ರಾಯಚೂರು,ಜೂ.೨೧ ರಾಯಚೂರು ತಾಲೂಕಿನ ೩೪ ಗ್ರಾಮ ಪಂಚಾಯತಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ನಿಗದಿಗಾಗಿ ಜೂ.೨೧ರಂದು ರಾಯಚೂರು ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಜ ಸಭಾಂಗಣದಲ್ಲಿ ಆಯಾ ಗ್ರಾ.ಪಂ ಗಳ ಸದಸ್ಯರ ಸಭೆ ನಡೆಯಿತು.
ರಾಯಚೂರು ತಾಲೂಕಿನಲ್ಲಿ ೩೪ ಗ್ರಾಮ ಪಂಚಾಯತಗಳ ಅಧ್ಯಕ್ಷ ಸ್ಥಾನಗಳಲ್ಲಿ ಅನುಸೂಚಿತ ಜಾತಿಗೆ ೯ ಸ್ಥಾನಗಳು (ಈ ಪೈಕಿ ಐದು ಸ್ಥಾನಗಳು ಮಹಿಳೆಯರಿಗೆ), ಅನುಸೂಚಿತ ಪಂಗಡ ೯ ಸ್ಥಾನಗಳು (ಈ ಪೈಕಿ ಐದು ಸ್ಥಾನಗಳು ಮಹಿಳೆಯರಿಗೆ)., ಸಾಮಾನ್ಯ ೧೬ (ಈ ಪೈಕಿ ಏಳು ಸ್ಥಾನಗಳು ಮಹಿಳೆಯರಿಗೆ) ಸ್ಥಾನಗಳಿಗೆ ಮೀಸಲು ನಿಗದಿಪಡಿಸಬೇಕಿದೆ.
ಅದೇ ರೀತಿ ೩೪ ಉಪಾಧ್ಯಕ್ಷ ಸ್ಥಾನಗಳಲ್ಲಿ ಅನುಸೂಚಿತ ಜಾತಿಗೆ ೯ ಸ್ಥಾನಗಳು (ಈ ಪೈಕಿ ಐದು ಸ್ಥಾನಗಳು ಮಹಿಳೆಯರಿಗೆ), ಅನುಸೂಚಿತ ಪಂಗಡ ೯ ಸ್ಥಾನಗಳು (ಈ ಪೈಕಿ ಐದು ಸ್ಥಾನಗಳು ಮಹಿಳೆಯರಿಗೆ), ಸಾಮಾನ್ಯ ೧೬ (ಈ ಪೈಕಿ ಏಳು ಸ್ಥಾನಗಳು ಮಹಿಳೆಯರಿಗೆ) ಸ್ಥಾನಗಳಿಗೆ ಮೀಸಲು ನಿಗದಿಪಡಿಸಬೇಕಿದೆ ಎಂದು ನಿರ್ದೇಶಿಸಿ ರಾಜ್ಯ ಚುನಾವಣಾ ಆಯೋಗವು ಆದೇಶ ಮಾಡಿದ್ದು ಅದರಂತೆ ಅಪರ ಜಿಲ್ಲಾಧಿಕಾರಿ ರವೀಂದ್ರ ಕರಲಿಂಗಣ್ಣವರ ಅವರ ಸಮ್ಮುಖದಲ್ಲಿ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳ ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಯಿತು.
