ಏಪ್ರಿಲ್ 23.ರಾಯಚೂರಿನ ಪ್ರಜಾಪಿತ ಬ್ರಹ್ಮಕುಮಾರಿಯ ಕೇಂದ್ರದಲ್ಲಿ ಪಕ್ಷಿಗಳಿಗೆ ಅರವಟ್ಟಿಗೆ ಕಟ್ಟುವ ಮೂಲಕ ಎಪ್ರಿಲ್ ಕೂಲ್ ಆಚರಣೆ ಮಾಡಲಾಯಿತು ನಂತರ ಡಾ.ಮಲ್ಲರಡ್ಡಿ ಸಾಹುಕಾರ ಪರಿಸರ ಪ್ರೇಮಿಗಳು ಹಾಗೂ ಸಾವಯವ ಕೃಷಿ ತಜ್ಞರು ಮಾತನಾಡಿ ವನಸಿರಿ ಫೌಂಡೇಶನ್ ಹಲವಾರು ವರ್ಷಗಳಿಂದ ಪರಿಸರ ರಕ್ಷಣೆಯ ಕಾರ್ಯದಲ್ಲಿ ತೊಡಗಿದೆ ಈ ತಂಡ ಗಿಡಮರಗಳಿಗೆ ಅರವಟ್ಟಿಗೆ ಕಟ್ಟಿ ಪಕ್ಷಿಗಳಿಗೆ ನೀರುಣಿಸುವ ಕಾಯಕದಲ್ಲಿ ತೊಡಗಿರುವುದು ತುಂಬಾ ಶ್ಲಾಘನೀಯ ಎಂದರು. ವನಸಿರಿ ತಂಡದ ಜೊತೆಗೆ ನಾವುಗಳೆಲ್ಲರೂ ಕೈಜೋಡಿಸಿ ಪಕ್ಷಿಗಳಿಗೆ ಬೇಸಿಗೆಯಲ್ಲಿ ನೀರುಣಿಸುವ ಮೂಲಕ ಸರ್ವ ಪಕ್ಷಗಳ ಜೀವವನ್ನು ಉಳಿಸಬೇಕು ಎಂದು ತಿಳಿಸಿದರು.ಬ್ರಹ್ಮಕುಮಾರಿ ಕೇಂದ್ರದಲ್ಲಿರುವ ಸುಮಾರು70 ಮಕ್ಕಳಿಗೆ ಪರಿಸರ ಜಾಗೃತಿಯ ಬಗ್ಗೆ ಅರಿವು ಮೂಡಿಸಿದರು.ಮಕ್ಕಳಿಗೆ ಪ್ಲಾಸ್ಟಿಕ್ ಬಳಕೆಯಿಂದಾಗುವ ಅನಾಹುತಗಳು,ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.ಇನ್ನೂ ಮುಂದೆ ನಾವುಗಳೆಲ್ಲರೂ ಪರಿಸರ ಸ್ನೇಹಿ ಬ್ಯಾಗ್ ಗಳನ್ನು ಉಪಯೋಗಿಸಬೇಕು.ಪರಿಸರ ರಕ್ಷಣೆ ಮಾಡಬೇಕಾದರೆ ಗಿಡಮರಗಳನ್ನು ಬೆಳೆಸಬೇಕು, ಒಳ್ಳೆಯ ಆಹಾರಗಳನ್ನು ಸೇವಿಸಬೇಕು ಎಂದು ತಿಳಿಸಿದರು.
ಸಂದರ್ಭದಲ್ಲಿ ಬ್ರಹ್ಮ ಕುಮಾರಿ ಕೇಂದ್ರದ ಅಕ್ಕನವರಾದ ಸ್ಮಿತಾ ಅಕ್ಕ,ಶಾರದಾ ಅಕ್ಕ,ಹಾಗೂ ಸುಮಾರು70ಮಕ್ಕಳು ಅತಿ ಉತ್ಸಾಹದಿಂದ ಭಾಗವಹಿಸಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯವನ್ನು ನೆರವೇರಿಸಿದರು.