ಆಗಸ್ಟ್ 28.ನೊಬೆಲ್ ಪದವಿ ಮಹಾವಿದ್ಯಾಲಯದ ವತಿಯಿಂದ ಗೊರೇಬಾಳ ಗ್ರಾಮದಲ್ಲಿ ಹಮ್ಮಿಕೊಂಡಿರುವಂತಹ ದಿನಾಂಕ 27.08.2023 ರಂದು ನಡೆದ ಐದನೆಯ ದಿನ ಎನ್.ಎಸ್.ಎಸ್. ವಿಶೇಷ ವಾರ್ಷಿಕ ಶಿಬಿರದಲ್ಲಿ ವಿಶೇಷ ಉಪನ್ಯಾಸಕರಾಗಿ ಶರಣಪ್ಪ ಹೊಸಳ್ಳಿ ಕನ್ನಡ ಉಪನ್ಯಾಸಕರು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಸಿಂಧನೂರು.
ಕೇವಲ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮಾತ್ರ ಸ್ಪರ್ಧೆ ಇಲ್ಲಾ, ಪ್ರತಿಯೊಬ್ಬರ ಜೀವನದಲ್ಲೂ ಸ್ಪರ್ಧೆ ಇದೆ ಎಂದು ಮಾತನ್ನು ಆರಂಬಿಸಿದ ಅವರು ಆಶವಾದಿಯವದವನು ಪ್ರತಿಯೊಂದು ಕಷ್ಟದಲ್ಲಿ ಅವಕಾಶವನ್ನು ಪಡೆಯುತ್ತಾನೆ, ನೀವೂ ಒಬ್ಬ ಪೈಂಟರ್ ಆಗಿದ್ರೆ, ಒಬ್ಬ ಒಳ್ಳೇ ಪೇಂಟರ್ ಆಗಿ ಹಾಗೆ ನೀವೂ ಯಾವುದೇ ಕೆಲಸ ಮಾಡಿದರು ಕೂಡ ಎಲ್ಲರಿಗಿಂತ ಶ್ರೇಷ್ಠವಾಗಿ, ಡಿಫರೆಂಟ್ ಆಗಿ ಮಾಡಿದ್ರೆ ನೀವೂ sucess ಆಗ್ತೀರಿ. ನೀವೂ ನಿರಂತರವಾಗಿ ಪ್ರತಿದಿನ ಪಠ್ಯಕ್ರಮ, ಪ್ರಶ್ನೆ ಪತ್ರಿಕೆಗಳನ್ನು ರೆಫರ್ ಮಾಡಿ ಓದಿದ್ದೆ ಆದ್ರೆ ಐಎಎಸ್ ಪಾಸ್ ಮಾಡಬಹುದು ಎಂದು ಸಲಹೆ ನೀಡಿದ್ದಲ್ಲದೆ. ಅಧಿಕೃತ ಪುಸ್ತಕಗಳನ್ನು, ಅಧಿಕೃತ ವೆಬ್ ಸೈಟ್ ನ್ನೂ ರೆಫೆರ್ ಮಾಡಿ ಓದಬೇಕು. ಆಗೇ ಆಗುತ್ತೇನೆ ಎಂಬ ಆತ್ಮ ವಿಶ್ವಾಸದಿಂದ, ಧೃಡಮನಸ್ಸಿನಿಂದ ಓದಬೇಕು ಎಂದು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿ ಡಾ. ಎಸ್. ಶಿವರಾಜ ಪ್ರಾಂಶುಪಾಲರು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಸಿಂಧನೂರು ಇವರು ಸೌಹಾರ್ದತೆ ಮತ್ತು ಸಹಕಾರ ಈ ಎರಡನ್ನೂ ಕಲಿಸುವುದೇ ಎನ್ ಎನ್ ಎಸ್. ಇಂದು ಭಾರತದ ಸೌಹಾರ್ದತೆ ಕೆಡುತಾ ಇದೆ ಇದನ್ನು ಸರಿಪಡಿಸಲು ಎನ್ ಎನ್ ಎಸ್ ನಿಂದ ಮಾತ್ರ ಸಾಧ್ಯತೆ ಇದೆ. ನಿಮ್ಮ ಮನಸ್ಸು, ನಿಮ್ಮ ಮನೆ, ನಿಮ್ಮ ಮನೆಯ ಸುತ್ತ ಮುತ್ತ ಸ್ವಚ್ಚ ಮಾಡಿದ್ರೆ ಅದೇ ಎನ್ ಎನ್ ಎಸ್, ಹೀಗೆ ಎಲ್ಲರೂ ಮಾಡಿದ್ರೆ ಇಡೀ ದೇಶವೇ ಸ್ವಚ್ಚ ಆಗುತ್ತೆ ಎಂದು ಹೇಳಿದರು
ಅದೇ ರೀತಿಯಾಗಿ ಇನ್ನೋರ್ವ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ ಆರ್ ಸಿ ಪಾಟೀಲ್ ಕಾರ್ಯದರ್ಶಿಗಳು ಪಾಟೀಲ್ ಶಿಕ್ಷಣ ಸಂಸ್ಥೆ ರವರು ಪ್ರಯತ್ನದ ಜೊತೆಗೆ ಅದೃಷ್ಟವೂ ಬೇಕು ಸ್ವಾರ್ಥ ವಿಲ್ಲದೆ ಬದುಕಲು ಕಲಿಸುವುದೇ ಎನ್ ಎಸ್ ಎಸ್,
