದಲಿತಪರ ಹೋರಾಟಗಾರರು ಗೊರೆಬಾಳ. ಶ್ರೀನಿವಾಸ ಮರಾಠ ತಾಲೂಕಾಧ್ಯಕ್ಷರು ಮರಾಠ ಸಮಾಜ ಸಿಂಧನೂರು. ನಾಗೇಶ ಪವಾರ. ಹುಸೇನ್ ಭಾಷಾ ಕರವೇ. ಪ್ರಶಾಂತ ಶಂಭುಲಿಂಗನಗೌಡ ಕುನಟಗಿ. ಬಸವರಾಜ ಬುಕ್ಕನಟ್ಟಿ ದಲಿತಪರ ಹೋರಾಟಗಾರರು. ಉದಯಕುಮಾರ ರಘು ಅಲ್ಲೂರ ಕರ್. ಹಾಗೂ ಕಾರುಣ್ಯ ಆಶ್ರಮದ ಸಿಬ್ಬಂದಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ. ಸುಜಾತ ಹಿರೇಮಠ. ಗೀತಾ ಕುಲಕರ್ಣಿ.ಅಮರೇಶ.ಶರಣಮ್ಮ. ಸಿದ್ದಯ್ಯ ಸ್ವಾಮಿ. ಆನಂದ. ಮರಿಯಪ್ಪ ಹರ್ಷವರ್ಧನ ಅನೇಕರು ಉಪಸ್ಥಿತರಿದ್ದರು.