ಸಿಂಧನೂರು ಡಿ.03 ವೀಣಾಶ್ರೀ ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ, ಜೀವ ಸಂಕುಲಗಳ ಬದುಕಿನೊಂದಿಗೆ ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ವೀಣಾಶ್ರೀ ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನಿರಂತರವಾಗಿ ನಡೆಸುತ್ತಿದೆ ಹಸುರು ನಮ್ಮೆಲ್ಲರ ಉಸಿರು ಎಂಬ ನುಡಿ ಮಾತು ನಿಜಕ್ಕೂ ಅದ್ಭುತವಾದ ಅರ್ಥ ಕಲ್ಪಿಸುತ್ತದೆ. ಗಿಡ ಮರ, ಹೂ, ಪ್ರಾಣಿ, ಪಕ್ಷಿಗಳು ಎಲ್ಲ ಜೀವಿಗಳ ಸಂಕುಲವನ್ನು ಪರಿಸರದಲ್ಲಿ ನೋಡುವ ಸೊಬಗು ಕಣ್ಣಿಗೆ ಆಕರ್ಷಣಿಯವಾದದು. ಪ್ರತಿಯೊಬ್ಬರು ಒಂದೊಂದು ಮರ ನೆಡುತ್ತಾ ಪರಿಸರ ಬೆಳೆಸುವಲ್ಲಿ ಕೈ ಜೋಡಿಸಬೇಕು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಪರಿಸರ ಜಾಗೃತಿ ಮೂಡಿಸುವ ಕರ್ತವ್ಯ ನಮ್ಮದಾಗಬೇಕು ಪ್ರಕೃತಿಯ ಮಡಿಲಲ್ಲಿ ಬೆಳೆಯುವ ಮಾನವನ ಜಗತ್ತು ಜೀವ ಸಂಕುಲ ಎಲ್ಲ ಒಂದು ಮಹತ್ವವಾಗಿದೆ ಇಂತಹ ಪರಿಸರವನ್ನು ಉಳಿಸಿ-ಬೆಳೆಸುವ ಹೊಣೆ ನಮ್ಮೆಲ್ಲರ ಜವಾಬ್ದಾರಿಯಾಗಬೇಕು, ಹಾಗೂ ಬರಿ ಸಸಿ ನೆಟ್ಟು ಪ್ರಕೃತಿ ಸೌಂದರ್ಯವ ವರ್ಣಿಸುವುದನ್ನು ಬಿಟ್ಟು., ಅದನ್ನು ಹೇಗೆ ಕಾಪಾಡಿಕೊಳ್ಳುವುದೆಂದು ಯೋಚಿಸಿ ಕ್ರಮ ಕೈಗೊಳ್ಳಬೇಕು ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯ ಎಂದು, ವೀಣಾಶ್ರೀ ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಆಡಳಿತಾಧಿಕಾರಿ ಶ್ರೀಮತಿ ದ್ರಾಕ್ಷಾಯಣಿ ಬಿ ಮಾಲಿ ಪಾಟೀಲ್ ಹೇಳಿದರು, ಈ ಕಾರ್ಯಕ್ರಮದ ಮೂಲಕ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸಿ ವಿನೂತನವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವೀಣಾಶ್ರೀ ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಸನಗೌಡ ಮಾಲಿ ಪಾಟೀಲ್ ಗೋಮರ್ಸಿ ಸದಸ್ಯ ಬಸವರಾಜ ಪಾಟೀಲ, ಪತ್ರಯ್ಯ ಹಿರೇಮಠ, ದೊಡ್ಡಮನೆ ನೀರುಪಾದೆಪ್ಪ ಗೋಮರ್ಸಿ, ಹಿರಿಯರಾದ ಯಂಕೋಬಣ್ಣ ಗೋಮರ್ಸಿ, ಶ್ರೀಮತಿ ನೀಲಮ್ಮ ಮುಕನಗೌಡ,ಅಮರಮ್ಮ, ದೊಡ್ಡಬಸಮ್ಮ ಜೋಗತಿ,ಅಯ್ಯಮ್ಮ ಕಲ್ಲೂರು, ಗಂಗಮ್ಮ ಗೋಮರ್ಸಿ ಕರಿಯಪ್ಪ, ಮಕ್ಬೂಲ್ ಸಾಬ್,ಉಮಾದೇವಿ, ಭಾಗ್ಯಶ್ರೀ, ಅಶ್ವಿನಿ, ಮಕ್ಕಳು, ಇನ್ನೂ ಹಲವಾರು ಜನ ಭಾಗವಹಿಸಿದ್ದರು