ಏಪ್ರಿಲ್ 30.ಸಿಂಧನೂರು ನಗರದ ವನಸಿರಿ ಫೌಂಡೇಶನ್ ಕಾರ್ಯಾಲಯದಲ್ಲಿ ಇಂದು ವನಸಿರಿ ಫೌಂಡೇಶನ್ ರಾಜ್ಯ ಘಟಕ(ರಿ).ರಾಯಚೂರು ವತಿಯಿಂದ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರ ನೇತೃತ್ವದಲ್ಲಿ ರಾಜಕೀಯ ಪಕ್ಷಗಳಿಗಾಗಿ ಸ್ನೇಹ ಸಂಬಂದಗಳನ್ನು ಕಳೆದುಕೊಳ್ಳಬೇಡ ಎಂದು ಹಾಗೂ ಜಿಲ್ಲೆಯಲ್ಲಿ ಕಡ್ಡಾಯ ಮತದಾನ ಮಾಡುವ ಸಲುವಾಗಿ ಮತದಾನ ಜಾಗೃತಿ ಸಭೆ ಮತ್ತು ಸ್ನೇಹ ಸಮ್ಮಿಲನ ಸಭೆ ನಡೆಯಿತು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಮಾತನಾಡಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಹೇಳಿದಂತೆ ಪ್ರಜಾಪ್ರಭುತ್ವದಲ್ಲಿ ಮತದಾನ ಎನ್ನುವುದು ಅಭಿವೃದ್ದಿಗಾಗಿ ಸಾರ್ವಜನಿಕರಿಗೆ ನೀಡಿದ ಒಂದು ಬಹುದೊಡ್ಡ ಅಸ್ತ್ರವಾಗಿದೆ ಇದನ್ನು ಸಾರ್ವಜನಿಕರು ಬಳಸಿಕೊಂಡಾಗ ಮಾತ್ರ ಅಭಿವೃದ್ಧಿ ಹೊಂದಲು ಸಾದ್ಯ ಎಂದರು.ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಿ ಹಾಗೆಯೇ ಮತದಾನಕ್ಕಾಗಿ ರಾಜಕೀಯ ಪಕ್ಷಗಳು ಆಮೀಶಕ್ಕೆ ಒಳಗಾಗದೆ ನಮ್ಮ ಮತ ನಮ್ಮ ಹಕ್ಕು ಎಂದು ತಿಳಿದು ಮತದಾನ ಮಾಡಿ ಎಂದು ಕರೆ ನೀಡಿದರು.ಇದೇ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಗಾಗಿ ಸ್ನೇಹ ಸಂಬಂಧಗಳನ್ನು ಕಳೆದುಕೊಳ್ಳಬೇಡಿ ಅಭಿವೃದ್ಧಿಗೆ ಒತ್ತು ನೀಡುವ ಅಭ್ಯರ್ಥಿಗಳಿಗೆ ನಿಮ್ಮ ಮನಸ್ಸಿಗೆ ಒಪ್ಪುವಂತಹ ಅಬ್ಯರ್ಥಿಗೆ ಮತ ನೀಡಿ ಇದರಲ್ಲಿ ಸ್ನೇಹ ಸಂಬಂಧವನ್ನು ಕಳೆದುಕೊಳ್ಳಬೇಡಿ ಎಂದು ತಿಳಿಸಿದರು.
ನಂತರ ಮಾತನಾಡಿದ ರಾಜ್ಯ ಕಾರ್ಯದರ್ಶಿ ಶರಣೇಗೌಡ ಹಡಗಿನಾಳ ಮತದಾನ ಪ್ರತಿಯೊಬ್ಬರ ಹಕ್ಕು ಕಡ್ಡಾಯವಾಗಿ ಮಾಡಿ ಆದರೆ ಈ ರಾಜಕೀಯ ಪಕ್ಷಗಳ ಆಮೀಶಕ್ಕೆ ಒಳಗಾಗದೆ ಸ್ವತಂತ್ರವಾಗಿ ಮತನೀಡಿ ಮತ್ತು ಈ ರಾಜಕೀಯ ಪಕ್ಷಗಳು ಮತ ಕೇಳಲು ಬಂದಾಗ ವನಸಿರಿ ಫೌಂಡೇಶನ್ ಹೆಸರನ್ನು ಯಾರೂ ಕೂಡ ಬಳಸಬಾರದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ, ರಾಜ್ಯ ಕಾರ್ಯದರ್ಶಿ ಶರಣೇಗೌಡ ಹಡಗಿನಾಳ, ಸಿಂಧನೂರು ತಾಲೂಕ ಅದ್ಯಕ್ಷ ರಮೇಶ ಕುನ್ನಟಗಿ, ಲಿಂಗಸೂಗೂರು ತಾಲೂಕ ಘಟಕದ ಅದ್ಯಕ್ಷ ರಾಜಶೇಖರ ಪಾಟೀಲ,ಮಸ್ಕಿ ತಾಲೂಕ ಅದ್ಯಕ್ಷ ರಾಜು ಬಳಗಾನೂರ,ಶಂಕರಗೌಡ ಹೊಸಳ್ಳಿ ಇಜೆ,ಮತ್ತು ಪಾಟೀಲ ಬೂತಲದಿನ್ನಿ,ಚನ್ನಪ್ಪ ಕೆ.ಹೊಸಹಳ್ಳಿ,ರಂಜಾನ್ ಸಾಬ್,ವೀರಭದ್ರಯ್ಯ ಸ್ವಾಮಿ,ಮುದಿಯಪ್ಪ ಹೊಸಳ್ಳಿ, ರಮೇಶ ಬಳಗಾನೂರ, ಶಿವು,ಜಮೀರ್ (ಸದ್ದಾಂ) ಇನ್ನೂ ಹಲವಾರು ಸದಸ್ಯರು ಉಪಸ್ಥಿತರಿದ್ದರು.