ಜುಲೈ 01. ಸಿಂಧನೂರಿನ ಶ್ರೀ ಆದಿತ್ಯ ಪದವಿ ಪೂರ್ವ ಕಾಲೇಜಿನಲ್ಲಿ ಕದಂಬ ಕೆ.ಎ.ಎಸ್ ಅಕಾಡೆಮಿಯ.4ನೇ ಬ್ಯಾಚ್ ಉದ್ಘಾಟನಾ ಸಮಾರಂಭದಲ್ಲಿ ಪ್ರೇರಣೆಯ ವಾಕ್ಯವನ್ನು ಕಪ್ಪು ಹಲಗೆ ಮೇಲೆೆ ಬರೆಯುವ ಮೂಲಕ , ಶ್ರೀ ಆದಿತ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದಂತಹ, ಶ್ರೀ ಸುರೇಶ್ ರೆಡ್ಡಿ ಅವರು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮಲ್ಲಿ ಉನ್ನತವಾದ ಗುರಿಗಳು ಶ್ರೇಷ್ಠವಾದ ಚಿಂತನೆ, ಉನ್ನತವಾದ ಆಲೋಚನೆಗಳು ವ್ಯಕ್ತಿಯನ್ನು ಉತ್ತಮ ಮಟ್ಟದಲ್ಲಿ ಇರಿಸುತ್ತವೆ.ದೊಡ್ಡ ಕನಸು ಕಾಣುವುದಕ್ಕಿಂತ ದೊಡ್ಡ ಗುರಿಯನ್ನು ಹೊಂದಿರುವುದು ತುಂಬಾ ಮುಖ್ಯವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶ್ರೀ ಶಂಕರ್ ವಾಲಿಕಾರ, ಪ್ರಧಾನ ನಿರ್ದೇಶಕರು ಕದಂಬ ಅಕಾಡೆಮಿ,ಅಧ್ಯಕ್ಷಿಯ ನುಡಿಯಲ್ಲಿ ಅಭ್ಯರ್ಥಿಗಳು ಕೇವಲ ಸರಕಾರಿ ನೌಕರಿಯನ್ನ ಪಡೆಯುವುದು ಮಾತ್ರವಲ್ಲದೆ ಸತ್ಯ ಮತ್ತು ಪ್ರಾಮಾಣಿಕತೆಯಿಂದ ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಭ್ರಷ್ಟಾಚಾರ ತೊಲಗಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕೆಂದು ಸ್ಪರ್ಧಾರ್ಥಿಗಳಿಗೆ ಮನವರಿಕೆ ಮಾಡಿದರು.
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ರಮೇಶ್ ಹಲಗಿ ಪ್ರಾಸ್ತಾವಿಕ ಮಾತುಗಳಾಡಿದರು ಶರಣುಕುಮಾರ್ ಹಲಗಿ ಸ್ವಾಗತಿಸಿದರು ಜಡಿ ಸ್ವಾಮಿ ಗುಡದೂರು ಮಾರುತಿ ಸೋಮಲಾಪುರ್ ತಾಯಪ್ಪ ತಿಡಿಗೋಳ್ ಆಂಜನೇಯ ಹಾಗೂ ಅಕಾಡೆಮಿಯ ನಿರ್ದೇಶಕರು ಮತ್ತು ಸ್ಪರ್ಧಾರ್ಥಿಗಳು ಉಪಸ್ಥಿತರಿದ್ದರು ಶ್ರೀಮತಿ ಶ್ರುತಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು ತಾಯಪ್ಪ ತಿಡಿಗೋಳ ವಂದಿಸಿದರು.