ಏಪ್ರಿಲ್ 16.ಗಂಗಾವತಿ ತಾಲೂಕಿನ ಸಿದ್ದಾಪೂರ ಪಟ್ಟಣದ ದೇವರಾಜ ಅರಸು ಬಾಲಕರ ವಸತಿ ನಿಲಯದ ಆವರಣದಲ್ಲಿ ವನಸಿರಿ ಫೌಂಡೇಶನ್ ಹಾಗೂ ಸಿದ್ದಾಪೂರ ಹಸಿರು ಸೇನೆ ವತಿಯಿಂದ ಪಕ್ಷಿಗಳಿಗೆ ನೀರು ಕುಡಿಯಲು ಮಣ್ಣಿನ ಮಡಿಕೆಗಳನ್ನು ಕಟ್ಟುವ ಮೂಲಕ ಎಪ್ರಿಲ್ ಪೂಲ್ ಬದಲಿಗೆ ಎಪ್ರಿಲ್ ಕೂಲ್ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಿವಕುಮಾರ ಶಿಕ್ಷಕರು ಮಾತನಾಡಿ ಹಲವಾರು ವರ್ಷಗಳಿಂದ ಪರಿಸರ ಸಂರಕ್ಷಣೆಯಲ್ಲಿ ತೊಡಗಿರುವ ವನಸಿರಿ ಫೌಂಡೇಶನ್ ಕಾರ್ಯ ಶ್ಲಾಘನೀಯ.ರಾಜ್ಯದ ಹಲವು ಜಿಲ್ಲೆಗಳಲ್ಲಿ ಪರಿಸರ ರಥದ ಮೂಲಕ ಜಾಗೃತಿ ಮೂಡುಸುತ್ತಿದ್ದಾರೆ.ಜೊತೆಗೆ ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರುಣಿಸುವ ಮೂಲಕ ವಿನೂತನವಾಗಿ ಎಪ್ರಿಲ್ ಪೂಲ್ ಬದಲಿಗೆ ಎಪ್ರಿಲ್ ಕೂಲ್ ಆಚರಣೆ ಮಾಡುತ್ತಿದ್ದಾರೆ ಇವರ ಜೊತೆಯಲ್ಲಿ ನಮ್ಮ ಹಸಿರು ಸೇನೆ ತಂಡದ ಸದಸ್ಯರು ಕೂಡ ಕೈಜೋಡಿಸಿ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ ಕಟ್ಟಿ ಕಾಳು ಮತ್ತು ನೀರು ಹಾಕುವ ಕಾರ್ಯಗಳನ್ನು ಮಾಡುತ್ತಿರುವುದು ಒಂದು ಉತ್ತಮ ಬೆಳವಣಿಗೆ ಈ ಕಾರ್ಯಕ್ರಮವನ್ನು ವನಸಿರಿ ತಂಡ ಮತ್ತು ಹಸಿರು ಸೇನೆ ತಂಡ ನಮ್ಮ ಶಾಲೆಯಲ್ಲಿ ಹಮ್ಮಿಕೊಂಡಿರುವುದುಕ್ಕೆ ತುಂಬಾ ದನ್ಯವಾದಗಳು ಇಂತಹ ಕಾರ್ಯಗಳು ಯಶಸ್ವಿಯಾಗಲೆಂದು ಆರೈಸಿದರು.
ಈ ಸಂದರ್ಭದಲ್ಲಿ ಹಸಿರು ಸೇನೆ ಸದಸ್ಯರು ಅಯ್ಯನಗೌಡ, ವಿಟ್ಟಲ್ ಜೀರಗಾಳಿ, ಮಹಮ್ಮದ್ ರಫೀಕ್ ರುದ್ರಗೌಡ,ಶಿವಕುಮಾರ ಶಿಕ್ಷಕರು ಹತ್ತನೇ ತರಗತಿಯ ವಿದ್ಯಾರ್ಥಿಗಳು,ಹಾಗೂ ವನಸಿರಿ ಫೌಂಡೇಶನ್ ಸದಸ್ಯರು ಪಾಲ್ಗೊಂಡಿದ್ದರು