ಏಪ್ರಿಲ್ 24. ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಶ್ರೀ ಹಂಪನಗೌಡ ಬಾದರ್ಲಿ ಮತ್ತು ಶ್ರೀ ಬಸನಗೌಡ ಬಾದರ್ಲಿ ಅವರ ಮದ್ಯ ಜನ ಬೆರಗಾಗುವಂತೆ ಪೈಪೋಟಿ ನಡೆದಿತ್ತು ಆದರೆ ಕಾಂಗ್ರೆಸ್ ಹೈಕಮಾಂಡ್ ಹಿರಿಯತನವನ್ನು ಮತ್ತು ಅನುಭವವನ್ನು ಗಮನದಲ್ಲಿಟ್ಟುಕೊಂಡು ಶ್ರೀ ಹಂಪನಗೌಡ ಬಾದರ್ಲಿ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿಯಿತು.
ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರಕ್ಕೆ ಬೇಜಾರು ವ್ಯಕ್ತಪಡಿಸಿ ಕಾಂಗ್ರೆಸ್ ಗೆ ಬಂಡಾಯ ಬಿಸಿ ಮುಟ್ಟಿಸಲು ಬಸನಗೌಡ ಬಾದರ್ಲಿ ಅವರು ದಿನಾಂಕ 17.4.2023 ರಂದು ಸ್ವತಂತ್ರ ಅಭ್ಯರ್ಥಿಯಾಗಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿ ನಂತರ ದಿನಾಂಕ 20.04.2023 ರಂದು ಸಾವಿರಾರು ಅಭಿಮಾನಿಗಳನ್ನು ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸಿ ಅದ್ದೂರಿಯಾಗಿ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದರು ಆದರೆ ಕಾಂಗ್ರೆಸ್ ಹೈಕಮಾಂಡ್ ಈ ರೀತಿ ಬಂಡಾಯ ಎದ್ದರೆ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಹೆಣಗಾಡಬೇಕಾಗುತ್ತದೆ ಎಂದು ತಿಳಿದು ಅವರನ್ನು ಮನ ಒಲಿಸುವುದಕ್ಕಾಗಿ ಯುವ ಕಾಂಗ್ರೆಸ್ನ ರಾಜ್ಯ ಅಧ್ಯಕ್ಷರಾಗಿರುವ ಮೊಹಮ್ಮದ ನಲಪಾಡ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ರಣದೀಪ್ ಸುರ್ಜಿವಾಲಾ ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿ ಬಸನಗೌಡ ಬಾದರ್ಲಿ ಅವರಿಗೆ ಅನೇಕ ಆಫರ್ ಗಳನ್ನು ನೀಡಿ ಮನ ಒಲಿಸಿದ್ದಕ್ಕಾಗಿ ಇಂದು ಬಸವನಗೌಡ ಬಾದರ್ಲಿ ಅವರು ತಾತನಾದ ಹಂಪನಗೌಡ ಬಾದರ್ಲಿ ಅವರ ಅಪೇಕ್ಷೆಯಂತೆ ಕಣದಿಂದ ಹಿಂದಕ್ಕೆ ಸರಿಯಲು ತೀರ್ಮಾನಿಸಿ ತಮ್ಮ ನಾಮಪತ್ರವನ್ನು ಬೇಷರತ್ತಾಗಿ ಹಿಂಪಡದಿದ್ದಾರೆ.