ಹೊಸಪೇಟೆ: ಏ.03 ಉತ್ತರ ಕರ್ನಾಟಕ ಭಾಗ ಇತ್ತೀಚಿಗೆ ಬೆಳ್ಳಿ ಪರದೆಯ ಮೇಲೂ ಕಮಾಲ್ ಮಾಡುತ್ತಿದೆ. ಈ ಭಾಗದ ಅನೇಕ ನಿರ್ದೇಶಕರು ನಿರ್ಮಾಪಕರು ಮತ್ತು ಕಲಾವಿದರು ಸತತ ಪರಿಶ್ರಮದ ಮೂಲಕ ದೂರದ ಬೆಂಗಳೂರಲ್ಲೂ ತಮ್ಮ ಚಾಪು ಮೂಡಿಸುತ್ತಿದ್ದಾರೆ…ಇದಕ್ಕೆ ತಾಜಾ ಉದಾಹರಣೆ ಶುಕ್ರವಾರ ನಗರದ ಕಾಲೇಜ್ ಗ್ರೌಂಡನಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಹಾಗು ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಮಂಜಮ್ಮ ಜೋಗತಿಯವರು ನಟಸಿರುವ, ಈ ಭಾಗದ ಪ್ರತಿಭಾವಂತ ಚಲನಚಿತ್ರ ನಿರ್ದೇಶಕ ಅಶೋಕ್ ಜಯರಾಮ್ ಅವರ ದಕ್ಷ ನಿರ್ದೇಶನದ ಚಲನಚಿತ್ರ “ಶಿವಲೀಲಾ” ಮಂಗಳ ಮುಖಿಯರ ಜೀವನ ಚರಿತೆ ಹಾಗು ಅವರು ಸಮಾಜದಲ್ಲಿ ಅನುಭವಿಸುವ ಶೋಷಣೆಯ ಕಥಾಹಂದರದ, ಜತೆಗೆ ಕಾಮಿಡಿ, ರೋಮ್ಯಾಂಟಿಕ್ ಸೀನ್ಸ್, ಸೆಂಟಿಮೆಂಟ್ ಪರಿಪೂರ್ಣತೆಯುಳ್ಳ ಸದಭಿರುಚಿಯ ಚಿತ್ರದ ಟೀಜರ್ ಲಾಂಚ್ ಹೊಸಪೇಟೆಯಲ್ಲಿ ನೆರೆದ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು. ಒಂದು ಕ್ಷಣ ಮೈನವಿರೇಳುವಂತೆ ಮಾಡಿತು.
ಅದ್ಧೂರಿಯಾಗಿ ಜರುಗಿದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಸಚಿವರಾದ ಆನಂದ್ ಸಿಂಗ್ ಅವರ ಪುತ್ರ ಸಿದ್ದಾರ್ಥ ಸಿಂಗ್ ಭಾಗವಹಿಸಿ ಮಂಜಮ್ಮ ಜೋಗತಿಯವರ ಪಾದಪೂಜೆ ಮಾಡುವ ಮೂಲಕ ಮಂಗಳಮುಖಿಯರಲ್ಲಿ ಪೂಜ್ಯ ಭಾವನೆ ತಾಳುವಂತೆ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಿದರು…ಮಂಗಳಮುಖಿಯರ ದಿನದಂದೆ ಆಯೋಜಿಸಿದ್ದ ಈ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿತ್ತು.
