ಬಡವರ ಬಾರುಕೋಲು ಸುದ್ದಿ
ಮಸ್ಕಿ :
ಕಾರ್ಮಿಕ ವಿರೋಧಿ 4 ಕಾರ್ಮಿಕ ಸಂಹಿತೆಗಳನ್ನು ರದ್ಧಗೊಳಿಸಲು ಮತ್ತು ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದುಗೊಳಿಸಿ,ಎಲ್ಲಾ ಕಾರ್ಮಿಕರನ್ನು ಖಾಯಂಗೊಳಿಸಿ ಮಾಸಿಕ ವೇತನ 35 ಸಾವಿರ ನಿಗಧಿಗೊಳಿಸಿ,ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಒತ್ತಾಯಿಸಿ ಹಾಗೂ ಗಗನಕ್ಕೇರುತ್ತಿರುವ ಬೆಲೆ ಏರಿಕೆ,ಖಾಸಗೀಕರಣ ಮತ್ತು ರಾಷ್ಟ್ರದ ಸಂಪನ್ಮೂಲ ಮಾರಾಟವನ್ನು ವಿರೋಧಿಸಿ,ಶ್ರಮಜೀವಿ ಪ್ರಜಾಪ್ರಭುತ್ವ ಹಾಗೂ ಸಮಾಜವಾದಕ್ಕೆ ಸಂಬಂಧಿಸಿದಂತೆ ದಿನಾಂಕ 24,25,ನವೆಂಬರ್ 2024 ರಂದು ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ
ಪ್ರಥಮ ಕರ್ನಾಟಕ ರಾಜ್ಯ ಸಮ್ಮೇಳನ ಇರುವುದರಿಂದ ಮಸ್ಕಿ ತಾಲೂಕು ಸಮಿತಿಯ ವತಿಯಿಂದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಹನುಮಂತ ದೀನಸಮುದ್ರ,ಚಂದಸಾಬ್ ಬೆಳ್ಳಿಗನೂರು,ದೇವರಾಜ್ ಮಡಿವಾಳ,ರಮೇಶ್ ಪೆಂಟರ್,ಸೋಮಣ್ಣ,ಸಿದ್ದಪ್ಪ ಸೇರಿದಂತೆ ಇತರರು ಇದ್ದರು.
ವರದಿ : ಎಚ್.ಕೆ.ಬಡಿಗೇರ್
ಸಿಪಿಐ ಮತ್ತು ಕರ್ನಾಟಕ ರೈತ ಸಂಘದಿಂಧ ಧರಣಿ ಸತ್ಯಾಗ್ರಹ