ಮಸ್ಕಿ ಜುಲೈ 14.ಮಸ್ಕಿಯ ಹೊರವಲಯದಲ್ಲಿರುವ ಅಭಿನಂದನ ಸ್ಪೂರ್ತಿ ಧಾಮದಲ್ಲಿ ಜ್ಞಾನ ಸಂಗಮ ಸ್ಪೂರ್ತಿ ಧಾಮ ವಿಶೇಷ ಉಪವಾಸ ಕಾರ್ಯಕ್ರಮದಲ್ಲಿ ಮಸ್ಕಿಯ ಹಿರಿಯ ಸಾಹಿತಿಗಳಾದ ವೀರೇಶ್ ಸೌದ್ರಿ ಅವರು ಮಾತನಾಡಿ ಅಭಿನಂದನ್ ಸಂಸ್ಧೆಯ ಹಲವಾರು ಸಾಮಾಜಿಕ ಕಾರ್ಯಗಳು ಸಾರ್ವಜನಿಕರ ಮೆಚ್ಚುಗೆಯನ್ನು ಪಡೆದಿದ್ದು ಇಂದಿನಿಂದ ಆರಂಭವಾದ ಜ್ಞಾನ ಸಂಗಮ ಸ್ಫೂರ್ತಿ ಧಾಮ ವಿಶೇಷ ಉಪನ್ಯಾಸ ಕಾರ್ಯಕ್ರಮಗಳ ಮೂಲಕ ಶೈಕ್ಷಣಿಕವಾಗಿ ಸಂಸ್ಥೆಗಳು ಬೆಳೆಯಬೇಕಾದರೆ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದ್ದು ಮತ್ತು ಪರಿಶ್ರಮದ ಶಿಕ್ಷಕರು ಸಮಾಜಕ್ಕೆ ತುಂಬಾನೇ ಅವಶ್ಯಕತೆ ಎಂದು ಹೇಳಿದರು ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾದ ಲಕ್ಷ್ಮೀಶ ನಾರಾಯಣ್ ಶ್ರೇಷ್ಠಿ ಮಾತನಾಡಿ ಇಂತಹ ಕಾರ್ಯಕ್ರಮಗಳು ಅಭಿನಂದನ್ ಸ್ಪೂರ್ತಿ ಧಾಮದಲ್ಲಿ ನಿರಂತರವಾಗಿ ನಡೆಯಲಿ ಕಾರ್ಯಕ್ರಮಗಳಿಗೆ ನಾವು ಸದಾ ಕಾಲ ಬೆನ್ನೆಲುಬಾಗಿರುತ್ತವೆ ಎಂದು ಹೇಳಿದರು.
ವೈದ್ಯರಾದ ಮಲ್ಲಿಕಾರ್ಜುನ್ ಶ್ರೇಷ್ಠಿ ಮಾತನಾಡಿ ಮನೆಯಲ್ಲಿ ಎರಡು ಮಕ್ಕಳನ್ನು ಸಾಕುವುದೇ ಕಷ್ಟ ಅಂತಹದ್ದರಲ್ಲಿ 36 ಮಕ್ಕಳಿಗೆ ಊಟ ವಸತಿ ಸಹಿತ ಶಿಕ್ಷಣ ನೀಡುತ್ತಿರುವುದು ಅಭಿನಂದ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ನಂತರ ನೂತನ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿರೇಶ ಸೌದ್ರಿ ಹಾಗೂ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಶ್ರೇಷ್ಠಿ, ಕಾರ್ಯದರ್ಶಿಗಳಾದ ಶಿವಪ್ರಸಾದ್ ಕ್ಯಾತ್ನೆಟ್ಟಿ, ಖಜಾಂಚಿಗಳಾದ ಮಲ್ಲಿಕಾರ್ಜುನ ಶ್ರೇಷ್ಠಿ ಅವರಿಗೆ ಸಂಸ್ಥೆಯ ವತಿಯಿಂದ ಗೌರವ ಅರ್ಪಣೆ ಮಾಡಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಪ್ರಸಾದ್ ಕ್ಯಾತ್ನೆಟ್ಟಿ ವಹಿಸಿಕೊಂಡಿದ್ದರು ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಕಳಕಪ್ಪ ಹಾದಿಮನಿ, ಮಹಾಂತೇಶ ಎಚ್, ಮಹೇಶ್ ಶೆಟ್ಟರ್, ಅರುಣಕುಮಾರ ಶ್ರೇಷ್ಠಿ, ಅಭಿನಂದನ್ ಸಂಸ್ಧೆಯ ಸಂಸ್ಥಾಪಕ ರಾಮಣ್ಣ ಹಂಪರಗುಂದಿ ಸದಸ್ಯರಾದ ಜಾಫರ್ಮಿಯ ಮಲ್ಲಿಕಾರ್ಜುನ ಬಡಿಗೇರ್ ರವಿಚಂದ್ರ ಬಸಲಿಂಗಪ್ಪ ಬಾದರ್ಲಿ ಕಿಶೋರ್, ಅಮಿತ್ ಕುಮಾರ್ ಪುಟ್ಟಿ, ಇತರರು ಉಪಸ್ಥಿತರಿದ್ದರು..