ಸಿಂಧನೂರು, ಡಿಸೆಂಬರ್ 16
ನಗರದ ಕುಷ್ಟಗಿ ಮಾರ್ಗದ ರಸ್ತೆಯ ಕುಡಿಯುವ ನೀರಿನ ಕೆರೆ ಪಕ್ಕದಲ್ಲಿರುವ ತಾಲ್ಲೂಕು ಕ್ರೀಡಾಂಗಣ ದನಗಳು ಮೇಯುವ ತಾಣವಾಗಿದ್ದು ಕ್ರೀಡಾ ಚಟುವಟಿಕೆಗಳಿಗೆ ಸಮಸ್ಯೆಯಾಗಿದೆ. ದಿನ ಬೆಳಗಾದರೆ ಬೀಡಾಡಿ ದನಗಳು ಕ್ರೀಡಾಂಗಣಕ್ಕೆ ನುಗ್ಗುತ್ತಿದ್ದು, ದಿನದಿಂದ ದಿನಕ್ಕೆ ಮೂಲ ಸ್ವರೂಪಕ್ಕೆ ಧಕ್ಕೆಯಾಗುತ್ತಿದೆ.
ವಿವಿಧ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗಲೆಂದು ಕ್ರೀಡಾಂಗಣವನ್ನು ಸಮತಟ್ಟುಗೊಳಿಸಲಾಗಿದ್ದು, ಜಾನುವಾರುಗಳ ಓಡಾಟದಿಂದಾಗಿ ಅಲ್ಲಲ್ಲಿ ಹಾನಿಗೀಡಾಗಿದೆ. ಒಂದೊAದು ಬಾರಿ ಇಪ್ಪತ್ತು ಮೂವತ್ತಕ್ಕೂ ಹೆಚ್ಚು ಜಾನುವಾರುಗಳು ಕ್ರೀಡಾಂಗಣದೊಳಕ್ಕೆ ನುಗ್ಗುತ್ತವೆ, ಇನ್ನೂ ರಾತ್ರಿಯಿಡಿ ಇಲ್ಲಿಯೇ ಮಲಗುತ್ತವೆ.
ನಿರ್ವಹಣೆ ಕೊರತೆ:
ತಾಲೂಕು ಕ್ರೀಡಾಂಗಣ ಯುಜನಸೇವಾ ಕ್ರೀಡಾ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು, ಸಂಬAಧಪಟ್ಟ ಅಧಿಕಾರಿಗಳು ನಿರ್ಲಕ್ಷö್ಯವಹಿಸಿದ್ದರಿಂದ ಕ್ರೀಡಾಂಗಣಕ್ಕೆ ದಿನವೂ ಜಾನುವಾರುಗಳು ನುಗ್ಗಿ, ಹಾನಿಗೊಳಿಸುತ್ತಿದ್ದರೂ ಇತ್ತ ಅಧಿಕಾರಿಗಳು ಸುಳಿಯುತ್ತಿಲ್ಲ ಎಂದು ಕ್ರೀಡಾಪಟುಗಳು ಆರೋಪಿಸಿದ್ದಾರೆ.
ಕ್ರೀಡಾಚಟುವಟಿಕೆ, ವಾಯುವಿಹಾರಿಗಳಿಗೆ ಕಿರಿಕಿರಿ
ಬೆಳಿಗ್ಗೆ ನಸುಕಿನಲ್ಲಿಯೇ ನಗರದ ಹಲವು ಸಾರ್ವಜನಿಕರು ಸೇರಿದಂತೆ ಕ್ರೀಡಾಪಟುಗಳು ವಾಯುವಿಹಾರ ಹಾಗೂ ಕ್ರೀಡಾ ಚಟುವಟಿಕೆಗೆ ನಿಮಿತ್ತ ತಾಲೂಕು ಕ್ರೀಡಾಂಗಣಕ್ಕೆ ಆಗಮಿಸುತ್ತಾರೆ. ಅಷ್ಟೊತ್ತಿಗಾಗಲೇ ಬಿಡಾಡಿ ದನಗಳು ಕ್ರೀಡಾಂಗಣದಲ್ಲಿ ಪ್ರವೇಶಿಸಿರುತ್ತವೆ. ಇದರಿಂದ ಕ್ರೀಡಾಚಟುವಟಿಕೆಗಳನ್ನು ಕೈಗೊಳ್ಳಲು ಅನನಕೂಲ ಉಂಟಾಗಿದೆ. ಎಮ್ಮೆ, ಆಕಳು ಸೇರಿ ಜಾನುವಾರುಗಳು ಒಳನುಗ್ಗಿ ಎಲ್ಲೆಂದರಲ್ಲಿ ಎಂಡಿ ಹಾಕಿವೆ, ದನ-ಕರುಗಳ ಓಡಾಟದಿಂದಾಗಿ ಸಮತಟ್ಟುಗೊಳಿಸಿದ ಕ್ರೀಡಾಂಗಣ ಹಾಳಾಗುತ್ತಿದೆ, ರನ್ನಿಂಗ್ ಟ್ರಾö್ಯಕ್ಗೂ ಧಕ್ಕೆಯಾಗಿದೆ ಎಂದು ಕ್ರೀಡಾಪಟುವೊಬ್ಬರು ಆರೋಪಿಸುತ್ತಾರೆ.
ಅನಧಿಕೃತ ಚಟುವಟಿಕೆಗಳ ತಾಣ
ತಾಲೂಕು ಕ್ರೀಡಾಂಗಣವನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದ್ದು, ಕ್ರೀಡಾಪಟುಗಳ ತರಬೇತಿ, ಅಭ್ಯಾಸಕ್ಕೆ ಹೆಸರಾಗಬೇಕಾದ ಕ್ರೀಡಾಂಗಣ ಸಂಜೆ ಮತ್ತು ರಾತ್ರಿ ಅನಧಿಕೃತ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಕೆಲ ಪುಂಡ-ಪೋಕರಿಗಳು ಹಾಡಹಗಲೇ ಇಲ್ಲಿ ಮದ್ಯ ಸೇವಿಸುತ್ತಾರೆ. ಕ್ರೀಡಾಂಗಣದ ಆಸುಪಾಸು ಮದ್ಯಬಾಟಲಿಗಳೇ ಕಾಣುತ್ತವೆ. ಕ್ರೀಡಾಂಗಣ ಸುರಕ್ಷತೆಯ ಬಗೆಗೂ ಆತಂಕ ಕಾಡುತ್ತಿದೆ ಎಂದು ಸಾರ್ವಜನಿಕರೊಬ್ಬರು ದೂರುತ್ತಾ.