ರಾಯಚೂರು,ಜು.೨೫ ಜಿಲ್ಲೆಯ ಸಿರವಾರ ತಾಲೂಕಿನ ವ್ಯಾಪ್ತಿಯ ಬಾಗಲವಾಡ ಗ್ರಾಮ ಪಂಚಾಯತಿಯ ಗ್ರಾಮ ಒನ್ ಕೇಂದ್ರದಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಉಚಿತವಾಗಿ ಸೇವೆಯನ್ನು ನೀಡಬೇಕೆಂದು ಸೂಚಿಸಿದ್ದರೂ ಹಣ ವಸೂಲಿ ಮಾಡುತ್ತಿರುವುದರಿಂದ ಈ ಗ್ರಾಮ ಒನ್ ಸೇವಾ ಕೇಂದ್ರದ ಐಡಿಯನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನಿಡಿರುವ ಅವರು, ಸಿರವಾರ ತಾಲೂಕಿನ ಬಾಗಲವಾಡ ಗ್ರಾಮ ಪಂಚಾಯತಿಯಲ್ಲಿ ಆಪರೇಟರ್ಗಳಾಗಿ ಕಾರ್ಯನಿರ್ವಹಿಸುತ್ತಿರುವಮೈ ಪಾಷ್-ಕ್ಯೂಪಿಆರ್೨೦೩೩೧ ಹಾಗೂ ಸುನೀಲ್ ಕಂಬಲೆತ್ತಿ-ಕ್ಯೂಪಿಆರ್೨೩೮೯೫ ಅವರು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಅರ್ಜಿಗಾಗಿ ಸರ್ಕಾರದಿಂದ ಯಾವುದೇ ಶುಲ್ಕ ಇಲ್ಲದೇ ಸಾರ್ವಜನಿಕರಿಗೆ ಉಚಿತವಾಗಿ ಸೇವೆ ನೀಡಲು ಸೂಚಿಸಿದ್ದರೂ ಸಹ ಈ ವ್ಯಕ್ತಿಗಳು ಹಣ ಪಡೆದು ಅರ್ಜಿ ಸಲ್ಲಿಕೆ ಮಾಡುತ್ತಿರುವು ಕಂಡು ಬಂದಿರುವುದರಿಂದ ಇವರ ಗ್ರಾಮ್ ಒನ್ಕೇಂದ್ರಕ್ಕೆ ಸಂಬಂಧಪಟ್ಟ ಎಲ್ಲಾ ಸೇವೆಗಳ ಲಾಗಿನ್ ಐಡಿಗಳನ್ನು ನಿಷ್ಕ್ರಿಯಗೊಳಿಸಲಾಗುವುದು ಮತ್ತು ಇದೇ ರೀತಿಯ ಚಟುವಟಿಕೆಯಲ್ಲಿ ತೊಡಗಿದ ಹಾಗೂ ತಮ್ಮ ಲಾಗಿನ್ ಐಡಿಗಳನ್ನು ಬೇರೆಯವರಿಗೆ ನೀಡಿದ್ದೇ ಆದಲ್ಲಿ ಅಂತವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ.