ಬಡವರ ಬಾರಕೋಲು ಸುದ್ದಿ
ಮಸ್ಕಿ : ಸಂಸತ್ ಭವನದಲ್ಲಿ ಕೇಂದ್ರದ ಸರಕಾರದ ಗೃಹ ಮಂತ್ರಿ ಅಮಿತ್ ಶಾ ಅವರು
“ಭಾರತದ ಸಂವಿಧಾನದ 75 ವರ್ಷಗಳ ಅದ್ಭುತ ಪಯಣ”ಎಂಬ ಎರಡು ದಿನಗಳ ಚರ್ಚೆಯ ಮುಕ್ತಾಯದ ಸಮಯದಲ್ಲಿ ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ,“ಅಭಿ ಏಕ್ ಫ್ಯಾಶನ್ ಹೋ ಗಯಾ ಹೈ – ಅಂಬೇಡ್ಕರ್,ಅಂಬೇಡ್ಕರ್,ಅಂಬೇಡ್ಕರ್,ಅಂಬೇಡ್ಕರ್,ಅಂಬೇಡ್ಕರ್,ಅಂಬೇಡ್ಕರ್ ಇತ್ನಾ ನಾಮ್ ಅಗರ್ ಭಗವಾನ್ ಕಾ ಲೇತೆ ತೋ ಸಾತ್ ಜನ್ಮೋನ್ ತಕ್ ಸ್ವರ್ಗ್ ಮಿಲ್ ಜಾತಾ”(ಈ ಒಂದು ಫ್ಯಾಶನ್ ಆಗಿ ಹೋಗಿದೆ.ಅಂಬೇಡ್ಕರ್,ಅಂಬೇಡ್ಕರ್,ಅಂಬೇಡ್ಕರ್,ಅಂಬೇಡ್ಕರ್,ಅಂಬೇಡ್ಕರ್,ಅಂಬೇಡ್ಕರ್ ಇಷ್ಟು ಬಾರಿ ಭಗವಂತನ ಹೆಸರನ್ನು ಹೇಳಿದ್ದರೆ,ಏಳು ಜನ್ಮಕ್ಕೂ ಸ್ವರ್ಗ ಸಿಗುತ್ತಿತ್ತು) ಎಂದು ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿ ಬಾಬಾ ಸಾಹೇಬರಿಗೆ ಹಾಗೂ ಕೋಟ್ಯಂತರ ಅಂಬೇಡ್ಕರ್ ಅನುಯಾಯಿಗಳಿಗೆ ಅವಮಾನವನ್ನುಂಟು ಮಾಡಿದ್ದಾರೆ.
ಇವರ ಹೇಳಿಕೆಯನ್ನು ಖಂಡಿಸಿ ಪಟ್ಟಣದ ಹಳೆ ಬಸ್ ನಿಲ್ದಾಣ ಹತ್ತಿರವಿರುವ ಅಂಬೇಡ್ಕರ್ ಮೂರ್ತಿ ಮುಂದುಗಡೆಯ ಮುಖ್ಯ ರಸ್ತೆಯಲ್ಲಿ ದಲಿತಪರ,ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಧರಣಿ ನಿರತ ಹೋರಾಟಗಾರರು ಅರ್ಧ ಗಂಟೆಯ ವರೆಗೆ ರಸ್ತೆ ತಡೆ ನಡೆಸಿದರು.
ಇದೇ ಸಂದರ್ಭದಲ್ಲಿ ದಲಿತ ಹಿರಿಯ ಹೋರಾಟಗಾರ ದೊಡ್ಡಪ್ಪ ಮುರಾರಿ ಮಾತನಾಡಿ ಇದು ಅಮಿತ್ ಷಾ ಅವರ ವೈಯಕ್ತಿಕ ಅಭಿಪ್ರಾಯವಲ್ಲ ಒಂದು ಸರ್ಕಾರದ ಘನತೆವೆತ್ತ ಮಂತ್ರಿಯಾಗಿ,ಸರ್ಕಾರದ ಪ್ರತಿನಿಧಿಯಾಗಿ ಈ ಮಾತನ್ನು ಹೇಳಿದ್ದಾರೆ.ಹಾಗಾಗಿ ಇದು ಅಸಂವಿಧಾನಿಕ ನಡೆ ಮತ್ತು ಇದು ಖಂಡನೀಯ ಎಂದು ತಿಳಿಸಿದರು.
ತದ ನಂತರ ಮಾತನಾಡಿದ ಹನುಮಂತಪ್ಪ ವೆಂಕಟಪೂರು ಒಂದು ಸಂವಿಧಾನವನ್ನು ರಚನೆ ಮಾಡಿದಂತಹ ನಿರ್ಮಾತೃ ಎಂದು ಇಡೀ ದೇಶವೇ ಘನತೆಯಿಂದ ಅಂಬೇಡ್ಕರ್ ಬಗ್ಗೆ ಮಾತಾಡುವಾಗ,ಚರ್ಚೆ ಮಾಡುವಾಗ ಮತ್ತು ಸಂವಾದ ಮಾಡುವಾಗ ಎಷ್ಟೋ ದಮನಿತ ಸಮುದಾಯಗಳು ಇವತ್ತು ಅಂಬೇಡ್ಕರ್ ಅವರನ್ನು ದೊಡ್ಡ ಜ್ಞಾನದ ಭಂಡಾರವೆಂದು ಅವರಿಗೆ ಗೌರವವನ್ನು ಸಲ್ಲಿಸುವ ಇಂತಹ ಸಂದರ್ಭದಲ್ಲಿ,ಇದರ ತದ್ವಿರುದ್ಧವಂತೆ ಆಳುವ ಸರ್ಕಾರಗಳು ಅದರಲ್ಲೂ ಕೋಮುವಾದಿ ಶಕ್ತಿಗಳು ಬಾಬಾ ಸಾಹೇಬರ ಆಶಯಗಳನ್ನು ಕನಸು ಮತ್ತು ಗುರಿಗಳನ್ನು ಬುಡಮೇಲು ಮಾಡುವ ಹುನ್ನಾರವನ್ನು ಮಾಡುತ್ತಾ ಬರುತ್ತಿವೆ.
