ಮಸ್ಕಿ : ತಾಲೂಕಿನ ಮಟ್ಟೂರು ಗ್ರಾ.ಪಂ.ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾಗಿ ಈ
ಹಿಂದೆ ಕಾರ್ಯನಿರ್ವಹಿಸಿದ ಪಂ.ಅ.ಅಧಿಕಾರಿ ತಿಮ್ಮನಗೌಡ ಹಾಗೂ ಈಗ ಪ್ರಸ್ತುತ
ಕಾರ್ಯನಿರ್ವಹಿಸುತ್ತಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೃಷ್ಣ ಇವರು
2022-23 ಮತ್ತು 2023-24,2024-25ನೇ ಸಾಲಿನ 15ನೇ ಹಣಕಾಸಿನಲ್ಲಿ ಭಾರೀ ಭ್ರಷ್ಟಾಚಾರ ಮಾಡಿ ಹಣವನ್ನು ದುರ್ಬಳಕೆ ಮಾಡಿಕೊಂಡು ಸದಸ್ಯರಿಗೆ ಹಾಗೂ ಅಧ್ಯಕ್ಷರುಗಳಿಗೆ ಹಣವನ್ನು ಕೊಟ್ಟು ಖೊಟ್ಟಿ ದಾಖಲಾತಿಗಳನ್ನು ಸೃಷ್ಟಿಸಿ, ಗ್ರಾ.ಪಂ.ಅಧ್ಯಕ್ಷರ ಸಂಬಂಧಿಕರ ಹೆಸರುಗಳ ಮೇಲೆ ಮತ್ತು ಗ್ರಾ.ಪಂ.ಹೆಸರಿನವರ ಮೇಲೆ ಕಾಮಗಾರಿಗಳನ್ನು ಕೈಗೊಳ್ಳದೇ ಖೊಟ್ಟಿ ದಾಖಲಾತಿಗಳನ್ನು ಸೃಷ್ಟಿಸಿ ಅಕ್ರಮವಾಗಿ ಸರಕಾರದ ಹಣವನ್ನು ಸದಸ್ಯರು ತಮ್ಮ ಸಂಬಂಧಿಕರ ಹೆಸರಿನ ಮೇಲೆ ಬಿಲ್ಲು ಮಾಡಿಕೊಂಡು ನಿಯಮಬಾಹಿರವಾಗಿ ಸರಕಾರದ ಲಕ್ಷಾಂತರ ಹಣವನ್ನು ಲಪಟಾಯಿಸಿರುತ್ತಾರೆ.
ಆದ್ದರಿಂದ ಉನ್ನತ ಮಟ್ಟದ ಅಧಿಕಾರಿಗಳಿಂದ ವಿಶೇಷ ತಂಡ ರಚನೆ ಮಾಡಿ ಸಂಬಂಧಪಟ್ಟ ಅಕ್ರಮದಲ್ಲಿ ಭಾಗಿಯಾದ ಸದಸ್ಯರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು,ಮತ್ತು ಮಟ್ಟೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಾದ ತಿಮ್ಮನಗೌಡ ಪಾಟೀಲ್,ಕೃಷ್ಣ ಇವರ ಮೇಲೆ ಮೋಸ,ವಂಚನೆ ಪ್ರಕರಣ ದಾಖಲಿಸಬೇಕು ಹಾಗೂ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನಮ್ಮ ಸಂಘಟನೆಯ ವತಿಯಿಂದ ಒತ್ತಾಯ ಮಾಡುತ್ತಾ ದಿನಾಂಕ 30-11-2024 ರಂದು ಮಸ್ಕಿ ತಾಲೂಕ ಪಂಚಾಯತ ಕಾರ್ಯಾಲಯದ ಮುಂದೆ ಧರಣಿಯನ್ನು ಹಮ್ಮಿಕೊಳ್ಳಲಾಗುವದು ಎಂದು ತಮ್ಮಗಳ ಗಮನಕ್ಕೆ ತರಬಯಸುತ್ತೇವೆ ಒಂದು ವೇಳೆ ಇದನ್ನು ಹಗುರವಾಗಿ ತೆಗೆದುಕೊಂಡರೆ ಮುಂದಿನ ದಿನಮಾನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಬಸವರಾಜ ಕುಣೆಕೆಲ್ಲೂರು,ಬಸವರಾಜ ಮ್ಯಾಗಳಮನಿ, ಬಸವಲಿಂಗ ಕುಣೆಕೆಲ್ಲೂರು,ಬಸನಗೌಡ,ರವಿನಾಯಕ,ರಮೇಶ ತಳವಾರ,ಚಂದ್ರು ನಾಯಕ, ದುರುಗೇಶ,ಸಿದ್ದಪ್ಪ,ಅಜಯ್,ಗದ್ದೆಪ್ಪ,ಕರಿಹೊಳಿಯಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಎಚ್.ಕೆ.ಬಡಿಗೇರ್
ಸಿಂಧನೂರಿನ ಸಾರ್ವಜನಿಕರು ಕುಡಿದಿದ್ದು ನೀರಲ್ಲ ಚರಂಡಿ ನೀರು.!