ಸೆಪ್ಟೆಂಬರ್ 05. ರಾಯಚೂರು ಜಿಲ್ಲೆಯ ಮಾನ್ವಿಯ ಶಾಲಾ ವಾಹನ ಮತ್ತು ಕೆಎಸ್ಆರ್ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದರಿಂದ ಮೂರು ಮಕ್ಕಳ ಕಾಲು ಕಟ್ ಆಗಿ ಹಲವರಿಗೆ ಗಂಭೀರ ಗಾಯಗಳಾ ಗಿರುವ ಘಟನೆ ಮಾನವಿ ತಾಲೂಕಿನ ಕಪಗಲ್ನ ಹಳ್ಳದ ಬಳಿ ಘಟನೆ ನಡೆದಿದೆ.
ಶಾಲಾ ವಾಹನವು ಮಾನವಿ ಪಟ್ಟಣದ ಲೋಯೋಲಾ ಶಾಲೆಗೆ ಸೇರಿದೆ ಎನ್ನಲಾಗಿದೆ ಮಕ್ಕಳನ್ನು ಕರೆದುಕೊಂಡು ಶಾಲೆಗೆ ತೆರಳುತ್ತಿದ್ದ ಶಾಲಾ ವಾಹನಕ್ಕೆ ಮಾನವಿ ಪಟ್ಟಣದಿಂದ ರಾಯಚೂರು ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮುಖಾಮುಖಿ ಡಿಕ್ಕಿ ಯಾಗಿದೆ ಪರಿಣಾಮ ಮೂರು ಜನ ವಿದ್ಯಾರ್ಥಿ ಗಳ ಕಾಲು ಮುರಿದು ಹೋಗಿದ್ದು ಶಾಲಾ ವಾಹನದಲ್ಲಿ ಇರುವ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿದ್ಯಾರ್ಥಿಗಳ ಹೆಸರು ತಿಳಿದು ಬಂದಿಲ್ಲ, ಸ್ಥಳಕ್ಕೆ ಮಾನವಿ ಪೋಲಿಸ್ ಠಾಣೆ ಪೋಲಿಸರು ಹಾಗೂ ಸ್ಥಳೀಯರ ಸಹಕಾರದಿಂದ ವಿದ್ಯಾರ್ಥಿ ಗಳನ್ನು ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಈ ಕುರಿತು ಮಾನವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.