ಸಿಂಧನೂರು ಏ.12 ವಿ.ಸ್ಟಾರ್ ಪ್ಲಸ್ ಸಂಸ್ಥೆಯಿಂದ ಜನರಿಗೆ ಆರೋಗ್ಯ ,ಬದುಕು ಸಾಗಿಸಲು ಉದ್ಯೋಗ ಸೃಷ್ಟಿಸುವ ಕೆಲಸಕ್ಕೆ ವಿ .ಸ್ಟಾರ್ ಪ್ಲಸ್ ಸಂಸ್ಥೆ ಸಂಸ್ಥಾಪಕರಾದ ಅಪ್ಸರ್ ಹಿಂದೂಸ್ಥಾನಿ ಮುಂದಾಗಿದ್ದಾರೆಂದು ಸಮಾಜ ಸೇವಕ ಹಾಗೂ ವಿ ಸ್ಟಾರ್ ಪ್ಲಸ್ ಸಂಸ್ಥೆಯ ಉದ್ಯೋಗಿ ರಮೇಶ ಕುನ್ನಟಗಿ ಹೇಳಿದರು.
ಡಾ.ಅಪ್ಸರ್ ಹಿಂದೂಸ್ಥಾನಿ ವಿಶ್ವಕ್ಕೆ ಆರೋಗ್ಯ ,ಜೀವನ ಶೈಲಿ ಕೊಡುತ್ತಿದ್ದು ,ಸಿಂಧನೂರು ತಾಲೂಕಿನಲ್ಲಿ ಲಕ್ಷಾನುಗಟ್ಟಲೇ ಉದ್ಯೋಗ ಸೃಷ್ಟಿಸಿದ್ದಾರೆ ಅದರಲ್ಲಿ ನಾನು ಒಬ್ಬ .ಅದಲ್ಲದೇ ಅನೇಕ ದೊಡ್ಡ ದೊಡ್ಡ ಸಂಸ್ಥೆಗಳಿಂದ ಹಾಗೂ ಟಿ.ವಿ ಚಾನೆಲ್ ಮಾದ್ಯಮಗಳಿಂದ ಪ್ರಶಸ್ತಿ ಗಳು ನಮ್ಮ ಸಂಸ್ಥೆಯ ಪಾಲಾಗಿವೆ.ಆ ಕಾರಣಕ್ಕಾಗಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಇಂದು ನಮ್ಮ ಸಿಂಧನೂರಿನಲ್ಲಿ ಅತಿಯಾದ ಉರಿ ಬಿಸಿಲಿನ ಹೊಡೆತದಿಂದ ತಪ್ಪಿಸಿಕೊಂಡು ಪ್ರಾಣಿ ಪಕ್ಷಿ ಗಳಿಗೆ ಜೀವ ಉಳಿಸಲು ‘ಮಣ್ಣಿನ ಮಡಿಕೆಗಳನ್ನು ನಗರದಲ್ಲಿ ಗಿಡ ಮರಗಳಿಗೆ ಕಟ್ಟಲಾಗಿದೆ.
ಹಾಗೂ ಸಸಿಗಳ ವಿತರಣೆ ಮಾಡಿ ಸಸಿಗಳನ್ನು ಶ್ರೀ ಗಳಿಂದ ನೆಡಲಾಯಿತು. ನಗರದ ಪಿಡಬ್ಲೂಡಿ ಕ್ಯಾಂಪ್ ಅಮರ ಶ್ರೀ ಆಲದ ಮರದ ಬಳಿ ವಿ ಸ್ಟಾರ್ ಪ್ಲಸ್ ಸಂಸ್ಥೆ ಸಂಸ್ಥಾಪಕರಾದ ಅಪ್ಸರ್ ಹಿಂದೂಸ್ಥಾನಿ ಅವರ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು. ಕರಿಬಸವ ನಗರದ ಶ್ರೀ ಸೋಮನಾಥ ಶಿವಾಚಾರ್ಯ ರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿಗಳನ್ನು ನೆಟ್ಟು ಮಾತನಾಡಿ ಧರ್ಮಕ್ಕಾಗಿ ಬದುಕುವವರು ಒಂದು ರೀತಿಯಾದರೆ ,ನಾನು ಬದುಕಿ ,ನನ್ನ ಜೊತೆ ಲಕ್ಷಾಂತರ ಯುವಕರು ಬೆಳೆದು ಬದುಕು ಕಟ್ಟಿ ಕೊಳ್ಳಬೇಕು ಎಂದು ವಿ ಸ್ಟಾರ್ ಪ್ಲಾಸ್ ಸಂಸ್ಥೆ ಕಟ್ಟಿದ ಅಪ್ಸರ್ ಹಿಂದೂಸ್ಥಾನಿ ಅವರ ಕಾರ್ಯ ಶ್ಲಾಘನೀಯ ಅವರು ಮನಸ್ಸು ಮಾಡಿದರೆ ಯಾವುದಾದರೂ ಕೈಗಾರಿಕೆ ವಲಯದಲ್ಲಿ ಹೋಗಬಹುದಾಗಿತ್ತು ಆದರೆ ಆಯುರ್ವೇದ ಔಷಧಿ ಯನ್ನು ಜಗತ್ತಿನಾದ್ಯಂತ ತಲುಪಿಸುವ ಕೆಲಸ ಇವರಿಂದಾಗುತ್ತಿದೆ .ಆರೋಗ್ಯದ ಜೊತೆ ಉದ್ಯೋಗದ ಸೃಷ್ಟಿಗೆ ಕಾರಣಿಕರ್ತರಾಗಿದ್ದಾರೆಂದು ಆಶಿರ್ವಚನ ನೀಡಿದರು.ನಿರುದ್ಯೋಗ ಯುವಕರಿಗೆ ಉದ್ಯೋಗ ಕೊಡುವುದರ ಜೊತೆಗೆ ಪ್ರಾಣಿ – ಪಕ್ಷಿಗಳಿಗೆ ನೀರುಣಿಸುವ ಸಮಾಜ ಮುಖಿಕಾರ್ಯಕ್ಕೆ ಮುಂದಾಗಿರುವುದು ನಿಜಕ್ಕೂ ಮಾದರಿ ಹಾಗೂ ಅರ್ಥಗರ್ಭಿತ ಎಂದು ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷ ಅಮರೇಗೌಡ ಮಲ್ಲಾಪುರ ಹೇಳಿದರು.
ಇದೇ ಸಂದರ್ಭದಲ್ಲಿ ವಿ ಸ್ಟಾರ್ ಸಂಸ್ಥೆಯ ಸುಜತಾ ಪಾಟೀಲ್ , ಅಮರೇಶ ಪಾಟೀಲ್ ,ಶಂಕ್ರಗೌಡ ಎಲೆ ಕೂಡ್ಲಿಗಿ ,ರಹಿಮತ್ ಅಲಿ, ಬಸವರಾಜ , ಪಾರ್ವತಮ್ಮ ,ಶಾಶ್ವತ ಸೇರಿದಂತೆ ಅನೇಕರಿದ್ದರು.