ನನ್ನ ಜೀವನದಲ್ಲೂ ಕೂಡ ಎನ್ ಎಸ್ ಎಸ್ ಪ್ರಮುಖ ಪಾತ್ರ ವಹಿಸಿದೆ. ಶಿಭಿರದ ವಿದ್ಯಾರ್ಥಿಗಳನ್ನು ರಾಜ್ಯ, ರಾಷ್ಟ್ರ ಮಟ್ಟದ ನಾಯಕರನ್ನು ಬೇಳಿಸುತ್ತೆ, ಇದು ಉದ್ಯೋಗ ಹುಡುಕುವಂತೆ ಮಾಡುವುದಿಲ್ಲ, ನಾಲ್ಕು ಜನರಿಗೆ ಉದ್ಯೋಗ ಕೊಡುವುದನ್ನು ಕಲಿಸುತ್ತದೆ, ಎನ್ ಎಸ್ ಎಸ್ ವಿದ್ಯಾರ್ಥಿಯು ದೇಶದ ಉತ್ತಮ ನಾಗರಿಕನಾಗುತ್ತಾನೆ ಇದರಲ್ಲಿ ನನಗೆ ಯಾವುದೇ ಸಂಶಯವಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ರವಿ ಸಾಸಲಮರಿ ಸಮಾಜಶಾಸ್ತ್ರ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ಅಲ್ಲಬನೂರು ಮಾತನಾಡಿ
371 J ಕಾಲಂ ನಮ್ಮ ಭಾಗದಲ್ಲಿ ಹಲವಾರು ಕುರಿತು ಉಪನ್ಯಾಸ ನೀಡಲು ನಾವು ಮುಂದಾಗಬೇಕು, ಯಾಕೆಂದರೆ ನಾವು ಈ ಭಾಗದಲ್ಲಿ ಸರ್ಕಾರಿ ಹುದ್ದೆಗಳನ್ನು ಪಡೆದುಕೊಳ್ಳುವಲ್ಲಿ ಬಹಳ ಪಾತ್ರ ವಹಿಸುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ
ಹನುಮಂತ ರೆಡ್ಡಿ ವಾಣಿಜ್ಯಶಾಸ್ತ್ರ ಉಪನ್ಯಾಸಕರು ಅಧ್ಯಕ್ಷತೆಯನ್ನು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ದೊಡ್ಡಮನೆ ಶರಣೇಗೌಡ,ಅಮರೇಶಗೌಡ ಮಾವಿನಮಡುಗು, ಬೀರಪ್ಪ ಶಂಬೋಜಿ, ಶಿವರಾಜ ಅಡಗಲ್ ಆಂಗ್ಲ ಭಾಷೆ ಉಪನ್ಯಾಸಕರು ಸ.ಪ.ಪೂ.ಕಾಲೇಜು ಅಲಬನೂರು, ಮಲ್ಲನಗೌಡ ಬೆಳಗುರ್ಕಿ,ಯಂಕನಗೌಡ ಗೌಡ್ರು ತಂದೆ ಶಿವನಗೌಡ ಗೌಡ್ರು,ಸಿದ್ದಲಿಂಗೇಶ ನೆಟೆಕಲ್ ಮಾಲೀಕರು ಅಕ್ಷಯಾಂಬರ ಟ್ರೇಡರ್ಸ್,ನಾಗಮ್ಮಗಂಡಬೀರಪ್ಪ ಕಪಗಲ್ ಗ್ರಾ. ಪಂ. ಸದಸ್ಯರು,ಅಂಬಮ್ಮ ಗಂಡ ದಿ. ಆದಯ್ಯ ಸ್ವಾಮಿ ಗ್ರಾ. ಪಂ. ಸದಸ್ಯರು,ಅಮರೇಶ ಕೊಂತೂರು ನಿರ್ದೆಶಕರವಿ.ಎಸ್.ಎಸ್.ಎನ್, ಸೋಮನಗೌಡ ಇಂಗಳಿಗೆ,
ಚಂದ್ರಶೇಖರ ಯರಿದಿಹಾಳ ವರದಿಗಾರರು, ಉದಯಕಾಲ ದಿನಪತ್ರಿಕೆ,ಖಾಜಬಂದೇನವಾಜ್ ವರದಿಗಾರರು, ಟಿ.ವಿ. ಮಾದ್ಯಮ, ಪ್ರಾಂಶುಪಾಲರಾದ ಆನಂದ ಎಸ್, ಎನ್ ಎಸ್ ಎಸ್ ಅಧಿಕಾರಿಗಳಾದ ಹೊನ್ನಪ್ಪ ಬೆಳಗುರ್ಕಿ,ಉಪನ್ಯಾಸಕರಾದ ಶ್ರೀಮತಿ ಗಿರಿಜಾ,ಅಮರೇಶ ರೌಡಕುಂದ,ಮೌಲಸಾಬ,ನರೇಶ ಭಾಗವಹಿಸಿದ್ದರು.