ನಗರದ ನೊಬೆಲ್ ಪದವಿ ಮಹಾವಿದ್ಯಾಲಯದಲ್ಲಿ ನೊಬೆಲ್ ಕರಿಯರ್ ಆಕಾಡೆಮಿಯ ವತಿಯಿಂದ ಉಪನ್ಯಾಸಕರ ಅರ್ಹತಾ ಪರೀಕ್ಷಾ ಕಾರ್ಯಗಾರ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತಾನಾಡಿದ ಉಪನ್ಯಾಸಕ ಬಸವರಾಜ ತಡಕಲ್ ,ಇಂದು ಸ್ಪರ್ಧಾತ್ಮಕ ಯುಗ ಬೌದ್ಧಿಕ ಜ್ಞಾನ ಇದ್ವರು ಮಾತ್ರ ಗೆಲ್ಲುತ್ತಾನೆ .ಹಾಗಾಗಿ ನಿವೂ ಬರಯುವ ಪರೀಕ್ಷೆಯ ಬಗ್ಗೆ ಸಂಪೂರ್ಣ ಅರಿವು ಇರುಬೇಕು ಅಂತಹ ಅರಿವುನ್ನು ಮೂಡಿಸುವ ಕೆಲಸವ ನೊಬೆಲ್ ಕರಿಯರ್ ಆಕಾಡೆಮಿ ಮಾಡುತ್ತುರವುದು ಶ್ಲಾಘನೀಯ ಎಂದರು.
ಆರ.ಸಿ ಪಾಟೀಲ ಮಾತಾನಾಡುತ್ತಾ,ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವ ಅಬ್ಯಾರ್ಥಿಗಳಿಗೆ ಇಂತಹ ಕಾರ್ಯಗಾರ ವರದಾನವಾಗಿದೆ. ಕೇವಲ ಕಾರ್ಯಾಗಾರದಲ್ಲಿ ಭಾಗವಹಿಸಿದರೆ ಸಾಲದು ನಿಮ್ಮ ನಿರಂತರ ಅದ್ಯಯನಶಿಲತೆಯಿಂದ ಮಾತ್ರ ಸಾಧನೆ ಮಾಡಲು ಅನುಕೂಲವಾಗುತ್ತದೆ. ಎಂದರು.
ಈ ದಿನದ ಕಾರ್ಯಗಾರ ಮುಖ್ಯ ರುವಾರಿ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಪ್ರಕಾಶ ಬಡಿಗೇರ ಅವರು ಆರು ಗಂಟೆಗಳ ಕಾಲ ತರಬೇತಿ ನೀಡಿ ಮಾತನಾಡುತ್ತಾ, ಇಂತಹ ಕಾರ್ಯಗಾರಗಳು ಎಷ್ಟೋ ವಿದ್ಯಾರ್ಥಿಗಳ ಬದುಕು ಬದಲಿಸಿವೆ ಯಾವುದೇ ಪರೀಕ್ಷೆ ಬರೆಯುವುದಕಿಂತ ಮುಂಚೆ ಒಂದು ಯೋಜನೆ ರೂಪಿಸಿಕೊಳ್ಳಿ,ಸ್ಮಾರ್ಟ್ ಕೆಲಸದ ಮೂಲಕ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಗೆಲವು ಸಾಧಿಸಬಹುದು ಎಂದರು.
ಈ ಕಾರ್ಯಾಗಾರದಲ್ಲಿ ಒಂದನೇ ಪೆಪರ್ ಪತ್ರಿಕೆ ಯ ತರಬೇತಿಯನ್ನು ಸುಮಾರು 220 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ತರಬೇತಿ ಪಡೆದರು.
ಈ ಸಂದರ್ಭದಲ್ಲಿ ಆಕಾಡೆಮಿಯ ಸಂಸ್ಥಾಪಕ ಅದ್ಯಕ್ಷರಾದ ಪರಶುರಾಮ ಮಲ್ಲಾಪುರ, ಕಾರ್ಯದರ್ಶಿ ಡಾ.ಅರುಣಕುಮಾರ ಬೇರ್ಗಿ, ಖಜಾಂಚಿ ಜಯಪ್ಪ ಗೊರೆಬಾಳ, ಉಪದ್ಯಾಕ್ಷರಾದ ಶಂಕರ್ ಪತ್ತಾರ, ಉಪನ್ಯಾಸಕರಾದ ಶಂಕರ್ ವಾಲಿಕರ್, ದೇವರಾಜ, ಬಸವರಾಜ, ನಾಗರಾಜ ನಾಯಕ ಹೊನ್ನಪ್ಪ ಬೆಳಗುರ್ಕಿ ವಿಶ್ವನಾಥ ರಮೇಶ ಹಲಗಿ ಪ್ರಾಂಶುಪಾಲರಾದ ಆನಂದ ಎಸ್ ನಾಗರಾಜ ಎಮ್.ಪಿ. ಉಪಸ್ಥಿತಿ ಇದ್ದರು.ಈ ಸಂದರ್ಭದಲ್ಲಿ ನೊಬೆಲ್ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು ತರಬೇತಿದಾರರಿಗೆ ಊಟ,ನೀರಿನ ವ್ಯವಸ್ಥೆ ಮಾಡಿದರು. ಶ್ರೀಮತಿ ಚನ್ನಬಸಮ್ಮ ನಿರೂಪಿಸಿದರು.