ವರದಿ : ಎಚ್.ಕೆ.ಬಡಿಗೇರ್
ಬಡವರ ಬಾರುಕೋಲು ಸುದ್ದಿ
ಮಸ್ಕಿ : ತಾಲೂಕಿನ ಮೆದಿಕಿನಾಳ ಗ್ರಾಮದಲ್ಲಿ ಡಿಸೆಂಬರ್ 22 ರಂದು ಲಿಂ.ಚೆನ್ನಮಲ್ಲ ಶಿವಯೋಗಿಗಳವರ 69ನೇ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ಶ್ರೀ ಶ್ರೀ ಶ್ರೀ ಚನ್ನಮಲ್ಲ ಶಿವಯೋಗಿಗಳ ಮಠ ಮದಿಕಿನಾಳ ಸಮಿತಿಯ ರಾಜಣ್ಣ ಪರಡ್ಡಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿಸೆಂಬರ್ 21 ರಂದು ಹುಡಿ ತುಂಬುವ ಜರುಗುವುದು.
ಈ ಕಾರ್ಯಕ್ರಮದಲ್ಲಿ ಸಂತೆಕೆಲ್ಲೂರಿನ ಗುರುಬಸವ ಸ್ವಾಮೀಜಿ,ಮಸ್ಕಿಯ ವರರುದ್ರಮುನಿ ಸ್ವಾಮೀಜಿ ಸೇರಿದಂತೆ 15 ರಿಂದ 20 ಮಠಗಳ ಮಠಾಧೀಶರು ಪಾಲ್ಗೊಳ್ಳುವ ಸಂಭವ ಇದೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮೆದಿಕಿನಾಳ ಗ್ರಾಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜಾತ್ರಾ ಮಹೋತ್ಸವದ ಯಶಸ್ಸಿಗೆ ಗ್ರಾಮಸ್ಥರು ಸಿದ್ಧತೆ ನಡೆಸಿದ್ದಾರೆ.
ಈಗಾಗಲೇ ಡಿ.12 ರಿಂದ 21 ರ ವರೆಗೆ ಪ್ರತಿನಿತ್ಯ ಸಂಜೆ ಪ್ರವಚನದ ಮಂಗಲ ಕಾರ್ಯಕ್ರಮ ನಡೆಯುತ್ತಿದ್ದು.
ಡಿ.22 ರಂದು ಬೆಳಿಗ್ಗೆ ಚೆನ್ನ ಮಲ್ಲ
ಶಿವಯೋಗಿಗಳ ಗದ್ದುಗೆಗೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯುವವು ಗಂಗಾಸ್ಥಳದಿಂದ ಕುಂಭ ಹಾಗೂ ಚೆನ್ನಮಲ್ಲ ಶಿವಯೋಗಿಗಳ ಭಾವಚಿತ್ರದ ಮೆರವಣಿಗೆ ನಡೆಯಲಿದೆ.ಬೆಳಿಗ್ಗೆ
501 ಮಹಿಳೆಯರಿಗೆ ಹುಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸುವವು. ಸಂಜೆ ರಥೋತ್ಸವ ನಡೆಯಲಿದೆ ವಿವಿಧ ಮಠಾಧೀಶರು,ಸಾಹಿತಿಗಳು,ವಿಧಾನ ಪರಿಷತ್ತಿನ ಸದಸ್ಯರು,ಸಚಿವರು,ಹಾಲಿ ಶಾಸಕರು,ಮಾಜಿ ಶಾಸಕರು ನಡೆಯುವ ಕಾರ್ಯಕ್ರಮದಲ್ಲಿ
ಪಾಲ್ಗೊಳ್ಳಲಿದ್ದಾರೆ ಆದ್ದರಿಂದ ಸಕಲ ಸದ್ಭಕ್ತರು ಜಿಲ್ಲೆ ಜಿಲ್ಲೆಯಿಂದ,ತಾಲೂಕ ತಾಲೂಕಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿ ಗೊಳಿಸಬೇಕು ಎಂದು ರಾಜಣ್ಣ ಪರಡ್ಡಿ ಹಾಗೂ ಸಮಿತಿಯ ಸದಸ್ಯರುಗಳು ತಿಳಿಸಿದರು.ಇದೆ ವೇಳೆಯಲ್ಲಿ ಜಾತ್ರಾ ಮಹೋತ್ಸವದ ಪೋಸ್ಟರ್ ಬಿಡುಗಡೆ ಮಾಡಿದರು.
ಇದೇ ಸಂದರ್ಭದಲ್ಲಿ ಬಸವರಾಜ ಗುಂಡಳ್ಳಿ,ಮಲಕನಗೌಡ,ಪಂಪಣ್ಣ ಗೌಡೂರು ಉಪಸ್ಥಿತರಿದ್ದರು.