ಏ.01 ಸಿಂಧನೂರಿನ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆ (ಡಿ ಎಡ್ ಕಾಲೇಜು PWD ಕ್ಯಾಂಪ್) ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಪಕ್ಷಿಗಳ ಅರವಟ್ಟಿಗೆ ಉದ್ಘಾಟನೆ ಹಾಗೂ ನಡೆದಾಡುವ ದೇವರು ಶ್ರೀ ಶಿವಕುಮಾರ ಮಹಾಸ್ವಾಮಿಗಳ 116 ನೇ ಜಯಂತಿ ಕಾರ್ಯಕ್ರಮ ಪರಮ ಪೂಜ್ಯರ ನೇತೃತ್ವದಲ್ಲಿ ಅದ್ದೂರಿಯಾಗಿ ನೆರವೇರಿತು.
ಇಂದು ಬೆಳಗ್ಗೆ ಪರಮ ಪೂಜ್ಯರು ಪಕ್ಷಿಗಳಿಗೆ ಅರವಟ್ಟಿಗೆಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.ನಂತರ ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಡಾ.ಶಿವಕುಮಾರ ಮಹಾಶಿವಯೋಗಿಗಳ 116ನೇ ಜಯಂತಿಯ ಅಂಗವಾಗಿ ಅನ್ನದಾಸೋಹ ಕಾರ್ಯಕ್ರಮವನ್ನು ಮರು ಜೀವ ಪಡೆದ ಆಲದ ಮರದ ಹತ್ತಿರ ಹಮ್ಮಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಸಿಂಧನೂರಿನ ಕಾಯಕ ಯೋಗಿಗಳಾದ ಚಂದ್ರಬಾಯಿ ಹಾಗೂ ಕಾಶಿನಾಥ ರಾಯಭಾಗಿ ಅವರಿಗೆ ಸನ್ಮಾನಿಸಲಾಯಿತು.
ಪರಮ ಪೂಜ್ಯ ಸಿದ್ದರಾಮ ಮಹಾಸ್ವಾಮಿಗಳು,ಷ.ಬ್ರ.ಶ್ರೀ ಶಿವಯೋಗಿ ಶಿವಾಚಾರ್ಯರು ರೌಡಕುಂದ,ಮಾದಯ್ಯ ಗುರುವಿನ ಮಠ,ಪಾರ್ವತಿ ಅಮ್ಮನವರು,ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ,ಅಮರೇಗೌಡ ವಕೀಲರು,ಡಾ.ಬಿ.ಎನ್.ಪಾಟೀಲ, ಡಾ. ಶರಣಬಸವ,ಅರಣ್ಯ ಅಧಿಕಾರಿ ರುದ್ರಮುನಿ, ಡಾ.ಚನ್ನಬಸವ ಹಾಗೂ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು,ಹಾಗೂ ಸನ್ ರೈಸ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಾಗೂ ಪತ್ರಿಕಾ ಮಾದ್ಯಮ ಮಿತ್ರರು, ವನಸಿರಿ ಫೌಂಡೇಶನ್ ಸದಸ್ಯರು,ಪರಿಸರ ಪ್ರೇಮಿಗಳು ಭಾಗವಹಿಸಿದ್ದರು.