ರಾಯಚೂರು,ಏ.17(ಕವಾ):- ಕರ್ನಾಟಕ ವಿಧಾನಸಭೆ ಚುನಾವಣೆ-2023ರ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಸುವ್ಯವಸ್ಥಿತ ಹಾಗೂ ಪಾರದರ್ಶಕ ಚುನಾವಣೆಯನ್ನು ನಡೆಸಲು ಜಿಲ್ಲೆಯ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳಿಗೆ ವೆಚ್ಚ ವೀಕ್ಷಕರು, ಸಾಮಾನ್ಯ ವೀಕ್ಷಕರು ಮತ್ತು ಈ ವೀಕ್ಷಕರಿಗೆ ಲೈಸನ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ವೆಚ್ಚ ವೀಕ್ಷಕರ ಸಂಪರ್ಕ ಮಾಹಿತಿ ಇಂತಿದೆ: 53-ರಾಯಚೂರು ಗ್ರಾಮಿಣ ವಿಧಾನಸಭಾ ಕ್ಷೇತ್ರ, 54-ರಾಯಚೂರು ನಗರ ವಿಧಾನಸಭಾ ಕ್ಷೇತ್ರ ಹಾಗೂ 55- ಮಾನವಿ ವಿಧಾನಸಭಾ ಕ್ಷೇತ್ರಕ್ಕೆ ಕೆ.ಕೆ ಕೃಷ್ಣ ಪ್ರಸಾದ ಮೊ.ಸಂಖ್ಯೆ: 6361293387, ಅವರನ್ನು ವೆಚ್ಚ ವೀಕ್ಷಕರನ್ನಾಗಿ ನಿಯೋಜಿಸಲಾಗಿದೆ. 56-ದೇವದುರ್ಗ ಹಾಗೂ 58- ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಅಭಿಮನ್ಯೂ ಸಿಂಗ್ ಯಾದವ್ ಮೊ.ಸಂಖ್ಯೆ: 8618268177 ಅವರನ್ನು ವೆಚ್ಚ ವೀಕ್ಷಕರನ್ನಾಗಿ ನಿಯೋಜಿಸಲಾಗಿದೆ ಹಾಗೂ 57-ಲಿಂಗಸುಗೂರು ಹಾಗೂ 59 ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಚಿಂತನ್ಭಾಯ್, ಖಾನುಭಾಯ್ ಪಟೇಲ್ ಮೊ.ಸಂಖ್ಯೆ: 8618123988 ಅವರನ್ನು ವೆಚ್ಚ ವೀಕ್ಷಕರನ್ನಾಗಿ ನಿಯೋಜಿಸಲಾಗಿದೆ.
ಸಾಮಾನ್ಯ ವೀಕ್ಷಕರ ಸಂಪರ್ಕ ಮಾಹಿತಿ ಇಂತಿದೆ: 53-ರಾಯಚೂರು ಗ್ರಾಮಿಣ ವಿಧಾನಸಭಾ ಕ್ಷೇತ್ರ, 54-ರಾಯಚೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಡಾ.ಸಫೀನಾ ಎ.ಎನ್ ಮೊ.ಸಂ: 9535167136 , 55- ಮಾನವಿ ವಿಧಾನಸಭಾ ಕ್ಷೇತ್ರ, 58- ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ರವಿ ಪ್ರಕಾಶ ಗುಪ್ತಾ ಮೊ.ಸಂ: 8050061614, 56-ದೇವದುರ್ಗ ಹಾಗೂ 57-ಲಿಂಗಸುಗೂರು ವಿಧಾನಸಭಾ ಕ್ಷೇತ್ರಕ್ಕೆ ರೋಹಿತ್ ಸಿಂಗ್ ಮೊ.ಸಂ: 8660339557 ಹಾಗೂ 59- ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಪಿ.ಕೆ ಸೋಲಂಕಿ ಮೊ.ಸಂ: 9148683366 ಅವರನ್ನು ಸಾಮಾನ್ಯ ವೀಕ್ಷರನ್ನಾಗಿ ನಿಯೋಜಿಸಲಾಗಿದೆ.
ವೆಚ್ಚ ಹಾಗೂ ಸಾಮಾನ್ಯ ವೀಕ್ಷಕರ ಲೈಸನ್ ಅಧಿಕಾರಿಗಳ ಸಂಪರ್ಕ ಮಾಹಿತಿ ಇಂತಿದೆ: ಕೆ.ಕೆ ಕೃಷ್ಣ ಪ್ರಸಾದ ಅವರ ಲೈಸನ್ ಅಧಿಕಾರಿ ಬಲಿರಾಮ ಮೊ.ಸಂ: 8951391061, ಅಭಿಮನ್ಯೂ ಸಿಂಗ್ ಯಾದವ್ ಅವರ ಲೈಸನ್ ಅಧಿಕಾರಿ ನಜೀರ್ ಅಹ್ಮದ್ ಮೊ.ಸಂ: 7022811981, ಚಿಂತನ್ ಭಾಯಿ, ಖಾನುಭಾಯ್ ಪಟೇಲ್ ಅವರ ಲೈಸನ್ ಅಧಿಕಾರಿ ಮಂಜುನಾಥ ಮೊ.ಸಂ:9573026504, ಸಾಮಾನ್ಯ ವೀಕ್ಷಕರಾದ ಡಾ,ಸಫೀನಾ ಎ.ಎನ್ ಅವರ ಲೈಸನ್ ಅಧಿಕಾರಿ ಆರತಿ ಮೊ.ಸಂ: 8431968869, ರವಿಪ್ರಕಾಶ ಗುಪ್ತ ಅವರ ಲೈಸನ್ ಅಧಿಕಾರಿ ಮೊಹ್ಮದ್ ಅಲಿ ಮೊ.ಸಂ: 9448999236, ರೋಹಿತ್ ಸಿಂಗ್ ಅವರ ಲೈಸನ್ ಅಧಿಕಾರಿ ಗುಡ್ಡಪ್ಪ 9606531884, ಪಿ.ಕೆ ಸೋಲಂಕಿ ಅವರ ಲೈಸನ್ ಅಧಿಕಾರಿ ಮನ್ಸೂರ್ ಅಹ್ಮದ್ ಮೊ.ಸಂ: 9113522901 ಅವರನ್ನು ಲೈಸನ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.