ಮೇ 07.ಲಿಂಗಸುಗೂರು ತಾಲೂಕಿನ ಮಾವಿನಬಾವಿ ಗ್ರಾಮ ಪಂಚಾಯಿತಿ ಹಾಗೂ SWEEP ವತಿಯಿಂದ ರಾಂಪುರ (ಭೂ) ಗ್ರಾಮದಲ್ಲಿ ಮತದಾರರ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಗೀತಾ ಗ್ರಾಮಸ್ಥರಿಗೆ ಮತದಾನದ ಪ್ರತಿಜ್ಞಾವಿಧಿಯನ್ನು ಭೋದಿಸಿ ಮತದಾನದ ಜಾಗೃತಿ ಮೂಡಿಸಿದರು.ಮನೆಮನೆಗೆ ತೆರಳಿ ಮತದಾನದ ಬಗ್ಗೆ ತಿಳಿಹೇಳಿ,ಕಡ್ಡಾಯ ಮತದಾನ ಮಾಡಬೇಕು,ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕರ ಹಕ್ಕು ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನು ರಾಂಪುರ ಶಾಲೆಯ ಶಿಕ್ಷಕರಾದ ನಾಗರಾಜ ಮಾಂಡ್ರೆ ರವರು ಮಾಡಿದರು, ಅದೇ ರೀತಿ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಸುರೇಶ್ ರವರು ಗ್ರಾಮಸ್ಥರಿಗೆ ಮತದಾನದ ಮನವರಿಕೆ ಮಾಡಿಕೊಟ್ಟರು.
ಈ ಮತದಾರರ ಜಾಗೃತಿ ಅಭಿಯಾನದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಗೀತಾ, ಪಂಚಾಯಿತಿ ಸಿಬ್ಬಂದಿಗಳಾದ ಬಿಲ್ ಕಲೆಕ್ಟರ್ ರಾಘವೇಂದ್ರ ಕುಲಕರ್ಣಿ , ಕಂಪ್ಯೂಟರ್ ಆಪರೇಟರ್ ದೇವರಾಜ್ , ತಾಜುದ್ದೀನ್, ಮಾವಿನಬಾವಿ ಕ್ಲಸ್ಟರ್ ನ ಎಲ್ಲಾ ಬಿ ಎಲ್ ಓಗಳು,ಗ್ರಾಮದ ಹಿರಿಯರು ,ಯುವಕರು, ಮತದಾರ ಬಾಂಧವರು ಭಾಗವಹಿಸಿದ್ದರು.