ಏಪ್ರಿಲ್ 12 ಅನಿಲ್ ಕುಮಾರ್ ಅಡಳಿತ ಅಧಿಕಾರಿ ಗಳು ವಿಸ್ಡಮ್ ಕಾಲೇಜ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಸಿಂಧನೂರು ಇವರ ಹುಟ್ಟು ಹಬ್ಬವನ್ನು ಕಾಲೇಜಿನಲ್ಲಿ ಆಚರಿಸಲಾಯಿತು
ನಂತರ ಮಾತನಾಡಿದ ಪ್ರಾಚಾರ್ಯರ ರಾಮನಗೌಡ ಬಾವಿಕಟ್ಟಿ ಹುಟ್ಟಿದ ದಿನ ಎಂದರೆ ಎಲ್ಲರಿಗೂ ಸಂಭ್ರಮದ ದಿನ. ಹಿಂದೆ ಗುರು ಹಿರಿಯರ, ದೇವರ ಆಶೀರ್ವಾದವನ್ನು ಪಡೆಯುವ ದಿನವಾಗಿದ್ದ ಹುಟ್ಟಿದ ದಿನ, ಇಂದು ವಿದೇಶ ಸಂಸ್ಕೃತಿಯಲ್ಲಿ ಕೊಚ್ಚಿಹೋಗಿದೆ. ಪಾಶ್ಚಾತ್ಯ ಸಂಸ್ಕೃತಿಯಂತೆ ಇಂದು ಹುಟ್ಟುಹಬ್ಬವನ್ನು ಹೇಗೆ ಆಚರಿಸುತ್ತಾರೆ.
ದಿನವಿಡೀ ಏನೇನು ಮಾಡಬೇಕು ಎಂದು ಅನೇಕ ದಿನಗಳ ಹಿಂದೆ ನಿಯೋಜನೆ ಮಾಡುತ್ತೇವೆ. ಆಪ್ತೇಷ್ಟರನ್ನು ಆಮಂತ್ರಿಸುತ್ತೇವೆ. ತನ್ನ ಮಗುವಿಗೆ ಯಾವ ಕಾರ್ಟೂನ್ ಇಷ್ಟವಾಗುತ್ತದೆ ಎಂದು ಸೂಕ್ಷ್ಮವಾಗಿ ಗಮನಿಸಿ, ಡೋರೆಮಾನ್, ಪೋಕಿಮ್ಯಾನ್, ಆನ್ಯಾ, ಬೆಲ್ಲಾ, ಹನುಮಾನ್ ಹೀಗೆ ಅವರಿಗೆ ಇಷ್ಟವಾಗುವ ಕೇಕ್ ಗಳನ್ನು ಹುಟ್ಟಹಬ್ಬದಂದು ತರುತ್ತೇವೆ. ಹುಟ್ಟಿದ ದಿನ ಎಲ್ಲರೂ ಸೇರಿ ಮೇಣದ ಬತ್ತಿಗಳನ್ನು ಆರಿಸಿ, ಕೇಕ್ ಕತ್ತರಿಸುವಾಗ ‘happy birthday to you’ ಎಂದು ಹಾಡು ಶುಭಕೋರುತ್ತಾರೆ. ಅದಾದ ನಂತರ ಸಂಗೀತ, ನೃತ್ಯ, ಜಾದೂ, ವಿಚಿತ್ರ ಆಟಗಳ ಮಧ್ಯದಲ್ಲಿ ಹುಟ್ಟುಹಬ್ಬವನ್ನು ಆಚರಿಸುವ ನಿಜವಾದ ಅರ್ಥವನ್ನು ಮರೆತುಹೋಗುತ್ತಾರೆ ಆಗಾಗದಂತೆ ಮುಂದಿನ ದಿನಗಳಲ್ಲಿ ಎಚ್ಚೆತ್ತುಕೊಂಡು ಸಾಂಪ್ರದಾಯದಂತೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳೊಣ ಎಂದು ಹೇಳಿದರು
ಈ ಕಾರ್ಯಕ್ರಮದಲ್ಲಿ ಎಲ್ಲಾ ಸಹೋದ್ಯೋಗಿಗಳು . ಕಾಲೇಜಿನ ಖಜಾಂಜಿ ಗಳಾದ S.A. ಖಾದ್ರಿ , ಪದವಿ ಪ್ರಾಚಾರ್ಯರು ಆದ ಶರೀಫ್ ಹಸಮಕಲ್, ಪದವಿಪೂರ್ವ ಪ್ರಾಚಾರ್ಯರು ಆದ ರಾಮನಗೌಡ ಭಾವಿಕಟ್ಟಿ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.