ರಾಯಚೂರು,ಏ.29(ಕ.ವಾ):- ರಾಯಚೂರು ಜಿಲ್ಲೆಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ರಾಯಚೂರು, ಗಿಲ್ಲೇಸೂಗೂರು, ಮಾನವಿ, ಸಿಂಧನೂರು, ಲಿಂಗಸೂಗೂರು ಹಾಗೂ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಯರಮರಸ್ ಕ್ಯಾಂಪ್ ವಸತಿ ಶಾಲೆ ಮತ್ತು ಡಾ.ಎ.ಪಿ.ಜೆ, ಅಬ್ದುಲ್ ಕಲಾಂ ವಸತಿ ಶಾಲೆ ರಾಯಚೂರು ಇಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಅಲ್ಪಸಂಖ್ಯಾತರ ಸಮುದಾಯಕ್ಕೆ ಶೇ. 75% ರಷ್ಟು ಸ್ಥಾನಗಳನ್ನು ಮತ್ತು ಶೇ. 25% ರಷ್ಟು ಸ್ಥಾನಗಳನ್ನು ಇತರೆ ವರ್ಗದವರಿಗೆ ಮೀಸಲಿಡಲಾಗಿರಿಸಿ, ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ಮಿತಿ ರೂ.1,00,000/-ಕ್ಕೆ ಮೀತಿಯಲ್ಲಿರಬೇಕು ಹಾಗೂ ಹಿಂದುಳಿದ ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ರೂ.2,50,000/- ಮಿತಿಯೊಳಗಿರತಕ್ಕದ್ದು, ಪ್ರಸ್ತುತ ಕರ್ನಾಟಕದ ಸರ್ಕಾರದ/ಅಂಗೀಕೃತ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ಉತ್ತೀರ್ಣರಾದ ಅರ್ಹ ವಿದ್ಯಾರ್ಥಿಗಳಿಂದ 6ನೇ ತರಗತಿ ಪ್ರವೇಶಕ್ಕಾಗಿ ಆನ್ ಲೈನ್ (ಸೇವಾಸಿಂಧೂWebsite:https://sevasindhuservices.karnataka.gov.in) ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಏ.27 ರಿಂದ ಮೇ.13ರವರೆಗೆ ಸಂಜೆ:5:30ರೊಳಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ರಾಯಚೂರು ಮೊ.ಸಂ. 7406802935, 9731028420,ಮಾನವಿ, ಸಿರವಾರ: ಮೊ.ನಂ:-7411771075, 886733478, ದೇವದುರ್ಗ: ಮೊ.ನಂ:- 9148233616, ಲಿಂಗಸೂಗೂರು, ಮಸ್ಕಿ ಮತ್ತು ಸಿಂಧನೂರು: ಮೊ.ನಂ:- 8217621732, 9740871306ಗೆ ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.