ಹಾಗೂ ಸಂಘ ಪರಿವಾರ ಪ್ರೇರಿತ ಬಿಜೆಪಿ ಸರ್ಕಾರದ ಕೇಂದ್ರ ಸಚಿವ ಅಮಿತ್ ಶಾ ಅವರು ಬಾಬಾಸಾಹೇಬರ ಬಗೆಗೆ ಹೊಂದಿರುವ ಕೀಳು ಮನಸ್ಥಿತಿಯ ಭಾವನೆಯನ್ನು ಹೊರ ಹಾಕಿರುವುದು ಅವರ ಅಂತರಂಗದಲ್ಲಿರುವ ಕೋಮುವಾದಿ ಮನಸ್ಥಿತಿಯ ಬಣ್ಣವನ್ನು ಬಹಿರಂಗಪಡಿಸಿದಂತಾಗಿದೆ ಎಂದು ಉಗ್ರವಾಗಿ ಖಂಡಿಸಿದರು.
ಹಾಗೂ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಕರ್ನಾಟಕ ರೈತ ಸಂಘದ ಅಧ್ಯಕ್ಷ ಸಂತೋಷ ಹಿರೇದಿನ್ನಿ ಮಾತನಾಡಿ ಇವತ್ತು ಸಂವಿಧಾನ ಮತ್ತು ಕಾನೂನು ಮುಖಾಂತರ ಚಹಾ ಮಾರುವ ವ್ಯಕ್ತಿ ಪ್ರಧಾನಿಯಾಗುವನು,ಮತದಾನದ ಮುಖಾಂತರ ರಾಜ್ಯ ಪ್ರಭುತ್ವವನ್ನು ಪಡೆಯುವನು ಎಂದರೆ ಅದಕ್ಕೆ ಬಾಬಾ ಸಾಹೇಬರು ಕೊಡ ಮಾಡಿರುವ ಭಾರತದ ಸಂವಿಧಾನವೇ ಕಾರಣ ಮತ್ತು ಈ ದೇಶದ ಬಡವರು,ರೈತರು,ಕೂಲಿಕಾರರು,ದಲಿತರು,ಮಹಿಳೆಯರು,ಶೋಷಿತರು ಈ ಸಮಾಜದ ಮುಖ್ಯವಾಹಿನಿಗೆ ಬಂದು ನಿಲ್ಲಲು ಕಾರಣವೇ ಬಾಬಾ ಸಾಹೇಬರು.ಈ ದೇಶದ ಹೆಮ್ಮೆಯ ಕಿರೀಟವಾದ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವ,ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಅಮಿತ್ ಶಾ ಅವರ ರಾಜೀನಾಮೆಯನ್ನು ಪಡೆದು ಅವರ ಮೇಲೆ ಶಿಸ್ತು ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಹೋರಾಟಗಾರರನ್ನು ಮಸ್ಕಿ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮುದ್ದು ರಂಗಸ್ವಾಮಿಯರು ನಿಮ್ಮ ಧರಣಿಯಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೆ ದಯವಿಟ್ಟು ಕೈಬಿಡಿ ಎಂದು ಮನವೊಲಿಸಲು ಪ್ರಯತ್ನಿಸಿ ತಾಲೂಕ ದಂಡಾಧಿಕಾರಿಗಳನ್ನು ಹೋರಾಟ ನಿರತ ಸ್ಥಳಕ್ಕೆ ಕರೆದುಕೊಂಡು ಬಂದರು ತದ ನಂತರ ಮನವಿ ಪತ್ರವನ್ನು ಮಾನ್ಯ ತಹಶೀಲ್ದಾರರಾದ ಡಾ.ಮಲ್ಲಪ್ಪ.ಕೆ.ಯರಗೋಳ ಮಸ್ಕಿ ಇವರ ಮುಖಾಂತರ ಮಾನ್ಯ ಗೌರವಾನ್ವಿತ ರಾಷ್ಟ್ರಪತಿಗಳು
ಭಾರತ ಸರ್ಕಾರ ನವದೆಹಲಿ
ಇವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಈ ಹೋರಾಟದಲ್ಲಿ ದಲಿತ ಪರ,ಪ್ರಗತಿ ಪರ ಸಂಘಟನೆಗಳ ಯುವ ಮತ್ತು ಹಿರಿಯ ಮುಖಂಡರು ಹಾಗೂ ಪಕ್ಷ ಭೇದ ಮರೆತು ಎಲ್ಲಾ ರಾಜಕೀಯ ಪಕ್ಷಗಳ ಯುವ ಮತ್ತು ಹಿರಿಯ ಮುಖಂಡರು ಭಾಗವಹಿಸಿದ್ದರು.
ವರದಿ : ಎಚ್.ಕೆ.ಬಡಿಗೇರ್
ಗರ್ಭಿಣಿಯರ ಸರಣಿ ಸಾವಿನ ಹಿನ್ನೆಲೆ ಬಿಜೆಪಿಯ ಮುಖಂಡ ಕೆ ಕರಿಯಪ್ಪ ತಾ. ಸಾರ್ವಜನಿಕ ಆಸ್ಪತ್ರೆಗೆ ಭೇಟಿ