ರಾಯಚೂರು,ಮೇ 17 ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ, ಕೂಲಿಕಾರರಿಗೆ ಕೆಲಸ ಒದಗಿಸಲಾಗುತ್ತಿದೆ, ಅಲ್ಲದೇ ಅವರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ, ಕಾಮಗಾರಿ ಸ್ಥಳಗಳಲ್ಲಿ ಆರೋಗ್ಯ ಶಿಬಿರಗಳನ್ನು ಅಯೋಜಿಸಿ, ಅವರಿಗೆ ರಕ್ತದ ಒತ್ತಡ, ಶುಗರ್, ಹೆಚ್.ಐ.ವಿ, ರಕ್ತ ಪರೀಕ್ಷೆ, ಕಣ್ಣಿನ ಪರೀಕ್ಷೆ ಇನ್ನು ಮುಂತಾದ ಪರೀಕ್ಷೆಗಳನ್ನು ಏಕ ಕಾಲಕ್ಕೆ ಎಲ್ಲಾ ಅರೋಗ್ಯ ಅಧಿಕಾರಿಗಳು, ಸಿಬ್ಬಂದಿಯವರೊಂದಿಗೆ ಸೌಲಭ್ಯ ಒದಗಿಸಲಾಗುತ್ತಿದೆ. ಎಂದು ಐಇಸಿ ಸಂಯೋಜಕ ಧನರಾಜ ಹೇಳಿದರು.
ರಾಯಚೂರು ತಾಲೂಕಿನ ಹಿರಾಪೂರು ಗ್ರಾಮದಲ್ಲಿ ಏಣಿ ತಿಮ್ಮಪ್ಪ ಗುಡ್ಡದಲ್ಲಿ ಕಂದಕ ಬದುಗಳ ನಿರ್ಮಾಣ ಕಾಮಗಾರಿ ಸ್ಥಳದ ಪಕ್ಕಪಕ್ಕದಲ್ಲಿರುವ ಏಣಿ ತಿಮ್ಮಪ್ಪ ದೇವಸ್ಥಾನ ಅವರಣದಲ್ಲಿ ಹಮ್ಮಿಕೊಂಡಿದ್ದ ನರೇಗಾ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಉತ್ತಮವಾದ ಸೌಲಭ್ಯವನ್ನು ಎಲ್ಲಾ ಕೂಲಿಕಾರರು ತಪ್ಪದೇ ಪಡೆದುಕೊಳ್ಳಲು ಮನವಿ ಮಾಡಿದರು. ಮತ್ತು ಏಪ್ರಿಲ್ ತಿಂಗಳಿನಿAದ 309 ರಿಂದ 316/- ಹೆಚ್ಚಿಸಲಾಗಿದೆ. ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ಕೂಲಿ ಹಣವನ್ನು ನೀಡಲಾಗುವುದರ ಜೊತೆಗೆ, ಕಲ್ಬುರ್ಗಿ ಮತ್ತ ಬೆಳಗಾವಿ ವಿಭಾಗದ ಜಿಲ್ಲೆಗಳಿಗೆ ಅನ್ವಯಿಸುವಂತೆ,ಬೆಸಿಗೆ ತಾಪಮಾನದ ಪರಿಣಾಮವಾಗಿ, ಕೂಲಿಕಾರರ ಹಿತದೃಷ್ಟಯಿಂದ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಕೆಲಸ ಪರಿಮಾಣದಲ್ಲಿ ಶೇ 30% ರಷ್ಟು ರಿಯಾಯ್ತಿ ನೀಡಿದೆ. ಜೊತೆಗೆ ವೈಯಕ್ತಿಕ ಕಾಮಗಾರಿಗಳ ಸೌಲಭ್ಯಗಳನ್ನು ಪಡೆದುಕೊಳ್ಳಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಿಡಿಒ ಮಹೇಶ್ವರಿ, ಜಿಐಎಸ್ ಪರಿಣಿತ ಜಗದೀಶ್, ರಾಮಕೃಷ್ಣ, ಈರಣ್ಣ, ಮಾರೆಪ್ಪ, ರಂಗನಾಥ, ಕೃಷ್ಣವೇಣಿ ಸೇರಿದಂತೆ ನರೇಗಾ ಮೇಟ್ ಕೂಲಿಕಾರರು ಉಪಸ್ಥಿತರಿದ್ದರು.