ಏಪ್ರಿಲ್ 21 ವ್ ಸಿರುಗುಪ್ಪ: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಪೊಲೀಸ್ ಠಾಣೆಯ ಸಿಪಿಐ ಸುಂದ್ರೇಶ್ ಹೊಳೆಣ್ಣನವರ್ ಹಾಗೂ ಪಿ.ಎಸ್ಐಗಳಾದ ಅರುಣ್ ಕುಮಾರ್ ರಾಥೋಡ್ ಹಾಗೂ ಸಂಗಮೇಶ್ವರಿ ಇವರುಗಳ ನೇತೃತ್ವದಲ್ಲಿ ರಂಜಾನ್ ಹಬ್ಬದ ಶಾಂತಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಸಿಪಿಐ ಸುಂದ್ರೇಶ್ ಹೊಳೆಣ್ಣನವರ್ ಮಾತನಾಡಿದ ನಾವೆಲ್ಲರೂ ಐಕ್ಯತೆಯಿಂದ ಬಾಳೋಣ. ನಮ್ಮ ನಮ್ಮಲ್ಲಿ ಮನಸ್ತಾಪ ಬೇಡ ಯಾವುದೇ ಹಬ್ಬ ಇದ್ದರೂ ಸರಿ, ಒಂದೇ ಭಾವನೆಯಿಂದ ಶಾಂತಿ ಯಿಂದ ಹಬ್ಬಗಳನ್ನು ಆಚರಿಸಬೇಕು. ಅನ್ಯತಾ ವಿಷಯಕ್ಕೆ ಕೈ ಹಾಕಬಾರದು, ನೀವು ಯಾವುದೇ ಹಬ್ಬಗಳನ್ನು ಆಚರಿಸಿದರೂ ತಮ್ಮ ಇಲಾಖೆ ನಿಮ್ಮ ಸೇವೆಗೆ ಸದಾ ಸನ್ನದಾಗಿದೆ. ಎಂದು ಹೇಳಿದರು.
ಈ ಸಭೆಯಲ್ಲಿ ಮುಸ್ಲಿಂ ಮುಖಂಡರು ಎನ್.ಖಾದರ್ ಭಾಷಾ, ಎಂ.ಮಾಬುಸಾಬ್, ಎಂ ಸಾಧಕಲಿ, ಎಲೆಗಾರ್ ಖಾದರ್ ವಲಿ, ಸೈಯದ್ ರಜಾಕ್ ಖಾದ್ರಿ, ರಹಿಮಾನ್ ಚೌದರಿ, ಇನ್ನು ಮುಂತಾದ ಮುಖಂಡರು ಉಪಸಿದ್ಧರು