ಮಸ್ಕಿ : ಸಮೀಪದ ಉದ್ಬಾಳ ಯು ಗ್ರಾಮ ಪಂಚಾಯತಿಯ ವ್ಯಾಪ್ತಿಯ ಚಿಕ್ಕಕಡಬೂರು, ಕ್ಯಾತ್ನಟ್ಟಿ, ಹಾಗೂ ಇತರ ಗ್ರಾಮಗಳ ಜನರಿಗೆ 2024-25ನೇ ಸಾಲಿನ ಕರವಸೂಲಿ ಅಭಿಯಾನ ಮಾಡುವ ಕುರಿತು ಮಾಹಿತಿಯನ್ನು ನೀಡುವುದರ ಮೂಲಕ ಜಾಗೃತಿ ಮೂಡಿಸಲಾಯಿತು.
ಕಾರಣ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್,ರಾಯಚೂರು ರವರ ಮೌಖಿಕ ಆದೇಶದಂತೆ,ಉಲ್ಲೇಖಕ್ಕೆ ಸಂಬಂಧಿಸಿದಂತೆ,ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ 2024-25ನೇ ಸಾಲಿನಲ್ಲಿ ತೆರಿಗೆ ವಸೂಲಾತಿಯಲ್ಲಿ ಪ್ರಗತಿ ಕುಂಠಿತವಾಗಿದ್ದು,ಈ ವರ್ಷದ ವಾರ್ಷಿಕ ಗುರಿಯನ್ನು ಸಾಧಿಸಲು ದಿನಾಂಕ 12.11.2024 ರಂದು ವಿಡೀಯೋ ಸಂವಾದಲ್ಲಿ ಸೂಚಿಸಿದಂತೆ ಪ್ರತಿ ಶುಕ್ರವಾರ ರಂದು ಕರವಸೂಲಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿಯೊಂದು ಗ್ರಾಮ ಪಂಚಾಯತಿಯಲ್ಲಿ ಕನಿಷ್ಠ ರೂ. 50000=00 ಗಳ ವಸೂಲಾತಿ ಮಾಡಲು ಗುರಿಯನ್ನು ನಿಗದಿಪಡಿಸಲಾಗಿದೆ.
ಆದ್ದರಿಂದ ಪ್ರತಿ ಶುಕ್ರವಾರ ರೂ.50000=00 ಮತ್ತು ಅದಕ್ಕಿಂತ ಹೆಚ್ಚು ತೆರಿಗೆ ವಸೂಲಾತಿಯನ್ನು ಮಾಡಿ ವಾರ್ಷಿಕ ಗುರಿಯನ್ನು ಸಾಧಿಸಲು ಸೂಚಿಸಲಾಗಿದೆ. ಅದರ ಭಾಗವಾಗಿ ಉದ್ಬಾಳ ಯು ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು,ಕಾರ್ಯದರ್ಶಿಗಳು,ಗ್ರಾ.ಪಂ. ಕರವಸೂಲಿಗಾರರು,ಎಲ್ಲಾ ಗ್ರಾಮಗಳ ವಾಟರ್ ಮ್ಯಾನಗಳು,ಸೇರಿದಂತೆ ಗ್ರಾ.ಪಂ.ಸದಸ್ಯರು ಸೇರಿಕೊಂಡು ಕರ ವಸೂಲಾತಿಯಲ್ಲಿ ಭಾಗವಹಿಸಿ ಕರವಸೂಲಿಯನ್ನು ಮಾಡಿದರು.
ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯಿಂದ ಹೋರಾಟ ; ಸಹಾಯಕ ಆಯುಕ್ತರ ಭೇಟಿ