ಜೂನ್ 16.ಮಸ್ಕಿ ಅಭಿನಂದನ್ ಸಂಸ್ಥೆಯ ಸ್ವಚ್ಚತಾ ಅಭಿಯಾನ ಸಂಡೇ ಫಾರ್ ಸೋಶಿಯಲ್ ವರ್ಕ್ ಅಭಿಯಾನದ ಅಂಗವಾಗಿ 101ನೇಯ ಸೇವಾ ಕಾರ್ಯವನ್ನು ಮಸ್ಕಿ ತಾಲೂಕಿನ ಬೈಲಗುಡ್ಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಲಾಯಿತು. ಈ ಸ್ವಚ್ಛತಾ ಕಾರ್ಯದ ಮೂಲಕ ಈ ಗ್ರಾಮದ ಸರ್ಕಾರಿ ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿ ಶಾಲೆಯ ಗೋಡೆಗಳಿಗೆ, ಕಾಂಪೌಂಡಿಗೆ ಹಾಗೂ ಕಂಬಗಳಿಗೆ ಬಣ್ಣವನ್ನು ಹಚ್ಚುವ ಮೂಲಕ ಶಾಲೆಯ ಅಂದವನ್ನು ಹೆಚ್ಚಿಸುವ ಕಾರ್ಯ ಕೈಗೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಗುರುಗಳು ಸಂಶುದ್ದೀನ್ ಅವರು ಹಲವು ವರ್ಷಗಳ ಹಿಂದೆ ಬಣ್ಣವನ್ನು ಕಂಡಿದ್ದ ನಮ್ಮ ಶಾಲೆ ಇಂದು ಅಭಿನಂದನ್ ಸಂಸ್ಥೆಯ ಈ ಸ್ವಚ್ಛತಾ ಅಭಿಯಾನದ ಮೂಲಕ ಮತ್ತೆ ಮರು ಜೀವವನ್ನು ಪಡೆದಂತಾಗಿದೆ ಈ ರೀತಿಯ ಶಾಲೆಯ ಅಂದ ಚಂದವನ್ನು ಹೆಚ್ಚಿಸಿದ ಅಭಿನಂದನ್ ಸಂಸ್ಥೆಗೆ, ಸಂಡೇ ಫಾರ್ ಸೋಶಿಯಲ್ ವರ್ಕ್ ಅಭಿಯಾನಕ್ಕೆ ಹಾಗೂ ಈ ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲಾ ಸ್ವಯಂಸೇವಕರಿಗೆ ತುಂಬು ಹೃದಯದ ಧನ್ಯವಾದಗಳು. ಅಭಿಯಾನದ ಕೀರ್ತಿ ಇನ್ನೂ ಉತ್ತರೋತ್ತರವಾಗಿ ಹರಡಲಿ ಎಂದು ಅರಸವೆ ಎಂದರು.
ಇದೇ ಸಂದರ್ಭದಲ್ಲಿ ಶಿಕ್ಷಕರಾದ ಸೋಮಶೇಖರ್ ಹಾದಿಮನಿ, ಬೈಲಗುಡ್ಡ ಗ್ರಾಮದ ವೀರಭದ್ರಪ್ಪ, ಅಮರೇಶ್ ನಾಯಕ್, ಶಿವರಾಜ್ ಅಭಿನಂದನ್ ಸಂಸ್ಧೆಯ ಸಂಸ್ಥಾಪಕ ರಾಮಣ್ಣ ಹಂಪರಗುಂದಿ ಸದಸ್ಯರಾದ ಜಾಫರ್ ಮಿಯಾ , ಮಲ್ಲಿಕಾರ್ಜುನ ಬಡಿಗೇರ್, ರವಿಚಂದ್ರ, ಬಸಲಿಂಗಪ್ಪ ಬಾದರ್ಲಿ, ಕಿಶೋರ್ ಹಾಗೂ ಗ್ರಾಮದ ಯುವಕರು ಉಪಸ್ಥಿತರಿದ್ದರು