ಆಗಸ್ಟ್ 28 ಮಸ್ಕಿ : ಪಟ್ಟಣದ ಬಸವೇಶ್ವರ ನಗರದ ತಹಶೀಲ್ದಾರರ ಕಚೇರಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾ ಸಾಹೇಬ್ ಡಾಕ್ಟರ್ ಎನ್ ಮೂರ್ತಿ ಸ್ಥಾಪಿತ ತಾಲೂಕ ಸಮಿತಿ ವತಿಯಿಂದ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದ ಯಮನೂರಪ್ಪ ಹರಿಜನ ಇವರನ್ನು ಧಾರುಣವಾಗಿ ಕೊಲೆ ಮಾಡಿದ ಆರೋಪಿತರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ನೊಂದ ಕುಟುಂಬಕ್ಕೆ 1 ಕೋಟಿ ಪರಿಹಾರ ಹಾಗೂ ಸರಕಾರಿ ನೌಕರಿ, ಮತ್ತು 4 ಎಕರೆ ಜಮೀನು ನೀಡಬೇಕು ಎಂದು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ನಂತರ ಮಾತನಾಡಿದ ದ.ಸ.ಸ.ಯ ತಾಲೂಕ ಅಧ್ಯಕ್ಷ ಜಮದಗ್ನಿ ಗೋನಾಳ ಮಾತನಾಡಿ ಭಾರತ ದೇಶ ಸ್ವತಂತ್ರವಾಗಿದ್ದರು ಅಸ್ಪೃಶ್ಯತೆ ಮಾತ್ರ ಇನ್ನೂ ಜೀವಂತವಾಗಿದೆ.
ಏಕೆಂದರೆ ಪ್ರತಿ ಮೂರು ನಿಮಿಷಕ್ಕೆ ಒಬ್ಬರಂತೆ ದಲಿತರ ಕೊಲೆಯಾಗುತ್ತಿದೆ,ಇನ್ನೂ 18 ನಿಮಿಷಕ್ಕೆ ಒಮ್ಮೆ ಒಬ್ಬ ಮಹಿಳೆ ಮೇಲೆ ಅತ್ಯಾಚಾರ ನಡೆಯುತ್ತಿದೆ ಆದರು ಸಹ ಇಂತಹ ದೌರ್ಜನ್ಯ,ಅತ್ಯಾಚಾರ,ಕೊಲೆ,ಜಾತಿ ನಿಂದನೆ ಪ್ರಕರಣಗಳಲ್ಲಿ ಕೇವಲ ಬೆರಳಣಿಕೆಯಷ್ಟು ಮಾತ್ರ ಶಿಕ್ಷೆ ಆಗುತ್ತದೆ ಇದರಿಂದಾಗಿ ಆರೋಪಿಗಳು ಶಿಕ್ಷೆಯಿಂದ ಪಾರಾಗುತ್ತಾರೆ ಇದರಿಂದಾಗಿ ದಲಿತರಲ್ಲಿ ಭಯ ಹುಟ್ಟಿಸುತ್ತಾರೆ.
