ಏಪ್ರಿಲ್ 15.ದೇವದುರ್ಗ ತಾಲೂಕಿನ ಆಲ್ಕೋಡ್ ಗ್ರಾಮದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಇಂದು ವನಸಿರಿ ಫೌಂಡೇಶನ್ ವತಿಯಿಂದ ಪಕ್ಷಿಗಳಿಗಾಗಿ ಕಾಳು ಮತ್ತು ನೀರುಣಿಸುವ ಕಾರ್ಯ ಪ್ರಾಂಶುಪಾಲರಾದ ಶ್ರೀ ಭೀಮರಾಯ ಪಾಟೀಲ ಸರ್ ಅಧ್ಯಕ್ಷತೆಯಲ್ಲಿ ಆಯೋಜಿಸಿ ಯಶಸ್ವಿಗೊಳಿಸಲಾಯಿತು.
ಇದೇ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಭೀಮರಾಯ ಪಾಟೀಲ ಅವರು ಮಾತನಾಡಿ ವನಸಿರಿ ಫೌಂಡೇಶನ್ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಗಿಡಮರಗಳನ್ನು ಬೆಳೆಸುವುದು,ರಕ್ಷಣೆ ಮಾಡುವುದು,ಹುಟ್ಟು ಹಬ್ಬ ಹಾಗೂ ಇತರೆ ಸಭೆ ಸಮಾರಂಭಗಳಲ್ಲಿ ಸಸಿಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಸಾರ್ವಜನಿಕರಿಗೆ ಪರಿಸರ ಜಾಗೃತಿ ಮೂಡಿಸುವುದು,ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವುದು ಹೀಗೆ ಹತ್ತು ಹಲವು ಕಾರ್ಯಗಳನ್ನು ಮಾಡುತ್ತಿದ್ದಾರೆ ಅವರ ಕಾರ್ಯ ತುಂಬಾ ಶ್ಲಾಘನೀಯ. ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರು ಅಧುನಿಕತೆಗೆ ಮಾರುಹೋಗಿ ಎಪ್ರೀಲ್ ತಿಂಗಳಲ್ಲಿ ಮೋಜು ಮಸ್ತಿಗೆ ಜಾರುತ್ತಿರುವುದು ವಿಪರ್ಯಾಸ ಮತ್ತು ಪಕ್ಷಿಗಳ ಸಂಕುಲ ಕಡಿಮೆಯಾಗುತ್ತಿವೆ.ಇಂತಹ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಅಮರೇಗೌಡ ಮಲ್ಲಾಪೂರ ಅವರು ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಬಿಸಿಲಿರುವುದರಿಂದ ಪ್ರಾಣಿ ಪಕ್ಷಿಗಳಿಗೆ ನೀರಿನ ದಾಹ ತೀರಿಸಲು ಹಾಗೂ ಯುವಕ ಯುವತಿಯರಿಗೆ ಪ್ರಾಣಿಪಕ್ಷಿಗಳ ಬಗ್ಗೆ ಮಾನವೀಯತೆ ಮತ್ತು ಸಾಕುವ ಹವ್ಯಾಸ ಮೂಡಿಸುವು ಉದ್ದೇಶದಿಂದ *ಎಪ್ರಿಲ್ ಪೂಲ್ ಬದಲಿಗೆ ಎಪ್ರಿಲ್ ಕೂಲ್* ಕಾರ್ಯಕ್ರಮದ ಮೂಲಕ ಗಿಡಮರಗಳಿಗೆ ಅರವಟ್ಟಿಗೆ ಕಟ್ಟಿ ಕಾಳು ಮತ್ತು ನೀರು ಹಾಕುವ ಕಾರ್ಯ ಮಾಡುತ್ತಿದ್ದಾರೆ ಈ ಒಂದು ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಹಮ್ಮಿಕೊಂಡಿರುವುದು ನನಗೆ ತುಂಬಾ ಸಂತೋಷವೆನಿಸುತ್ತಿದೆ. ವನಸಿರಿ ತಂಡಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ. ಪ್ರತಿಯೊಬ್ಬರೂ ಪಕ್ಷಿಗಳನ್ನು ಸಾಕುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು,ಪಕ್ಷಿಗಳ ಸಂಕುಲ ಹೆಚ್ಚಾದಂತೆ ನಮ್ಮ ಮಾನಸಿಕ ನೆಮ್ಮದಿ ಕೂಡಾ ಹೆಚ್ಚಾಗುತ್ತದೆ ಇದನ್ನು ಎಲ್ಲರೂ ಅರಿತುಕೊಳ್ಳಬೇಕು ಮತ್ತು ಇಂತಹ ಕಾರ್ಯಗಳನ್ನು ಮಾಡುತ್ತಿರುವ ವನಸಿರಿ ಫೌಂಡೇಶನ್ ತಂಡ ಇನ್ನಷ್ಟು ಎತ್ತರವಾಗಿ ಬೆಳೆಯಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ವಸತಿ ನಿಲಯದ ನಿಲಯ ಪಾಲಕರಾದ ಶ್ರೀ ದೀಪಕ್, ಪ್ರಥಮ ದರ್ಜೆಯ ಸಹಾಯಕರಾದ ಶ್ರೀ ರುದ್ರೇಗೌಡ,ಸಹ ಶಿಕ್ಷಕರಾದ ಅಜಪ್ಪಾ,ಶಾಹೀನ್ ಗಣದಿನ್ನಿ, ರಮೇಶ,ಮಹೇಶ್,ಸಿದ್ದಮ್ಮ ಹಾಗೂ ವನಸಿರಿ ಫೌಂಡೇಶನ್ ಸದಸ್ಯರು ಹಾಗೂ ಪರಿಸರ ಪ್ರೇಮಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು.