ಸಿಂಧನೂರು ಅ 12.ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ (ರಿ) ಬೆಂಗಳೂರು, ತಾಲೂಕು ಸಮಿತಿ ಸಿಂಧನೂರು ವತಿಯಿಂದ ಮಾನ್ಯ ಗೌರವಾನ್ವಿತ ತಹಶೀಲ್ದಾರರು ಸಿಂಧನೂರು ಇವರ ಮುಖಾಂತರ
ಮಾನ್ಯ ಉನ್ನತ ಶಿಕ್ಷಣ ಮಂತ್ರಿಗಳು, ಕರ್ನಾಟಕ ಸರ್ಕಾರ ವಿಧಾನಸೌಧ, ಬೆಂಗಳೂರು,
ಮಾನ್ಯ ಅಪರ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ ವಿಧಾನಸೌಧ, ಬೆಂಗಳೂರು ಹಾಗೂ ಮಾನ್ಯ ಆಯುಕ್ತರು, ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಇಲಾಖೆ, ಬೆಂಗಳೂರು, ಇವರಿಗೆ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆಯು ಅತಿಥಿ ಉಪನ್ಯಾಸಕರಿಗೆ ಶೈಕ್ಷಣಿಕ ವರ್ಷವಿಡೀ ಕಾರ್ಯ ಮತ್ತು ವೇತನ ನೀಡುವ ಹಾಗೂ ಸೇವಾ ಸಕ್ರಮಾತಿ ಮಾಡಿಕೊಳ್ಳುವ ಕುರಿತು.
ಕರ್ನಾಟಕ ರಾಜ್ಯದಲ್ಲಿ 410ಕ್ಕಿಂತಲೂ ಅಧಿಕ ಪದವಿ ಕಾಲೇಜುಗಳಲ್ಲಿ 14000ಕ್ಕಿಂತಲೂ ಹೆಚ್ಚು ಅತಿಥಿ ಉಪನ್ಯಾಸಕರು ಕಳೆದ 20ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇವೆ. ಆದರೆ ಕಳೆದ ಮೂರು ವರ್ಷಗಳಿಂದ ಆನ್ ಲೈನ್ ಕೌನ್ಸೆಲಿಂಗ್ ಮೂಲಕ ಆಯ್ಕೆ ಮಾಡಿಕೊಂಡು ವರ್ಷದಲ್ಲಿ ಹತ್ತು ತಿಂಗಳು ಸೇವೆಗೆ ಬಳಸಿಕೊಂಡು ನಂತರ ಬಿಡುಗಡೆ ಮಾಡುತ್ತಿದ್ದರು.ಆದರೆ ಈ ಶೈಕ್ಷಣಿಕ ಸಾಲಿನಲ್ಲಿ ಆಯ್ಕೆ ಮಾಡಿಕೊಂಡರೂ ಕರ್ತವ್ಯಕ್ಕೆ ಹಾಜರುಪಡಿಸಿಕೊಂಡು ಕೆಲಸ ಇಲ್ಲ ಸಂಬಳ ಇಲ್ಲ ಎಂದು ಇಲಾಖೆ ಹಾಗೂ ಪ್ರಾಂಶುಪಾಲರು ಹೇಳುತ್ತಿದ್ದಾರೆ. ಹಾಗಾಗಿ ಇದು ರಾಯಚೂರು, ಗುಲ್ಬರ್ಗ ಹಾಗೂ ಬಳ್ಳಾರಿ ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸುವ ಹಾಗೂ ವಿಶೇಷವಾಗಿ ಕಲ್ಯಾಣ ಕರ್ನಾಟಕದಲ್ಲಿ ಸೇವೆ ಸಲ್ಲಿಸುವ ಅತಿಥಿ ಉಪನ್ಯಾಸಕರಿಗೆ ಅನ್ಯಾಯವಾಗುತ್ತಿದ್ದು ಇದನ್ನು ಸರಿಪಡಿಸಿ ಈ ಹಿಂದಿನ ಸಾಲಿನಲ್ಲಿ ಹೇಗೆ ಸೇವೆ ಮಾಡಲು ಅವಕಾಶ ನೀಡಲಾಗಿತ್ತೋ ಅದೇ ತರಹ ಅವಕಾಶ ಕಲ್ಪಿಸಿಕೊಡಬೇಕು ಮತ್ತು ಸರಿಪಡಿಸಿ ನ್ಯಾಯನೀಡಬೇಕೆಂದು ಈ ಮೂಲಕ ಮಾನ್ಯ ಮುಖ್ಯಮಂತ್ರಿ ಗಳಿಗೆ ಹಾಗೂ ಸಂಭಂದಿಸಿದ ಶಿಕ್ಷಣ ಮಂತ್ರಿಗಳಿಗೆ ಹಾಗೂ ಅಧಿಕಾರಿಗಳ ಅವಗಾಹನೆಗೆ ತರುತ್ತಿದ್ದೇವೆ.
ಒಂದು ವೇಳೆ ಹಿಂದಿನ ಸಾಲಿನಲ್ಲಿರುವಂತೆ ಸೇವೆ ಸಲ್ಲಿಸಲು ಅವಕಾಶ ನೀಡದಿದ್ದರೆ ಮುಂದಿನದಿನಗಳಲ್ಲಿ ಪಾಲಕರು,ವಿದ್ಯಾರ್ಥಿಗಳನ್ನೊಳಗೊಂಡು ಹೋರಾಟ ರೂಪಿಸಬೇಕಾಗುತ್ತದೆಂದು ಈ ಮೂಲಕ ತಮ್ಮ ಅವಗಾಹನೆಗೆ ತರುತ್ತಿದ್ದೇವೆ. ಮುಂದುವರೆದು ಸರ್ಕಾರವು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಅತಿಥಿ ಉಪನ್ಯಾಸರನ್ನು ಸೇವಾ ಸಕ್ರಮಾತಿ ಮಾಡಬೇಕೆಂದು ಈ ಮೂಲಕ ಮನವಿ ಮಾಡುತ್ತಿದ್ದೇವೆ ಎಂದು ಸಂಘಟನೆ ಅಧ್ಯಕ್ಷರಾದ ವಿಶ್ವನಾಥ ಗೋನಾಳ ಪತ್ರಿಕೆಗೆ ತಿಳಿಸಿದ್ದಾರೆ.
ಅತಿಥಿ ಉಪನ್ಯಾಸಕರ ಹಕ್ಕೊತ್ತಾಯಗಳು
1. ಈ ಹಿಂದಿನ ಶೈಕ್ಷಣಿಕ ಸಾಲಿನಂತೆ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಅತಿಥಿ ಉಪನ್ಯಾಸಕರನ್ನು ಸೇವೆಯಲ್ಲಿ ಮುಂದುವರಿಸುವುದು.
2. ಎಲ್ಲಾ ಅತಿಥಿ ಉಪನ್ಯಾಸಕರನ್ನು ಸೇವಾ ಖಾಯಮಾತಿ ಮಾಡಿಕೊಳ್ಳಬೇಕು.
3. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಬಾಕಿ ವೇತನವನ್ನು ಕೂಡಲೇ ಬಿಡುಗಡೆಗೊಳಿಸುವುದು. 4. ಎಲ್ಲಾಅತಿಥಿ ಉಪನ್ಯಾಸಕರಿಗೆ ಆರೋಗ್ಯವಿಮೆ ನೀಡಬೇಕು
5. ಭವಿಷ್ಯನಿಧಿಯನ್ನು(PF) ನೀಡುವುದು
6. ಮಹಿಳಾ ಅತಿಥಿ ಉಪನ್ಯಾಸಕರಿಗೆ ಹೆರಿಗೆ ರಜೆ ಹಾಗೂ ವೇತನ ನೀಡುವುದು.