ಬಡವರ ಬಾರುಕೋಲು ಸುದ್ದಿ
ಮಸ್ಕಿ : ತಾಲ್ಲೂಕಿನ ಬಳಗಾನೂರ ಪಟ್ಟಣದ ಮಸ್ಕಿ ಮುಖ್ಯ ರಸ್ತೆ ಬಸವೇಶ್ವರ ಸಂಯುಕ್ತ ಪ್ರೌಢಶಾಲೆಯ ಹತ್ತಿರ ಒಂದು ಕಿಲೋಮೀಟರ್ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿತ್ತು ಇದೇ ಮಾರ್ಗವಾಗಿ ಹಾಲಿ ಶಾಸಕ ಬಸನಗೌಡ ತುರ್ವಿಹಾಳ ಹಲವಾರು ಕಾರ್ಯಕ್ರಮಗಳ ನಿಮಿತ್ಯ ತಿರುಗಾಡಿದ್ದಾರೆ ಆದರೂ ಇದರ ಬಗ್ಗೆ ಗಮನ ಹರಿಸದೆ ನಿರ್ಲಕ್ಷ್ಯ ತೋರಿಸಿ ತಮ್ಮ ಬೇಜವಾಬ್ದಾರಿ ಮೇರೆದಿದ್ದರಿಂದ ಸ್ಥಳೀಯ
ಶಾಲಾ ಕಾಲೇಜು ವಿದ್ಯಾರ್ಥಿಗಳು,ರೈತರು,ವಾಹನ ಸವಾರರು ಹದಗೆಟ್ಟ ರಸ್ತೆ ಕುರಿತು ಜನ ಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದರು.
ಇದನ್ನು ಅರಿತುಕೊಂಡ ಬಳಗಾನೂರ ಪಟ್ಟಣದ ರೈತ ಹಾಗೂ ದಲಿತ ಸಂರಕ್ಷ ಸಮಿತಿಯ ಕಲಬುರಗಿ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಬಿ.ಮೌನೇಶ ಬಳಗಾನೂರ ರವರು ಹದಗೆಟ್ಟ ರಸ್ತೆಯ ತಗ್ಗು ದಿನ್ನೆಗೆ ಮರಂ ಹಾಕಿಸಿ ಮಾನವೀಯತೆ ಮೆರೆಯುವುದರ ಹಲವಾರು ಜನಪ್ರತಿನಿಧಿಗಳಿಗೆ ಮತ್ತು ಇನ್ನಿತರ ಸಂಘಟನೆಗಳ ಮುಖಂಡರಿಗೆ ಬಿ.ಮೌನೇಶ ರವರು ಮಾದರಿಯಾಗಲಿ ಎಂದು ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಹಾಗೂ ಹೆಸರು ಹೇಳಲು ಇಚ್ಛಿಸದ ಹಿರಿಯರು ಮತ್ತು ಯುವಕರು ಅಭಿಪ್ರಾಯ ನೂರಾರು ವಿದ್ಯಾರ್ಥಿಗಳು ನಡೆದುಕೊಂಡು ಸಮಯಕ್ಕೆ ಸರಿಯಾಗಿ ಶಾಲೆ ಮತ್ತು ಕಾಲೇಜಿಗೆ ಹೋಗಲು ಎದ್ದು ಬಿದ್ದು ಹೋಗುವಂತ ಪರಿಸ್ಥಿತಿ ಮತ್ತು ಇದೇ ರಸ್ತೆಯಲ್ಲಿ ಅನೇಕ ಮೋಟರ್ ಸೈಕಲ್ ಸವಾರರು ಹಾಗೂ ಟಾಟಾ ಎಸಿ ವಾಹನಗಳ ಬಿಡಿ ಭಾಗಗಳು ಮುರಿದು ಅನೇಕ ಬಾರಿ ಕೆಟ್ಟುನಿಂತ ಉದಾಹರಣೆಗಳು ಹಾಗೂ ಕೃಷಿ ಚಟುವಟಿಕೆಗಾಗಿ ಸಂಚರಿಸುವ ರೈತರ ಎತ್ತಿನ ಬಂಡಿ ಸಂಚಾರವು ತೊಂದರೆ ಅನುಭವಿಸಿದ್ದು ಹೇಳ ತಿರದು ಇಂತಹ ಸಮಸ್ಯೆಯನ್ನು ಅರಿತಕೊಂಡ ಬಿ.ಮೌನೇಶ ರವರು ಈ ಸಮಸ್ಯೆ ಬಗೆಹರಿಸಿದ್ದಾರೆಂದು ಅವರನ್ನು ಕೊಂಡಾಡಿದ್ದಾರೆ.
ಇನ್ನೂ ಮುಂದೆ ಭಾರೀ ಗಾತ್ರದ ಮರಳು ಸಾಗಣೆ ಮಾಡುವ ಟಿಪ್ಪರ್ ಗಳು ಅಳತೆ ಮೀರಿ ರಸ್ತೆ ಮೇಲೆ ಸಂಚರಿಸದಂತೆ ಮತ್ತು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ರಸ್ತೆ ನಿಯಮ ಉಲ್ಲಂಘನೆ ಮಾಡಿ ಸಂಚರಿಸಬಾರದು ಎಂದು ಕೆಲವರ ಅಭಿಪ್ರಾಯವಾಗಿದೆ.
ಮುಂದಿನ ದಿನಗಳಲ್ಲಿ ಈ ಕ್ಷೇತ್ರದ ಶಾಸಕರು ಇನ್ನೂ ಹೆಚ್ಚಿನ ರೀತಿಯಲ್ಲಿ ಹದಗೆಟ್ಟ ರಸ್ತೆಗಳನ್ನು ದುರಸ್ತಿ ಮಾಡಲು ಮನಸ್ಸು ಮಾಡಬೇಕೆಂದು ಇದೇ ಸಂದರ್ಭದಲ್ಲಿ ಅನೇಕ ಸಾರ್ವಜನಿಕರ ಒತ್ತಾಯವಾಗಿದೆ
ಸಿಪಿಐ ಮತ್ತು ಕರ್ನಾಟಕ ರೈತ ಸಂಘದಿಂಧ ಧರಣಿ ಸತ್ಯಾಗ್ರಹ