ಈ ಘಟನೆಯನ್ನು ಕುರಿತು ದ.ಸ.ಸ ಯ ನಗರ ಘಟಕದ ಅಧ್ಯಕ್ಷರಾದ ಮಲ್ಲಿಕ್ ಮುರಾರಿ ಮಾತನಾಡಿ ಆಧುನಿಕ 21 ನೇ ಶತಮಾನದಲ್ಲಿ ಕಂಬಾಲಪಲ್ಲಿ ಯಿಂದ ಖೈರ್ಲಂಜಿ ವರೆಗೆ ನಿರಂತರವಾಗಿ ದಲಿತ ಮಹಿಳೆ ಮೇಲೆ ಅತ್ಯಾಚಾರ,ಬಲತ್ಕಾರ,ಮಾನಭಂಗ ಕೃತ್ಯಗಳು ಅವಿರತವಾಗಿ ನಡೆಯುತ್ತಿವೆ ಇವತ್ತಿಗೂ ಕೂಡ ದಲಿತ ಜನರು ಅಪಾಯದ ಬದುಕು ಸಾಗಿಸುತ್ತಿದ್ದಾರೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶವಿಲ್ಲ,ಕ್ಷೌರ ಮಾಡುವುದಿಲ್ಲ,ಗುಡಿ ಪ್ರವೇಶವಿಲ್ಲ,ಹೋಟೆಲ್ ಪ್ರವೇಶವಿಲ್ಲ ಮತ್ತು ದಲಿತರಿಗೆ ಮಂಜೂರಾದ ಭೂಮಿಯನ್ನು ಕೊಡದೆ,ಭೂಮಾಲೀಕರು ದೌರ್ಜನ್ಯವೆಸಗಿ ತಾವೇ ಸಾಗುವಳಿ ಮಾಡುತ್ತಿದ್ದು,ಇದನ್ನು ಗಮನಿಸಿದಾಗ ಭೂ ಸುಧಾರಣೆ ಕಾಯ್ದೆ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ ಎಂದು ಅರ್ಥವಾಗುತ್ತದೆ.
ಈ ಪ್ರತಿಭಟನೆಯನ್ನು ಉದ್ದೇಶಿಸಿ ಶ್ರೀಕಾಂತ್ ಚಿಕ್ಕಕಡಬೂರು ರವರು ಸಹ ಮಾತನಾಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನರಿಗೆ ಉದ್ಯೋಗ ಮೀಸಲಾತಿಯಲ್ಲಿ ಅನ್ಯಾಯವಾಗುತ್ತಿದೆ,ಪರಿಶಿಷ್ಟರ ರಕ್ಷಣೆಗೆಂದು ನೂರಾರು ಕಾನೂನುಗಳನ್ನು ಜಾರಿಗೆ ತಂದಿದ್ದರೂ ಅನುಷ್ಠಾನ ವಾಗುವಲ್ಲಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಕರ್ತವ್ಯ ಕಾರಣವಾಗಿದೆ,ಇದರಿಂದ ದಲಿತರಿಗೆ ರಕ್ಷಣೆ ಇಲ್ಲದಂತೆ ಆಗಿದೆ.ಇದಕ್ಕೆ ಸಾಕ್ಷಿ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕ ಸಂಗನಾಳ ಗ್ರಾಮದ ಯಮನೂರಪ್ಪ ಹರಿಜನ ಈತನನ್ನು ಅದೇ ಗ್ರಾಮದ ಮುದುಕಪ್ಪ ಹಡಪದ ಎನ್ನುವ ವ್ಯಕ್ತಿ ಕ್ಷೌರ ಮಾಡಲು ಕೇಳಿದ್ದಕ್ಕೆ,ಚೂರಿಯಿಂದ ಹಿರಿದು ಕೊಲೆ ಮಾಡಿದ್ದು ಎಂದು ಹೇಳಬಹುದು.
