ಮಸ್ಕಿ : ಪಟ್ಟಣದಲ್ಲಿ ಮಸ್ಕಿ ಬಿಜೆಪಿ ಮಂಡಲದ ವತಿಯಿಂದ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮೂಡ ಹಗರಣದಲ್ಲಿ ಪ್ರಮುಖ ರೂವಾರಿಯಾಗಿರುವ ಹಿನ್ನಲೆಯಲ್ಲಿ ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ
ಮಸ್ಕಿ ಬಿಜೆಪಿ ಪಕ್ಷದ ಕಾರ್ಯಾಲಯದಿಂದ ಅಂಬೇಡ್ಕರ್ ಸರ್ಕಲ್ ವರೆಗೆ ಬೃಹತ್ ಪ್ರತಿಭಟನೆಯನ್ನು ಮಾಡುತ್ತಾ ರಸ್ತೆಯುದ್ದಕ್ಕೂ ಬಿಜೆಪಿ ಕಾರ್ಯಕರ್ತರು,ಮುಖಂಡರು ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗಬೇಕು ಮತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂಬ ಎಂಬ ಘೋಷಣೆಗಳನ್ನು ಮೊಳಗಿಸಿದರು.
ಈ ಪ್ರತಿಭಟನೆಯನ್ನು ಉದ್ದೇಶಿಸಿ ಅಂಬೇಡ್ಕರ್ ವೃತ್ತದಲ್ಲಿ ಜನಪ್ರಿಯ ನಾಯಕರು,ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲ್ ಮಾತನಾಡಿ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ
ಹೈ-ಕೋರ್ಟ್ ಸಿದ್ದರಾಮಯ್ಯನ ಅರ್ಜಿಯನ್ನು ವಜಾ ಮಾಡಿರುವುದು ಸತ್ಯಕ್ಕೆ ನ್ಯಾಯ ಸಿಕ್ಕಂತೆ ಆಗಿದೆ ಎಂದು ಹೇಳಿದರು,ಇನ್ನೂ ಮುಖ್ಯಮಂತ್ರಿ ತನಿಖೆ ಎದುರಿಸಬೇಕು ಹಾಗೂ ತಪ್ಪಿತಸ್ಥರಾಗಿದ್ದರೆ ಜೈಲಿಗೆ ಹೋಗಲೇಬೇಕು ಎಂದು ಹೇಳಿದರು.ಇನ್ನೂ ಮೂಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರದ ಕುರಿತು ಗಂಭೀರ ಆರೋಪಗಳು ಇರುವುದರಿಂದ ಅವರು ಕೂಡಲೇ ರಾಜೀನಾಮೆ ನೀಡುವುದು ನ್ಯಾಯದಾಯಕ ಎಂದು ಒತ್ತಾಯಿಸಿದರು.
ಈ ನಂತರ ಉಗ್ರ ಪ್ರತಿಭಟನೆಯ ಕುರಿತು ಮಾತನಾಡಿದ ಅಪ್ಪಾಜಿಗೌಡ ಮುಖ್ಯಮಂತ್ರಿ ರಾಜೀನಾಮೆ ನೀಡದಿದ್ದರೆ,ರಾಜ್ಯಾದ್ಯಂತ ವ್ಯಾಪಕ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು,ಏಕೆಂದರೆ ಇಂತಹ ಅಧಿಕಾರ ದಾಹದ,ವ್ಯಾಮೋಹದ ನಾಯಕನನ್ನು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಕಂಡಿಲ್ಲ ಎಂದು ಸಿದ್ದರಾಮಯ್ಯ ಅವರನ್ನು ಕಟುವಾಗಿ ಟೀಕಿಸಿದರು.
ತದನಂತರ ಪುರಸಭೆಯ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಯವರು ಮಾತನಾಡಿ
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದಾಗ,ಅವರು ತಕ್ಷಣ ರಾಜೀನಾಮೆ ನೀಡಿದ್ದು,ನ್ಯಾಯಾಲಯಕ್ಕೆ ಗೌರವವಿದೆ ಎಂಬುದನ್ನು ತೋರಿಸಿದರು,ಅದೇ ರೀತಿಯ ಗೌರವವನ್ನು ಸಿದ್ದರಾಮಯ್ಯ ನವರು ತೋರಿಸಿ ನ್ಯಾಯಾಲಯಕ್ಕೆ ಗೌರವ ಕೊಡಿ ಮತ್ತು ತಕ್ಷಣವೇ ರಾಜೀನಾಮೆ ನೀಡಿ,ತನಿಖೆಗೆ ಸಹಕರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದ ಪ್ರತಿಭಟನೆಯಲ್ಲಿ ಪಕ್ಷದ ಹಿರಿಯ ಮುಖಂಡರು,ಮಂಡಲದ ಪದಾಧಿಕಾರಿಗಳು,ವಿವಿಧ ಮೋರ್ಚಾ ಅಧ್ಯಕ್ಷರು,ಪದಾಧಿಕಾರಿಗಳು ಹಾಗೂ ಪುರಸಭೆ ಅಧ್ಯಕ್ಷರು,ಉಪಾಧ್ಯಕ್ಷರು, ಸರ್ವ ಸದಸ್ಯರು,ಬೂತಿನ ಅಧ್ಯಕ್ಷರು ಪಕ್ಷದ ಎಲ್ಲ ಪದಾಧಿಕಾರಿಗಳು ಪಕ್ಷದ ಎಲ್ಲಾ ಸ್ಥರದ ಜವಾಬ್ದಾರಿ ಸ್ಥಾನದವರು,ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ ಎಚ್. ಕೆ. ಬಡಿಗೇರ್