ಸಿಂಧನೂರು ಆಗಸ್ಟ್ 21 ಸಿಂಧನೂರು ‘ಬಿ’ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟ, ಶನಿವಾರ ನಡೆದ ನಗರದ ಹೋಲಿ ಫ್ಯಾಮಿಲಿ ಶಾಲೆಯ ಆವರಣದಲ್ಲಿ, ನಡೆಯಿತು.
ಈ ಕ್ರೀಡಾಕೂಟದಲ್ಲಿ ಕ್ಲಸ್ಟರ್ ಮಟ್ಟದ ಬಾಲಕಿಯರ ಥ್ರೊಬಾಲ್ ಫೈನಲ್ ಪಂದ್ಯದಲ್ಲಿ ಉತ್ತಮ ಪೈಪೋಟಿಯೊಂದಿಗೆ ಆನಂದ ಪಬ್ಲಿಕ್ ಪ್ರಾಥಮಿಕ ಶಾಲೆಯ ವಿರುದ್ಧ ಸಹನಾ ಹಿರಿಯ ಪ್ರಾಥಮಿಕ ಶಾಲೆಯ ಜಯಗಳಿಸಿತು, ಅದೆ ಶಾಲೆಯ ಬಾಲಕರ ವಿಭಾಗದ ಥ್ರೋಬಾಲ್ ಫೈನಲ್ ಪಂದ್ಯದಲ್ಲಿ ಉತ್ತಮ ಪೈಪೋಟಿಯೊಂದಿಗೆ ದ್ವಿತಿಯ ಸ್ಥಾನ ಪಡೆಯಿತು.
ವೈಯಕ್ತಿಕ ವಿಭಾಗದಲ್ಲಿ ಬಾಲಕಿಯರ ಗುಂಡು ಎಸೆತ, ಚಕ್ರ ಎಸೆತದಲ್ಲಿ ಕು. ನಂದಿತಾ ಹಾಗೂ ಭುವನ ಕ್ರಮವಾಗಿ ಪ್ರಥಮ, ದ್ವಿತಿಯ ಸ್ಥಾನ ಗಳಿಸಿದರು ಹಾಗೂ 400 ಮೀಟರ್ ಓಟದಲ್ಲಿ ರೀವಾ ದ್ವಿತಿಯ ಸ್ಥಾನ, ಹಾಗೂ ಬಾಲಕರ ವಿಭಾಗದಲ್ಲಿ 100 ಮೀಟರ್ ಓಟದಲ್ಲಿ ಸೈಯದ್ ನೂಮಾನ್ ದ್ವಿತಿಯ ಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
https://youtu.be/EXHZCzNyWsg?si=F8SoQZdyZ4ZMHep4
ಕ್ರೀಡಾಕೂಟದಲ್ಲಿ ಸೋಲು ಗೆಲುವುಗಳಿಗಿಂತ ಭಾಗವಹಿಸುವಿಕೆ ಮುಖ್ಯ ಎಂದು ಹೇಳಿದ ಶಾಲಾ ಆಡಳಿತ ಮಂಡಳಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ (ಅಇಔ) ಪ್ರಾಂಶುಪಾಲರು ಹಾಗೂ ದೈಹಿಕ ಶಿಕ್ಷಕರಾದ ಮರಿಸ್ವಾಮಿ ಹಾಗೂ ಯುವರಾಜ ರೆಡ್ಡಿಯವರು ಮಕ್ಕಳ ಸಾಧನೆಗೆ ಪ್ರೋತ್ಸಾಹಿಸಿ ಮುಂದಿನ ಹಂತಕ್ಕೆ ಶುಭಕೋರಿರುತ್ತಾರೆ ಎಂದು ಶಾಲೆಯ ಮುಖ್ಯಸ್ಥರು ತಿಳಿಸಿದ್ದಾರೆ.