ರಾತ್ರಿ ಕನ್ನಾ ಕಳವು ಕಳ್ಳರ ಬಂಧನ ಬಂಗಾರ ಆಭರಣಗಳು ಮತ್ತು ನಗದು ಹಣ ವಶ
ಸಿಂಧನೂರು ಅಕ್ಟೋಬರ್ 9. ಪಗಡದಿನ್ನಿ ಪೈ ಕ್ಯಾಂಪಿನಲಿನ ವಿ.ವಾಸು ತಂದೆ ತಂದೆ ಪ್ರಸಾದರಾವ್ ಇವರ ಮನೆಯಲ್ಲಿ ದಿನಾಂಕ: 03-102023 ರಂದು 6-30 ಸಂಜೆ ದಿಂದ 7-30 PM ಗಂಟೆಯ ಮದ್ಯದ ಅವಧಿಯಲಿ, ಮನೆಯ ಹಿಂಬಂದಿಯ ಬಾಗಿಲನ್ನು ಜೋರಾಗಿ ತಳ್ಳಿ, ಒಳಗೆ ಪ್ರವೇಶಿಸಿ ಬೆಡ್ ರೂಮಿನಲ್ಲಿದ್ದ ತಿಜುರಿ ಬೀಗ ತೆಗೆದು ಅದರಲ್ಲಿದ್ದ
1) ಒಟ್ಟು 60 ಗ್ರಾಂ ತೂಕದ 04 ಬಂಗಾರದ ಬಳೆಗಳು ಅಂಕಿರೂ.2,00,000,
2) 50 ಗ್ರಾಂ ತೂಕದ ಬಂಗಾರದ ನೆಕ್ರೆಸ್ ಚೈನ್ ಅಂಕಿರೂ.1,80,000,
3) 20 ಗ್ರಾಂ ತೂಕದ ಬಂಗಾರದ ಬ್ರಾಸಲೆಟ್ ಅಂಕಿರೂ.75,000,
4) 30 ಗ್ರಾಂ ತೂಕದ ಕರಿಮಣಿಯ ಬಂಗಾರದ ಸರ ಅಂಕಿರೂ.90,000,
5)12 ಗ್ರಾಂ ತೂಕದ ಬಂಗಾರದ ಸರ ಅಂಕಿರೂ.40,000,
6) ಕಿವಿಯಲಿ ಧರಿಸುವ 30 ಗ್ರಾಂ ತೂಕದ ಬಂಗಾರದ ಓಲೆಗಳು ಅಂಕಿರೂ.95,000,
7) ಕೈ ಬೆರಳಲ್ಲಿ ಧರಿಸುವ ಒಟ್ಟು 12 ಗ್ರಾಂ ತೂಕದ 03 ಬಂಗಾರದ ಉಂಗುರುಗಳು ಅಂಕಿರೂ.40,000,
8) ನಗದು ಹಣ ರೂ.35,000, ಹೀಗೆ ಒಟ್ಟು 21.4 ತೊಲೆ ಬಂಗಾರ & ನಗದು ಹಣ ಸೇರಿ ಅಂಕಿರೂ.7,55,000/ ಬೆಲೆಬಾಳುವವುಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋದ ಬಗ್ಗೆ ವಿ.ವಾಸು ರವರುಕೊಟ್ಟ ದೂರಿನ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದರಿ ಪ್ರಕರಣದಲ್ಲಿ ಆರೋಪಿತರ ಪತ್ತೆ ಕುರಿತು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರ ಮಾರ್ಗದರ್ಶನದಲ್ಲಿ ಶ್ರೀ ಬಿ.ಎಸ್ ತಳವಾರ ಪೊಲೀಸ್ ಉಪಾಧೀಕ್ಷಕರು ಸಿಂಧನೂರು ರವರ ನೇತೃತ್ವದಲ್ಲಿ ಶ್ರೀ ವೀರಾರೆಡ್ಡಿ ಹೆಚ್, ಸಿಂಧನೂರು ಗ್ರಾಮೀಣ ವೃತ್ತ ನಿರೀಕ್ಷಕರು, ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ರವರುಗಳಾದ ಶ್ರೀ ಭರತ್ ಪ್ರಕಾಶ ಡಿ.ಪಿ, ಚಂದ್ರಶೇಖರ ಹಿರೇಮಠ, ಪ್ರಹ್ಲಾದ ನಾಯ್ಕ ಹಾಗೂ ಅವರ ಸಿಬ್ಬಂದಿಯವರಾದ ಮಲಪ್ಪ ನಾಗರಾಳ ಹೆಚ್ ಸಿ 196, ಗೋಪಾಲ ಪಿಸಿ 679, ಅನಿಲಕುಮಾರ ಪಿಸಿ 447, ಶಿವಲಿಂಗಪ್ಪ ಹೆಚ್ ಸಿ 167, ತಿಪ್ಪಣ ಪಿಸಿ 324, ಸಂಗನಗೌಡ ಪಿಸಿ 498 ಸಿಂಧನೂರು ನಗರ ಠಾಣೆ ಹಾಗೂ ಸಂಗಮೇಶ ಚಾಲಕ ಹಾಗೂ ಅಜೀಂ ಸಿಡಿಆರ್ ಸೆಲ್ DPO ರಾಯಚೂರು ರವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.
ಸದರಿ ತಂಡದವರು ದಿನಾಂಕ: 08-10-2023 ರಂದು ಆರೋಪಿತರಾದ 1), ಸೋಮಣ ತಂದೆ ಶಿವರಾಯಪ್ಪ, ವಯ 20 ವರ್ಷ, ಮಾದಿಗ, ಕೂಲಿಕೆಲಸ ಸಾ:ಬೇಡರ ಕಾರಲಕುಂಟಿ, ತಾ:ಮಸಿ 2) ಬಸವರಾಜ ತಂದೆ ಆಂಥೋನಿ, ವಯ31, ಜಾ: ಪ.ಜಾ(ಮಾದಿಗ), ಉನೆಲುಕೊಯ್ಯುವ ಮಷಿನ್ ಆಪರೇಟರ್, ಸಾ: ಪಗಡದಿನ್ನಿ ಪೈ ಕಾಂಪ್, ತಾ: ಸಿಂಧನೂರು ಇವರುಗಳನ್ನು ದಸ್ತಗಿರಿ ಮಾಡಿ ಯೋಗ್ಯ ವಿಚಾರಣೆಗೊಳಪಡಿಸಿದ್ದು, ಸದರಿಯವರು ಈ ಪ್ರಕರಣದಲ್ಲಿ ರಾತ್ರಿ ಕನ್ನಾ ಕಳುವು ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು ಸದರಿಯವರಿಂದ ಕಳುವಾದ ಎಲಾ ಒಟ್ಟು 22 ತೊಲೆಯ ಬಂಗಾರದ ಆಭರಣಗಳು ಅಂಕಿರೂ,13,20,000/- ಬೆಲೆಬಾಳುವದನ್ನು ವಶಪಡಿಸಿಕೊಳ್ಳಲಾಗಿದೆ, ಸದರಿ ತಂಡದ ಕಾರ್ಯವನ್ನು ಶ್ರೀ ನಿಖಿಲ್.ಬಿ IPS ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ಹಾಗೂ ಶ್ರೀ ಶಿವಕುಮಾರ್.ಆರ್ KSPS ಹೆಚ್ಚುವರಿ ಪೊಲೀಸ್ ಅಧೀಕ್ಷಕರು ರಾಯಚೂರು ರವರು ಶಾಘಿಸಿ ಬಹುಮಾನ ಘೋಷಿಸಿರುತ್ತಾರೆ.