ಮಾ 29.ಬಳ್ಳಾರಿ ಮಹಾನಗರ ಪಾಲಿಕೆಯ ನೂತನ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನ ಯುವತಿ ತ್ರಿವೇಣಿ ಆಯ್ಕೆಯಾಗಿದ್ದಾರೆ. ತ್ರಿವೇಣಿ, 23 ನೇ ವಯಸ್ಸಿನಲ್ಲಿ, ರಾಜ್ಯದ ಅತ್ಯಂತ ಕಿರಿಯ ಮೇಯರ್ ಆಗಿದ್ದು ಸಂತೋಷದ ವಿಷಯ ಒಂದೆಡೆ ಆದರೆ ಇನ್ನೊಂದೆಡೆ ಉಪಮೇಯರ್ ಆಗಿ ಕಾಂಗ್ರೆಸ್ ನ ಬಿ.ಜಾನಕಿ ಯಾವುದೇ ವಿರೋಧವಿಲ್ಲದೆ ಆಯ್ಕೆಯಾಗಿದ್ದಾರೆ
ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 44 ಮತದಾರರಿದ್ದು, ಈ ಪೈಕಿ ತ್ರಿವೇಣಿಯವರು 28 ಮತಗಳನ್ನು ಪಡೆದರೆ, ಬಿಜೆಪಿಯ ನಾಗರತ್ನಮ್ಮ 16 ಮತಗಳನ್ನು ಪಡೆದರು. ಮತ್ತು ಉಪಮೇಯರ್ ಸ್ಥಾನಕ್ಕೆ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಬಿ.ಜಾನಕಿ ಅವರ ಆಯ್ಕೆ ಅವಿರೋಧವಾಗಿತ್ತು.
ತ್ರಿವೇಣಿ ನಾಲ್ಕನೇ ವಾರ್ಡ್ನಿಂದ ಪಾಲಿಕೆಗೆ ಆಯ್ಕೆಯಾಗಿದ್ದರೆ, ಬಿ.ಜಾನಕಿ 33ನೇ ವಾರ್ಡ್ ಪ್ರತಿನಿಧಿಸುತ್ತಿದ್ದಾರೆ. ಪಾಲಿಕೆಯಲ್ಲಿ 26 ಸದಸ್ಯರು ಹಾಗೂ ಐವರು ಪಕ್ಷೇತರ ಬೆಂಬಲಿಗರು ಸೇರಿ ಒಟ್ಟು 39 ವಾರ್ಡ್ ಗಳಲ್ಲಿ ಕಾಂಗ್ರೆಸ್ ಪಕ್ಷ ಪ್ರಬಲ ಅಸ್ತಿತ್ವ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಪಾಲಿಕೆಯಲ್ಲಿ ಬಿಜೆಪಿ 13 ಸದಸ್ಯರು ಇದ್ದಾರೆ