ಈ ಸಂದರ್ಭದಲ್ಲಿ ನಿರ್ದೇಶಕ ಅಶೋಕ್ ಜಯರಾಮ್ ಮಾತನಾಡಿ, ಚಿತ್ರ ಆರಂಭಿಸಿದಾಗ ಕೇವಲ ನಾಲ್ಕು ಜನರಿದ್ದೆವು, ಈಗ ಚಿತ್ರಕ್ಕೆ ಸಾವಿರಾರು ಜನ ಜತೆಯಾಗಿದ್ದಾರೆ. ಒಟ್ಟಾರೆ ಒಂದುವರೆ ಸಾವಿರ ಕಲಾವಿದರು ಈ ಚಿತ್ರದಲ್ಲಿ ಪಾಲ್ಗೊಳ್ಳಲಿದ್ದು, ದೇಶದ ಅಷ್ಟು ರಾಜ್ಯಗಳ ಮಂಗಳ ಮುಖಿಯರು ಪಾಲ್ಗೊಳ್ಳಲಿದ್ದಾರೆ, ಚಿತ್ರ ತಂಡ ನೂರು ಜನರ ಟೀಮ್ ಹೊಂದಿದೆ, ಚಿತ್ರಕಥೆ, ಕಥೆ, ಸಂಭಾಷಣೆ, ಸಾಹಿತ್ಯ, ಸಾಹಸ, ನೃತ್ಯ ಚಿತ್ರದ ಬಹುಪಾಲು ನಾನೇ ಕೆಲಸ ಮಾಡುತ್ತಿದ್ದೇನೆ. ಕಳೆದ ಎಂಟು ತಿಂಗಳಿಂದ ಚಿತ್ರದ ಶೂಟಿಂಗ್ ನಡೆಸುತ್ತಿದ್ದು, ಇನ್ನೂ ನಾಲ್ಕು ತಿಂಗಳಲ್ಲಿ ತೆರೆಗೆ ಬರಲಿದೆ.
ಒಂದುವರೆ ಕೋಟಿ ರು ಬಜೆಟ್ ನ ಈ ಚಿತ್ರದಲ್ಲಿ ಮಂಜಮ್ಮ ಜೋಗತಿ ಮುಖ್ಯಪಾತ್ರದಲ್ಲಿ, ಸಮಾಜ ಸೇವಕ ಸಿದ್ಧಾರ್ಥ ಆನಂದ್ ಸಿಂಗ್ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದು ನಾಯಕನಾಗಿ ಆರ್ಯನ್, ನಾಯಕಿಯಾಗಿ ಪಂಕಜ ರವಿಶಂಕರ್, ಟೆನ್ನಿಸ್ ಕೃಷ್ಣ, ಪ್ರೇಮಾ, ಸುಧಾರಾಣಿ, ತಾರಾ ಸೇರಿದಂತೆ ಅನೇಕರನ್ನು ಚಿತ್ರದಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಚೊಚ್ಚಲ ಚಿತ್ರ ಇದಾಗಿದ್ದು ಐದು ಭಾಷೆಗಳಲ್ಲಿ ಬಿಡುಗಡೆಗೊಳಿಸುವ ಉದ್ದೇಶ ಹೊಂದಿದೇವೆ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಕ್ಕೆ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.
ಸುಮಾರು ಐವತ್ತಕ್ಕೂ ಹೆಚ್ಚು ಮಂಗಳಮುಖಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕೇಕ್ ಕತ್ತರಿಸಿ ಪರಸ್ಪರ ಸಿಹಿ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶಿವಲೀಲಾ ಚಿತ್ರತಂಡ ಅವಕಾಶ ಒದಗಿದ್ದು ಪ್ರತಿಭೆ ಅನಾವರಣಕ್ಕೆ ಮುಖ್ಯ ವೇದಿಕೆ ದೊರಕಿಸಿ ಕೊಟ್ಟಂತ್ತಾಗಿತ್ತು.
