ರಾಯಚೂರು ಜುಲೈ 05.ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಲೋಕಾಯುಕ್ತ ದಾಳಿಗೆ ಗುರಿಯಾಗಿರುವ ಅಜಿತ್ ಕುಮಾರ್ ರೈ ಇವರನ್ನು ರಾಯಚೂರು ಜಿಲ್ಲೆಯ ಸಿರವಾರಕ್ಕೆ ತಾಲೂಕಿನ ಎರಡನೇ ಗ್ರೇಡ್ ತಹಶೀಲ್ದಾರರಾಗಿ ನೇಮಕ ಗೊಳಿಸಿದ್ದನ್ನು ರಾಜ್ಯ ಸರ್ಕಾರ ಕೂಡಲೇ ರದ್ದುಗೊಳಿಸಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ನಿರುಪಾದಿ ಕೆ ಗೋಮರ್ಸಿ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರಿನ ಕೆಆರ್ ಪುರಂ ತಸಿಲ್ದಾರರಾದ ಅಜಿತ್ ಕುಮಾರ್ ರೈ ಲೋಕಾಯುಕ್ತ ದಾಳಿಯಿಂದ 500 ಕೋಟಿಗೂ ಹೆಚ್ಚು ಅಕ್ರಮ ಹಣ ಸಂಪಾದನೆ ಮಾಡಿದ ವಿಷಯ ಪತ್ತೆಯಾಗಿದೆ ಇವರನ್ನು ಸಿರವಾರಕ್ಕೆ ವರ್ಗಾಯಿಸಿರುವ ರಾಜ್ಯ ಸರ್ಕಾರ ಆದೇಶ ರದ್ದು ಪಡಿಸಬೇಕು ಎಂದು ಆಗ್ರಹಿಸಿದರು. ನಮ್ಮ ಜಿಲ್ಲೆಗೆ ದಕ್ಷ ,ಪ್ರಾಮಾಣಿಕ ಹಾಗೂ ನಿಷ್ಟಾವಂತ ಅಧಿಕಾರಿಗಳ ಅವಶ್ಯಕತೆ ಇದೇ ಆದರೆ ಕರ್ನಾಟಕದ ಜನರ ಮುಂದೆ ಛಿ, ತೂ ಎಂದು ಉಗಿಸಿಕೊಂಡ ಅಜಿತ್ ಕುಮಾರ್ ರೈ ಅಂತಹ ಅಧಿಕಾರಿಗಳ ಅವಶ್ಯಕತೆ ನಮಗಿಲ್ಲ ಎಂದು ತಿಳಿಸಿದರು. ರಾಯಚೂರು ಜಿಲ್ಲೆಯ ಸಿರೀವರ ತಾಲೂಕು ರಾಜಕೀಯವಾಗಿ ,ಆರ್ಥಿಕವಾಗಿ, ಸಾಮಾಜಿಕವಾಗಿ , ಶೈಕ್ಷಣಿಕವಾಗಿ ಬಹಳ ಇಂದುಳಿದಿದ್ದು ತಾಲೂಕಿನ ಜನರ ಜೀವನಾಡಿಯಾಗಿ ಕಾರ್ಯ ನಿರ್ವಹಿಸಲು ಸಾಮರ್ಥ್ಯವಿರುವ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಶಿಫಾರಸ್ಸು ಮಾಡಬೇಕು ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಗಳ ಜೊತೆ ಬ್ರಷ್ಟಚಾರದ ಗ್ಯಾರಂಟಿ ನೀಡಿದಂತಾಗಿದೆ ಹಾಗೂ ಮಾನ್ವಿ ತಾಲೂಕಿನ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿಗಳು ಈ ಬಗ್ಗೆ ಸದನದಲ್ಲಿ ಗಂಭೀರವಾಗಿ ದ್ವನಿ ಎತ್ತಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ KRS ಪಕ್ಷದ ವಿವಿಧ ತಾಲೂಕಿನ ಮುಖಂಡರಾದ ರಾಮಣ್ಣ RHJ, ರಾಘವೇಂದ್ರ ಕಂದುರು, ಐ ಕುಮಾರ್ ನಾಯಕ್,ವಿಜಯ ಕುಮಾರ್,ಚನ್ನಬಸವ , ಸೋಮಲಪೂರ ,ವಿಶ್ವನಾಥ್ ನಾಯುಡು,ಬಸವಪ್ರಭು,ಶಿವರಾಜ್ ಕಪಗಲ್,ಶ್ರಿಮತಿ ಅನಿತಾ ,ಅಯ್ಯಪ್ಪ , ನಿರುಪಾದಿ ಕೆ ಗೊಮರ್ಸಿ ಹಾಗೂ ಇತರರು ಇದ್ದರೂ