ಏಪ್ರಿಲ್ 16. ರಾಜ್ಯದ ಸಾರ್ವತ್ರಿಕ 2023 ನೇ ಸಾಲಿನ ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಸಲು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಇದ್ದು ಇನ್ನೇನು ಕಾಂಗ್ರೆಸ್ ಹೈಕಮಾಂಡ್ ನನ್ನನ್ನೇ ಅಭ್ಯರ್ಥಿಯೆಂದು ಘೋಷಣೆ ಮಾಡುತ್ತೆ ಎಂದಕೊಂಡಿದ್ದ ಬಸನಗೌಡ ಬಾದರ್ಲಿ ಮತ್ತು ಅವರ ಅಭಿಮಾನಿಗಳಿಗೆ ಕಾಂಗ್ರೆಸ್ ಹೈಕಮಾಂಡ್ ಹಂಪನಗೌಡ ಬಾದರ್ಲಿ ಅವರಿಗೆ ಟಿಕೆಟ್ ಘೋಷಣೆ ಮಾಡುವ ಮೂಲಕ ಬಸನಗೌಡರಿಗೆ ಶಾಕ್ ನೀಡಿದೆ.
ಹೌದು ಓದುಗರೇ ಸಿಂಧನೂರು ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಗಳಾಗಿದ್ದ ಹಂಪನಗೌಡ ಬಾದರ್ಲಿ ಮತ್ತು ಬಸನಗೌಡ ಬಾದರ್ಲಿ ತಮ್ಮದೇ ಆದ ಶಕ್ತಿ ಪ್ರದರ್ಶನ ಮಾಡುತ್ತಾ ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದರು ಆದರೆ ದುರದೃಷ್ಟವತ ಬಸನಗೌಡ ಬಾದರ್ಲಿ ಅವರ ವಿರುದ್ಧ ಪೈಪೋಟಿ ನಡೆಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಕೃಪಾಕಟಾಕ್ಷದಿಂದ ಹಂಪನಗೌಡ ಬಾದರ್ಲಿ ಅವರು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ ರಾಹುಲ್ ಗಾಂಧಿಯವರ ಆಪ್ತರಾಗಿ ಕನಕಪುರ ಬಂಡೆ ಮತ್ತು ಶಾರ್ಪ್ ಸೂಟರ್ ಎಂದು ಕರೆಸಿಕೊಳ್ಳುವ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರ ಶಿಷ್ಯ ಎಂದು ಗುರುತಿಸಿಕೊಂಡಿದ್ದ ಶ್ರೀ ಬಸನಗೌಡ ಬಾದರ್ಲಿ ಅವರು ಟಿಕೆಟ್ ಕೈತಪ್ಪಿದ್ದರಿಂದ ಬೇಸತ್ತು ಕಾರ್ಯಕರ್ತರ ಮತ್ತು ಅಭಿಮಾನಿಗಳ ಸಭೆ ಕರೆದು ಪಕ್ಷೇತರ ಅಭ್ಯರ್ಥಿಯಾಗಿ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ ಎಂಬ ವಿಷಯವನ್ನು ಕಾರ್ಯಕರ್ತರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಬಸನಗೌಡ ಬಾದರ್ಲಿ ಅವರು ಮಾತ್ರ ಇನ್ನೂ ಕೂಡ ಯಾವುದೇ ರೀತಿ ಅಧಿಕೃತವಾಗಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಎಲ್ಲಿ ಕೂಡ ಹೇಳಿಕೊಂಡಿಲ್ಲ.
ಹಾಗಾದರೆ ನಾಳೆ ದಿನ ನಾಮಪತ್ರ ಸಲ್ಲಿಸಿ ವಿಧಾನಸಭಾ ಚುನಾವಣೆ ರಣರಂಗಕ್ಕೆ ಕಾಲಿಡಲಿದ್ದಾರಾ ಅಥವಾ ತಾತನ ಜೊತೆ ಸೇರಿ ಕೈ ಬಲಪಡಿಸುವವರ ಮೊಮ್ಮಗ ಬಸನಗೌಡ ಬಾದರ್ಲಿ ಎಂಬುದು ಮತದಾರರ ಮನದಾಳದ ಮಾತಾಗಿದೆ.