ವೇದಿಕೆಯಲ್ಲಿದ್ದ ನಟಿ ಪಂಕಜ ರವಿಶಂಕರ್ ಮಾತನಾಡಿ, ಶಿವಲೀಲಾ ಚಿತ್ರ ನಿರ್ದೇಶಕ ಹಾಗು ತಂಡದ ಪರಿಶ್ರಮಕ್ಕೆ ಗೆಲುವು ದಕ್ಕಬೇಕಾದರೆ ಚಿತ್ರವೀಕ್ಷಿಸಿ, ಪ್ರಚಾರ ಮಾಡಲು ಮನವಿ ಮಾಡಿದರಲ್ಲದೆ ಸರಕಾರ ಸೂಕ್ತ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದ ಕೇಂದ್ರಬಿಂದು ಮಂಜಮ್ಮ ಜೋಗತಿ ಮಾತನಾಡಿ, ಹಲವು ಸವಾಲು, ಸಂಕಷ್ಟಗಳನ್ನು ಎದುರಿಸುತ್ತಿರುವ ಮಂಗಳ ಮುಖಿಯರ ಕುರಿತು ಸರಕಾರ, ಸಂಘ ಸಂಸ್ಥೆಗಳು ಕಣ್ ತೆರೆಯಬೇಕಿತ್ತು ಆದರೆ ಅದಾಗಲಿಲ್ಲ. ಶಿವಲೀಲಾ ಚಿತ್ರದ ನಿರ್ದೇಶಕ ಅಶೋಕ್ ಜಯರಾಮ್ ಅವರು ಮನಮಿಡಿಯುವಂತೆ ಕಟ್ಟಿಕೊಟ್ಟಿರುವ ಈ ಕಥೆ ಜಗತ್ತಿನ ಕಣ್ಣು ತೆರೆಸಲಿದೆ. ವಿಶ್ವದಲ್ಲೇ ಮಂಗಳ ಮುಖಿಯರ ಕುರಿತಾದ ಅದ್ಭುತ ಚಿತ್ರ ಇದಾಗಲಿದೆ. ಸಮಾಜದಲ್ಲಿ ನಮಗು ಬದುಕಲು ಅವಕಾಶ ಕಲ್ಪಿಸಿಕೊಡಿ ಎನ್ನುವ ಸಂದೇಶವುಳ್ಳ ಈ ಚಿತ್ರ ಎಲ್ಲರ ಮನ ಗೆಲ್ಲಲಿದೆ. ಕನ್ನಡಿಗರು ಕುಟುಂಬ ಸಮೇತ ಚಿತ್ರವೀಕ್ಷಿಸಿ…
ಶುಭಕಾರ್ಯಗಳಿಗೆ ಅಗತ್ಯ ಮಂಗಳ ಮುಖಿಯರ ಬಾಳಲ್ಲಿ ಹೊಸ ದಿಸೆ ತೋರಿಸಬೇಕಿದ್ದು.. ಪ್ರತಿಭಾವಂತ ನಿರ್ದೇಶಕ, ನಟ ಸುರೇಶ್ ಜಯರಾಮ್ ಅವರ ಪ್ರಯತ್ನಕ್ಕೆ ಜೊತೆಯಾಗಿ ನಿಲ್ಲಿ ಎಂದು ಮನವಿ ಮಾಡಿದರು. ನಂತರ ಜರುಗಿದ ಸ್ಥಳೀಯ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿತು.
ಒಟ್ಟಾರೆ ನಿರ್ದೇಶಕ ಅಶೋಕ್ ಜಯರಾಮ್ ಅವರ ಪ್ರಯತ್ನ, ವಿಶಿಷ್ಟ ಯೋಚನೆ, ಭಿನ್ನ ನಿರ್ದೇಶನಾ ಶೈಲಿ ಕನ್ನಡ ಚಿತ್ರರಂಗವನ್ನೊಮ್ಮೆ ತಿರುಗಿ ನೋಡುವಂತೆ ಮಾಡಲಿದೆ ಎನ್ನುವುದು..ಕಾರ್ಯಕ್ರಮದ ಮೂಲಕ ಸಾಬೀತಾಯಿತು ಹಳೆಯ ಕಥಾ ಸರಕಿನಲ್ಲೆ ಹೊರಳಾಡುವ ಕೆಲವರಿಗೆ ಈ ಚಿತ್ರ ಹೊಸ ದಾರಿ ತೋರಿಸಲಿದೆ ಎನ್ನುವುದರಲ್ಲಿ ಎರಡುಮಾತಿಲ್ಲ…