ಸಿಂಧನೂರು ಮಾ 30. ರಾಜ್ಯದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಮೂಹರ್ತ ಫಿಕ್ಸ್ ಮಾಡಿದ್ದು ಇಡೀ ರಾಜ್ಯದ್ಯಂತ ಹಲವು ಪಕ್ಷಗಳಲ್ಲಿ ಸಾಕಷ್ಟು ಆಕಾಂಕ್ಷಿಗಳು ತಮ್ಮದೇ ಆದ ರೀತಿಯಲ್ಲಿ ಟಿಕೆಟ್ ಗಾಗಿ ಜಿದ್ದಾಜಿದ್ದಿ ನಡೆಸಿದ್ದು ಅದೇ ರೀತಿ ಭತ್ತದ ನಾಡು ಸಿಂಧನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಲ್ಲಿ ಮಾಜಿ ಶಾಸಕರಾದ ಶ್ರೀ ಹಂಪನಗೌಡ ಬಾದರ್ಲಿ ಬಸನಗೌಡ ಬಾದರ್ಲಿ ಜಿದ್ದಾಜಿದ್ದಿ ಪೈಪೋಟಿ ನಡೆಸಿದ್ದಾರೆ ಜೊತೆಗೆ ಎರಡು ಬಣ್ಣದವರು ನಮಗೆ ಟಿಕೆಟ್ ನೀಡುತ್ತಾರೆ ಎಂದು ಹಲವಾರು ಪೋಸ್ಟರ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ
ಅದೇ ರೀತಿ ಮೋದಿ ಶಾಸಕರಾದ ಶ್ರೀ ಹಂಪನಗೌಡ ಬಾದರ್ಲಿ ಅವರ ಸಂಬಂಧಿ ಬಾಬುಗೌಡ ಬಾದರ್ಲಿ ಅವರು ಒಂದು ಪೋಸ್ಟರ್ ಅಂಚಿಕೊಂಡಿದ್ದಾರೆ ಅದೇನೆಂದರೆ ಮೇ 10ರಂದು ನಡೆಯುವ 2023 ನೇ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ನನ್ನ ಚಿಕ್ಕಪ್ಪನವರಾದ ಶ್ರೀ ಹಂಪನಗೌಡ ಬಾದರ್ಲಿ ಅವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡುವ ಮೂಲಕ ಆಶೀರ್ವದಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹಾಗೂ ಯುವ ಮುಖಂಡರಾದ ಬಾಬುಗೌಡ ಬಾದರ್ಲಿ ಅವರು ಹಂಚಿಕೊಂಡಿದ್ದಾರೆ ನಮಗೆ ಟಿಕೆಟ್ ಸಿಕ್ಕಿದೆ ಎಂದು ಮಾತನಾಡಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರವನ್ನು ಕಾರ್ಯಕರ್ತರಲ್ಲರು ಹಂಚಿಕೊಂಡಿದ್ದಾರೆ
ಜೊತೆಗೆ ಬಸನಗೌಡ ಬಾದರ್ಲಿ ಅವರ ಅಭಿಮಾನಿಗಳು ಮತ್ತು ಕಾರ್ಯಕರ್ತರು ಕೂಡ ರಾಜ್ಯ ನಾಯಕರು ಎರಡನೇ ಪಟ್ಟಿ ಬಿಡುಗಡೆ ಮಾಡುವ 73 ಅಭ್ಯರ್ಥಿಗಳಲ್ಲಿ ಕ್ರಮ ಸಂಖ್ಯೆ 18 ನಮ್ಮ ಬಸನಗೌಡ ಬಾದರ್ಲಿ ಯವರು ಹೆಸರು ಇದೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಹಾಗಾದರೆ ಇವೆಲ್ಲದಕ್ಕೂ ಕಾಂಗ್ರೆಸ್ ಹೈಕಮಾಂಡ್ ಯಾವಾಗ ತೆರೆಳೆಯಲಿದ್ದಾರೆ ಎಂದು ಕಾದು ನೋಡಬೇಕಾಗಿದೆ