ರಾಯಚೂರು,ಏ.24(ಕ.ವಾ):- ಮುಂದೆ ಬರುವ ಮೇ 10 ರಂದು ವಿಧಾನ ಸಭೆ ಚುನಾವಣೆ ಹತ್ತಿರ ಬರುತ್ತಿದ್ದು, ಮಹಾತ್ಮಗಾಂಧಿ ನರೇಗಾ ಕೂಲಿಕಾರರು ತಪ್ಪದೇ ಮತದಾನದ ಚಲಾಯಿಸಿ, ಶತಪ್ರತಿಶತ ಮತದಾನ ರಾಯಚೂರು ಜಿಲ್ಲೆಯ ವಾಗ್ದಾನವನ್ನು ಪೂರೈಸೋಣ ಎಂದು ಐಇಸಿ ಸಂಯೋಜಕ ಧನರಾಜ ಅವರು ಹೇಳಿದರು.
ಅವರುಏ.26 ರಂದು (ಬುಧುವಾರ)ರಂದು ರಾಯಚೂರು ಜಿಲ್ಲೆಯ, ರಾಯಚೂರು ತಾಲೂಕಿನ ಕಾಡ್ಲೂರು ಗ್ರಾಮ ಪಂಚಾಯತಿಯ ಕೃಷಿಹೊಂಡ ಕಾಮಗಾರಿ ಸ್ಥಳದಲ್ಲಿ ಮಾತನಾಡಿದರು.
ಮತದಾನ ಜಾಗೃತಿ: ಸಾರ್ವಜನಿಕರು, ಕೂಲಿಕಾರರು ಎಲ್ಲಾರೂ ಕಡ್ಡಾಯವಾಗಿ ಮೇ-10 ರಂದು ಮತದಾನ ಮಾಡಬೇಕು. ಮತದಾನ ಸಂವಿಧಾನ ನೀಡಿರುವ ಒಂದು ವರ, ಹಾಗಾಗಿ ಯಾರು ಮತದಾನದಿಂದ ವಂಚಿತರಾಗದೇ, ಶತಪ್ರತಿಶತ ಮತದಾನ ರಾಯಚೂರು ಜಿಲ್ಲೆಯ ವಾಗ್ದಾನವನ್ನು ಪೂರೈಸೋಣ ಎಂದು ಮನವಿ ಮಾಡಿದರು. ನಂತರ ಎಲ್ಲಾ ಕೂಲಿಕಾರರಿಗೆ ಮತದಾನ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ, ಕೂಲಿಕಾರರಿಗೆ ಕೆಲಸ ಒದಗಿಸಲಾಗುತ್ತಿದೆ, ಪ್ರಸಕ್ತ ಅರ್ಥಿಕ ವರ್ಷ ಆರಂಭದ ಏಪ್ರಿಲ್ ತಿಂಗಳಿನಿಂದ ಯೋಜನೆಯಡಿ ಕೂಲಿಕಾರರಿಗೆ 309 ರಿಂದ ₹316/- ಕೂಲಿ ದರ ಹೆಚ್ಚಿಸಲಾಗಿದೆ. ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ಕೂಲಿ ಹಣವನ್ನು ನೀಡಲಾಗತ್ತದೆ. ಕಲ್ಬುರ್ಗಿ ಮತ್ತ ಬೆಳಗಾವಿ ವಿಭಾಗದ ಜಿಲ್ಲೆಗಳಿಗೆ ಅನ್ವಯಿಸುವಂತೆ, ಬೆಸಿಗೆ ತಾಪಮಾನದ ಪರಿಣಾಮವಾಗಿ, ಕೂಲಿಕಾರರ ಹಿತದೃಷ್ಟಯಿಂದ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಕೆಲಸ ಪರಿಮಾಣದಲ್ಲಿ ಶೇ 30% ರಷ್ಟು ರಿಯಾಯ್ತಿ ನೀಡಿದೆ. ಜೊತೆಗೆ ವೈಯಕ್ತಿಕ ಕಾಮಗಾರಿಗಳ ಸೌಲಭ್ಯಗಳನ್ನು ಪಡೆದುಕೊಳ್ಳಲು ಮನವಿ ಮಾಡಿದರು.
ಕೃಷಿಹೊಂಡ ನಿರ್ಮಾಣ ಮಾಡಿಕೊಳ್ಳುವುದರಿಂದ ರೈತನ ಹೊಲದಲ್ಲಿ ಬಿದ್ದ ಮಳೆ ನೀರುಪಾಲಾಗಿ ಹರಿದು ಹೋಗದೆ,ಹೊಂಡದಲ್ಲಿ ನೀರು ಸಂಗ್ರಹ ಮಾಡಲು ಹಾಗೂ ಬೆಳೆ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಳೆಗೆ ನೀರು ಉಣಿಸಲು ಮತ್ತು ಅರ್ಥಿಕವಾಗಿ ಸಬಲರಾಗಲು ಕೃಷಿಹೊಂಡ ಅನುಕೂಲವಾಗುತ್ತದೆ ಎಂದು ಜಗದೀಶ್ ಜಿಐಎಸ್ ಪರಿಣಿತರು ತಿಳಿಸಿದರು.
ಈ ಸಂದರ್ಭದಲ್ಲಿ ರವಿಚಂದ್ರ ಕರ ವಸೂಲಿಗಾರ, ಬಿ.ಎಪ್.ಟಿ ಹನುಮಂತರಾಯ, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಹಾಗೂ ನರೇಗಾ ಮೇಟ್ ಮತ್ತು ಕೂಲಿಕಾರರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.