ಗ್ರಾಮ ಪಂಚಾಯತಿವಾರು ವಿವರ: ಶಾಖವಾದಿ ಗ್ರಾಮ ಪಂಚಾಯತ್ಗೆ ಅಧ್ಯಕ್ಷ ಸ್ಥಾನ ಎಸ್.ಸಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ, ಸಗಮಕುಂಟಾ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಎಸ್.ಟಿ, ಆತ್ಕೂರ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಎಸ್.ಸಿ ಮಹಿಳೆ, ಯಾಪಲದಿನ್ನಿ ಅಧ್ಯಕ್ಷ ಸ್ಥಾನ ಎಸ್.ಸಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಚಂದ್ರಬAಡಾ ಅಧ್ಯಕ್ಷ ಸ್ಥಾನ ಎಸ್.ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಎಸ್.ಟಿ ಮಹಿಳೆ, ಬಾಯಿದೊಡ್ಡಿ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಎಸ್.ಸಿ ಮಹಿಳೆ., ಸಿಂಗನೋಡಿ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಎಸ್.ಟಿ ಮಹಿಳೆ, ಕಮಲಾಪೂರ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಎಸ್.ಟಿ ಮಹಿಳೆ, ಲಿಂಗಖಾನದೊಡ್ಡಿ ಅಧ್ಯಕ್ಷ ಸ್ಥಾನ ಎಸ್.ಟಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ, ಜಂಬಲದಿನ್ನಿ ಅಧ್ಯಕ್ಷ ಸ್ಥಾನ ಎಸ್.ಟಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ., ಇಡಪನೂರು ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ, ತಲಮಾರಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಎಸ್ಸಿ, ಗಾಣದಾಳ ಅಧ್ಯಕ್ಷ ಸ್ಥಾನ ಎಸ್.ಟಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ, ಗುಂಜಳ್ಳಿ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಎಸ್.ಸಿ ಮಹಿಳೆ, ಯರಗೇರಾ ಅಧ್ಯಕ್ಷ ಸ್ಥಾನ ಎಸ್.ಟಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ, ಗಿಲ್ಲೆಸುಗೂರು ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಎಸ್ಟಿ, ಬಿಚ್ಚಾಲಿ ಅಧ್ಯಕ್ಷ ಸ್ಥಾನ ಎಸ್.ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ, ಪೂರತಿಪ್ಲಿ ಅಧ್ಯಕ್ಷ ಸ್ಥಾನ ಎಸ್.ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಎಸ್.ಸಿ, ಮಟಮಾರಿ ಅಧ್ಯಕ್ಷ ಸ್ಥಾನ ಎಸ್.ಸಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಮರಿಚಿಟಾಳ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್.ಟಿ ಮಹಿಳೆ, ಮಮದಾಪೂರ ಅಧ್ಯಕ್ಷ ಎಸ್.ಟಿ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಕಲಮಲಾ ಅಧ್ಯಕ್ಷ ಎಸ್.ಟಿ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಜಾಗೀರ ವೆಂಕಟಾಪೂರ ಅಧ್ಯಕ್ಷ ಎಸ್.ಸಿ ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಮನ್ಸಲಾಪೂರ ಅಧ್ಯಕ್ಷ ಎಸ್,ಸಿ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಜೇಗರಕಲ್ ಅಧ್ಯಕ್ಷ ಎಸ್.ಟಿ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಕಡ್ಲೂರು ಅಧ್ಯಕ್ಷ ಎಸ್,ಟಿ, ಉಪಾಧ್ಯಕ್ಷ ಸಮಾನ್ಯ ಮಹಿಳೆ, ದೇವಸುಗೂರು ಅಧ್ಯಕ್ಷ ಎಸ್.ಸಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಚಿಕ್ಕಸುಗೂರು ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್,ಟಿ ಮಹಿಳೆ, ಮಿಟ್ಟಿ ಮಲ್ಕಾಪೂರ ಅಧ್ಯಕ್ಷ ಎಸ್,ಟಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಬಿಜನಗೇರಾ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್,ಸಿ ಮಹಿಳೆ, ಯದ್ಲಾಪೂರ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್,ಟಿ, ಹಿರಾಪೂರ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್,ಸಿ, ಉಡಮಗಲ್ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್.ಸಿ, ನಡಿಗಡ್ಡೆ ಮಲ್ಕಾಪೂರ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್,ಸಿ ಸ್ಥಾನಗಳನ್ನು ನಿಗದಿಪಡಿಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ರಜನಿಕಾಂತ ಚೌಹಾಣ್, ತಹಶೀಲ್ದಾರ ಚನ್ನಮಲ್ಲಪ್ಪ ಗಂಟಿ, ತಾಲೂಕು ಪಂಚಾಯತ್ ಇ.ಓ ರಾಮರೆಡ್ಡಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮಹ್ಮದ್ ಜಿಲಾನಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು
.