“ಈ ಒಂದು ಘಟನೆ ವಿವರ”
ದಿನಾಂಕ 17.08.2024 ರಂದು ಬೆಳಿಗ್ಗೆ 10:30 ಗಂಟೆ ಯಮನೂರಪ್ಪ ತಂದೆ ಈರಪ್ಪ ಬಂಡಿಹಾಳ ಜಾತಿ ಮಾದಿಗ ವಯಸ್ಸು 27 ಸಂಗನಾಳ ಗ್ರಾಮದ ಮುದುಕಪ್ಪ ಹಡಪದ ಇವರ ಕ್ಷೌರದ ಅಂಗಡಿಗೆ ಹೋಗಿ ಕ್ಷೌರ ಮಾಡಿಸಿ ಕೊಳ್ಳಲು ಜಗಳವಾಗಿದ್ದು,ಮುದುಕಪ್ಪನು ಯಮನೂರಪ್ಪನಿಗೆ ತಲೆ ಬೋಳಿಸುವ ಕತ್ತರಿಯಿಂದ ಹೊಟ್ಟೆಗೆ ಚುಚ್ಚಿದ್ದರಿಂದ ಸ್ಥಳದಲ್ಲಿ ರಕ್ತ ಸ್ರಾವವಾಗಿ ಜೀವ ಬಿಟ್ಟಿದ್ದಾನೆ.ಕ್ಷೌರ ಮಾಡಲು ನಿರಾಕರಿಸಿ ಅಸ್ಪೃಶ್ಯನನ್ನು ಕೊಲೆ ಮಾಡಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವ ಕೃತ್ಯವಾಗಿದೆ,ಗ್ರಾಮೀಣ ಭಾಗದಲ್ಲಿ ಇಂದಿಗೂ ಕೂಡ ದಲಿತ ಜನಾಂಗಕ್ಕೆ ಅಮಾನವೀಯ ನಡುವಳಿಕೆಯಿಂದ ಜೀವ ಸಾಗಿಸುವುದು ದುಸ್ತರವಾಗಿದೆ ಮತ್ತು ಅಲ್ಲಿಯ ತಾಲೂಕ ಆಡಳಿತ ಬೀದಿ ನಾಟಕಗಳಲ್ಲಿ ಮಾತ್ರ ಅಸ್ಪೃಶ್ಯತೆ ನಿರ್ಮೂಲನೆ ಮಾಡುತ್ತಿದ್ದು ಜೀವಂತವಾಗಿರುವ ಅಮಾನವೀಯ ಪದ್ಧತಿಯ ಬಗ್ಗೆ ಯಾವುದೇ ಕಾನೂನು ಕ್ರಮ ತೆಗೆದು ಕೊಂಡಿರುವುದಿಲ್ಲ,ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ.
ಇದೆ ವಿಚಾರಕ್ಕೆ ಸಂಬಂಧಿಸಿದಂತೆ ಸುಭಾಷ ಹಿರೇಕಡಬೂರು ಮಾತನಾಡಿ ಇನ್ನೂ ಮಗನನ್ನು ಕಳೆದು ಕೊಂಡ ಕುಟುಂಬ ಅನಾಥ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದು,ಕೂಡಲೇ ಆರೋಪಿ ಮುದುಕಪ್ಪ ಈತನಿಗೆ ಕಠಿಣ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಬೇಕು,ಮತ್ತು ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ರಕ್ಷಣೆ ನೀಡಬೇಕು ಹಾಗೂ ಇಂತಹ ಪ್ರಕರಣಗಳು ಮರುಕಳಿಸದಂತೆ ಕಠಿಣ ನಿಯಮ ಜಾರಿ ಗೊಳಿಸಬೇಕು ಎಂದು ಆಕ್ರೋಶ ವ್ಯಕ್ತ ಪಡಿಸುತ್ತಾ ಈ ಮನವಿಯನ್ನು ಮಾಡಿಕೊಳ್ಳುತ್ತಾ ತಹಶೀಲ್ದಾರರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಜಮದಗ್ನಿ ಗೋನಾಳ,ಮರಿಸ್ವಾಮಿ ಮುದಬಾಳ,ಮಲ್ಲಿಕ್ ಮುರಾರಿ,ಅನಿಲ್ ಕುಮಾರ್ ಮುದಬಾಳ,ಸಿದ್ದಪ್ಪ ಉದ್ಬಾಳ,ಶ್ರೀಕಾಂತ್ ಚಿಕ್ಕ ಕಡಬೂರು,ಸುಭಾಷ ಹಿರೇಕಡಬೂರು,ರಾಹುಲ್ ಮಸ್ಕಿ,ರವಿಕುಮಾರ್,ಸಾಯಿ ಬಾಬು,ಚಿಕ್ಕಕಡಬೂರು ಮೌನೇಶ ಬಡಿಗೇರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ ಹೆಚ್. ಕೆ. ಬಡಿಗೇರ್