ಏಪ್ರಿಲ್ ೦7.ಸಿರುಗುಪ್ಪ ನಗರದ ತಾಲೂಕು ಕ್ರೀಡಾಂಗಣದಿಂದ ಪೋಲೀಸ್ ಠಾಣೆಯವರೆಗೂ ಪೋಲೀಸ್ ಇಲಾಖೆ ಮತ್ತು ಅರೆಸೇನಾ ಪಡೆಯಿಂದ ಗುರುವಾರ ಸಾಯಂಕಾಲ ಪಥಸಂಚಲನ ನಡೆಸುವುದರೊಂದಿಗೆ ಚುನಾವಣೆ ಭದ್ರತೆಯ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ನಗರದ ಪ್ರಮುಖ ಬೀದಿಗಳಲ್ಲಿ ಶಿಸ್ತುಬದ್ದವಾಗಿ ಪಥಸಂಚಲನದಲ್ಲಿ ಸಾಗುತ್ತಿರುವ ಯೋದರಿಗೆ ಹಾಗೂ ಪೋಲೀಸ್ ಸಿಬ್ಬಂದಿಗಳಿಗೆ ಶ್ರೀ ಕನಕದಾಸ ವೃತ್ತ, ಶ್ರೀ ವಾಲ್ಮೀಕಿ ವೃತ್ತ, ಮಹಾತ್ಮ ಗಾಂಧೀಜಿ ವೃತ್ತ, ಶ್ರೀ ಸಿದ್ದರಾಮೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಶ್ರೀ ನಿಜಶರಣ ಅಂಬಿಗರ ಚೌಡಯ್ಯ ವೃತ್ತ, ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ವೃತ್ತ, ಟಿಪ್ಪು ಸುಲ್ತಾನ್ ವೃತ್ತ, ಹಾಗೂ ಬಾಬು ಜಗಜೀವನ್ ರಾಂ ವೃತ್ತಗಳ ಬಳಿ ನೆರೆದಿದ್ದ ಸಾರ್ವಜನಿಕರು ಪುಷ್ಪಗಳ ಸುರಿಮಳೆಗೈದು ಸ್ವಾಗತಿಸಿದರು.
ಸಿರುಗುಪ್ಪ ವಿಭಾಗದ ಉಪಾಧೀಕ್ಷಕ ವೆಂಕಟೇಶ್ ಅವರು ಮಾತನಾಡಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಪ್ರಾಮಾಣಿಕ ಮತ್ತು ನ್ಯಾಯಸಮ್ಮತವಾಗಿ ಮಾದರಿ ನೀತಿಸಂಹಿತೆಯೊಂದಿಗೆ ಮೇ.೧೦ರಂದು ರಾಜ್ಯಾದ್ಯಂತ ಏಕಕಾಲಕ್ಕೆ ಮತದಾನ ಕಾರ್ಯ ನಡೆಯಲ್ಲಿದ್ದು, ಮತದಾರರು ಯಾವುದೇ ಪಕ್ಷಗಳ ಆಮಿಷಕ್ಕೊಳಗಾಗದೇ ನಿರ್ಭೀತಿಯಿಂದ ಕಡ್ಡಾಯವಾಗಿ ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಪೋಲೀಸ್ ಹಾಗೂ ಅರೆಸೇನಾ ಪಡೆಯ ಭದ್ತತೆಯನ್ನು ಒದಗಿಸಲಾಗಿದ್ದು, ಮತದಾರರು ಶಿಸ್ತು ಮತ್ತು ಶಾಂತಿಪಾಲನೆಯೊಂದಿಗೆ ಕಡ್ಡಾಯವಾಗಿ ಮತದಾನ ಮಾಡುವುದರೊಂದಿಗೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು ತಿಳಿಸಿದರು.
ಇದೇ ವೇಳೆ ಅರೆಸೇನಾ ಪಡೆಯ ಮುಖ್ಯಸ್ಥ ಹರೀಶ್ ಪಾ¯ಣ್ಣ, ಸಿ.ಪಿ.ಐ ಯಶವಂತ ಬಿಸ್ನಳ್ಳಿ, ಸುಂದ್ರೇಶ್ ಹೊಳೆಣ್ಣನವರ್, ಪಿ.ಎಸ್.ಐಗಳಾದ ಕೆ.ರಂಗಯ್ಯ, ಹುಸೇನಪ್ಪನಾಯಕ, ವೆಂಕಟೇಶನಾಯಕ, ಅರುಣ್, ಇನ್ನಿತರ ಸಿಬ್ಬಂದಿಗಳು ಇದ್ದರು
ವರದಿ.ಸಿ.ಖಾಜಾಮೋಹಿದ್ದೀನ್. ಸಿರುಗುಪ್ಪ