ಮಸ್ಕಿ ಜುಲೈ.01 ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಕಳೆದ ಆರು ವರ್ಷಗಳಿಂದ ನಮ್ಮ ಜನಾಂಗದ ಸಂಘಟನೆ ಹಾಗೂ ಶ್ರೇಯೋಭಿವೃದ್ದಿಗಾಗಿ ಶ್ರಮಿಸುವುದರೊಂದಿಗೆ ನಮ್ಮ ಆಚಾರ,ವಿಚಾರಗಳ ಉಳಿಸುವ ಸಂಕಲ್ಪದೊಂದಿಗೆ ಹಲವು ಹೋರಾಟ ನಡೆಸುತ್ತಿದೆ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ತಾಲ್ಲೂಕು ಅಧ್ಯಕ್ಷರಾದ ವೀರಭದ್ರಪ್ಪ ಅಂಗಡಿ ಹೇಳಿದರು.
ಭಾರತೀಯ ಸಂಸ್ಕೃತಿ,ನಾಡು ನುಡಿ ರಕ್ಷಣೆಯೊಂದಿಗೆ ನಮ್ಮ ಜನಾಂಗದ ಉನ್ನತಿಯೂ ಮುಖ್ಯವಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಈ ಹಿಂದಿನಿಂದಲೂ ನಮ್ಮ ಸಮುದಾಯದ ಕೊಡುಗೆ ಅಪಾರ ಹಾಗೂ ಗಮನಾರ್ಹವಾದದ್ದು.ಈ ಬಾರಿಯ ಚುನಾವಣೆಯಲ್ಲೂ ವಿವಿಧ ಪಕ್ಷಗಳಿಂದ ನಮ್ಮ ಸಮುದಾಯದ ಬಂದುಗಳು ಜಯಗಳಿಸಿ ಶಾಸಕರಾಗಿದ್ದಾರೆ,ಸಚಿವರಾಗಿದ್ದಾರೆ.ಪ್ರಸ್ತುತ ಇರುವ ಲೋಕಸಭೆಯಲ್ಲಿ ಹಲವು ಮಂದಿ ಸಂಸದರಾಗಿದ್ದಾರೆ,ಕೇಂದ್ರ ಸಚಿವರಾಗಿರುವ ಹೆಮ್ಮೆಯ ಸಂಗತಿ ಹಾಗೂ ಇವರುಗಳನ್ನು ಅಭಿನಂದಿಸುವ,ಗೌರವಿಸುವ ಜವಾಬ್ದಾರಿ ನಮ್ಮದು ಆ ಹಿನ್ನಲೆಯಲ್ಲಿ ದಿನಾಂಕ 5/7/23ರ ಬುಧವಾರ ಸಂಜೆ 5 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಶಾಸಕ,ಸಂಸದ,ಸಚಿವರ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರುಗಳಾದ ಪರಮ ಪೂಜ್ಯ ಶ್ರೀ. ಶ್ರೀ. ಶ್ರೀ.ಪ್ರಸನ್ನ ರೇಣುಕಾ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ವಹಿಸಿಕೊಂಡು ಆಶೀರ್ವದಿಸಲಿದ್ದಾರೆ.
ನಾಡಿನ ವಿವಿಧ ಮಠಗಳ ಪೂಜ್ಯರುಗಳು,ಗಣ್ಯರು ಭಾಗವಹಿಸುವ ಈ ಕಾರ್ಯಕ್ರಮಕ್ಕೆ ವೀರಶೈವ ಲಿಂಗಾಯತ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿ ಕೊಡಬೇಕಾಗಿ ಪ್ರಾರ್ಥನೆ. ಮಾನ್ಯ ಮಾದ್ಯಮ ಮಿತ್ರರುಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ಪ್ರಚಾರ ನೀಡುವುದರೊಂದಿಗೆ ಸಮುದಾಯದ ಬೆಳವಣಿಗೆಗೆ ಸಹಕರಿಸಬೇಕಾಗಿ ಕೇಳಿಕೊಳ್ಳುತ್ತೇವೆ ಎಂದು ವೀರಭದ್ರಪ್ಪ ಅಂಗಡಿ ತಾಲ್ಲೂಕು ಅಧ್ಯಕ್ಷರು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮಸ್ಕಿ.