ಬಾಗಲಕೋಟೆ ಸೆಪ್ಟೆಂಬರ್ 06. ರಾಂಪೂರ ಏತ ನೀರಾವರಿಗೆ ಭೂಮಿ ಕಳೆದುಕೊಂಡ ಕೆಲ ರೈತರಿಗೆ ಇಪ್ಪತ್ತು ವರ್ಷ ಗಳಿಂದ ಪರಿಹಾರ ನೀಡದೆ ರೈತರಿಂದ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡು ಇಲ್ಲಿಯ ವರೆಗೆ ರೋಡಲಬಂಡ ಕ್ಯಾಂಪ್ ಚಿಕ್ಕ ಹೊನ್ನ ಕುಣಿ ನಾರಾಯಣಪುರ ರಾಯಚೂರು ಬಾಗಲಕೋಟೆ ಬೆಂಗಳೂರು ಸೇರಿದಂತೆ ಎಲ್ಲಾ ಭೂ ಸ್ವಾಧೀನ ಇಲಾಖೆಗಳಿಗೆ ಅಲೆದಾಡಿಸಿ ರೈತರಿಗೆ ಪರಿಹಾರ ನೀಡದೆ ವಂಚನೆ ಮಾಡಿದ್ದು ನಮ್ಮ ಗಮನಕ್ಕೆ ತಂದಾಗ ಇಂದು ಆನಾಹೊಸುರು ರೈತನನ್ನು ಕರೆದುಕೊಂಡು ಭೂ ಸ್ವಾಧೀನ ಇಲಾಖೆ ಬಾಗಲಕೋಟೆಯ ವಿಶೇಷ ಜಿಲ್ಲಾಧಿಕಾರಿಯವರಾದ ಗೊನ್ನುರ ಸರ್ ಬಾಗಲಕೋಟೆ ಇವರನ್ನು ಭೇಟಿಯಾಗಿ ಅವರಿಗೆ ಹಿಂದೆ ನಡೆದ ಎಲ್ಲಾ ವಿಷಯಗಳನ್ನು ಮನವರಿಕೆ ಮಾಡಿಕೊಡಲಾಯಿತು.
ವಿಷಯ ಆಲಿಸಿದ ವಿಶೇಷ ಜಿಲ್ಲಾಧಿಕಾರಿಗಳು ಭೂ ಸ್ವಾಧೀನ ಇಲಾಖೆ ಬಾಗಲಕೋಟೆ ಇವರು ತಕ್ಷಣದಲ್ಲಿ ಆದೇಶ ನೀಡಿದ್ದಕ್ಕೆ ಅವರಿಗೆ ನಮ್ಮ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಧನ್ಯವಾದಗಳು ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಅಧ್ಯಕ್ಷರಾದ ಶರಣಪ್ಪ ಮರಳಿ ಸುಲ್ತಾನ ಪುರ.ಇಲಕಲ್ ತಾಲೂಕ ಅಧ್ಯಕ್ಷರಾದ ಗುರು ಗಾಣಿಗರ .ಹುನಗುಂದ ತಾಲೂಕ ಅಧ್ಯಕ್ಷರಾದ ಬಸನಗೌಡ ಪೈಲ.ಹುನಗುಂದ ತಾಲೂಕ ಕಾರ್ಯಾಧ್ಯಕ್ಷರಾದ ರಸುಲಸಾಬ ತಹಸೀಲ್ದಾರ್ ಹಾಗೂ ರೈತ ರಾಮಣ್ಣ ಆನಾಹೋಸುರು ಇದ್ದರು