ಮಸ್ಕಿ :
ದಿನಾಂಕ 02/12/2024 ರಂದು ಸೋಮವಾರ ಶಾಸಕರು ತಾಲ್ಲೂಕಿನಲ್ಲಿ ಕೈಗೊಂಡಿರುವ ಹಲವಾರು ಭೂಮಿ ಪೂಜೆ ಕಾಮಗಾರಿಗಳಲ್ಲಿ
ಮುದಬಾಳ ಕ್ರಾಸ್ ನಿಂದ ಮಾರಲದಿನ್ನಿ ಯವರೆಗೆ ರಸ್ತೆ ನಿರ್ಮಾಣದ ಕಾಮಗಾರಿಯು ಒಂದಾಗಿದ್ದು ಇದರ ಬಗ್ಗೆ ಲೋಕಾಯುಕ್ತ ಕಛೇರಿಯಲ್ಲಿ ದೂರು ಇದೆ ಎಂದು
ಶರಣಬಸವ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ.
ದೂರದಾರ ಶರಣಬಸವ
ಮಲ್ಲಪ್ಪ ಎಸ್ ಗೋನಾಳ್ಕ್ ರ ತನಿಖೆಗೆ ಒತ್ತಾಯಿಸುವವರು
ಅದೇನೆಂದರೆ ಈ ಹಿಂದೆ ಮುದಬಾಳ ಕ್ರಾಸ್ ನಿಂದ ಮಾರಲದಿನ್ನಿ ಯವರೆಗೆ ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು
ಸಾರ್ವಜನಿಕರ ಪರವಾಗಿ ಶರಣಬಸವ ಎಂಬುವವರು 18/10/2022 ರಂದುಲೋಕಾಯುಕ್ತ ಕಛೇರಿಯಲ್ಲಿ ದೂರು ಸಹ ದಾಖಲು ಮಾಡಿದ್ದಾರೆ.
ಹೌದು ಮುದಬಾಳ ಕ್ರಾಸ್ ನಿಂದ ಮಾರಲದಿನ್ನಿ ಯವರೆಗಿನ ಕಾಮಗಾರಿಗೆ ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರಿಂಗ್ ವಿಭಾಗದಿಂದ ಬಿಆರ್ಜಿಎಫ್
ಯೋಜನೆಯಡಿಯಲ್ಲಿ ₹1.60 ಕೋಟಿ ವೆಚ್ಚದಲ್ಲಿ 4.5 ಕಿ.ಮೀ ರಸ್ತೆ ಡಾಂಬರೀಕರಣಕ್ಕೆ ರಾಯಚೂರು ಮೂಲದ ನರಸರೆಡ್ಡಿ ಎನ್ನುವ ಗುತ್ತಿಗೆದಾರರಿಗೆ ಗುತ್ತಿಗೆ ನೀಡಲಾಗಿತ್ತು.
ಇನ್ನೊಂದು ವಿಶೇಷತೆ ಏನೆಂದರೆ ಈ ರಸ್ತೆಯ ಕಾಮಗಾರಿಗೆ ಡಾಂಬರು ಹಾಕಿದ ದಿನವೇ ಕಿತ್ತಿಕೊಂಡು ಹೋಗಿದೆ ಹಾಗೂ ಇದು ಕಳಪೆ ಕಾಮಗಾರಿ ಆಗಿರುವ ಕಾರಣಕ್ಕೆ ರಸ್ತೆ ಹಾಳಾಗಿದೆ ಎಂದು ಆರೋಪಿಸಿ ಇದೇ ಕಾಟಗಲ್,ಉಸ್ಕಿಹಾಳ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಸೇರಿಕೊಂಡು ಕಾಮಗಾರಿಯನ್ನು ಬಂದ್ ಮಾಡಿಸಿ ರಸ್ತೆ ಮೇಲೆಯೇ ಹೋರಾಟ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ಈ ದಿನ ಭೂಮಿ ಪೂಜೆ ಮಾಡಿದ ಜನಪ್ರತಿನಿದಿನಗಳಿಗೆ ಗೊತ್ತಿಲ್ಲ ಅನಿಸುತ್ತದೆ ಅಕಸ್ಮಾತ್ ಗೊತ್ತಿದ್ದರೆ ದಿನಾಂಕ 02/12/2024 ರಂದು ಭೂಮಿ ಪೂಜೆ ನೇರವೇರಿಸುತ್ತೀರಲಿಲ್ಲ ಅಂತ ಅನಿಸುತ್ತದೆ.
ಇನ್ನೂ ಈ ಕಾಮಗಾರಿಗೆ ಸಂಬಂಧಿಸಿದಂತೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಲಿಂಗಸಗೂರು
ಎಫ್ ಶಿವಕುಮಾರ್ ಇವರು ಅಪರ ನಿಭಂದಕರು ವಿಚಾರಣೆಗಳು-5ಕರ್ನಾಟಕ ಲೋಕಾಯುಕ್ತರು ಬೆಂಗಳೂರು ಇವರಿಗೆ ಯಾವುದೇ ರೀತಿಯ ಕಳಪೆ
ಕಾಮಗಾರಿ ಆಗಿರುವುದಿಲ್ಲ ಎಂದು ವರದಿಯನ್ನು ಸಲ್ಲಿಸಿದರು.
ಇವರ ವರದಿ ಮತ್ತು ಶರಣಬಸವ ಅವರ ದೂರಿನ ಮೇರೆಗೆ ಸ್ಥಳಕ್ಕೆ
ಲೋಕಾಯುಕ್ತ ಅಧಿಕಾರಿಗಳು ಭೇಟಿ ಮಾಡಿ ಕಾಮಗಾರಿಯ ಗುಣಮಟ್ಟವನ್ನು ವೀಕ್ಷಣೆ ಮಾಡಿದ್ದಾರೆ.
ಆದರೆ ವೀಕ್ಷಣೆ ಮಾಡಿದ ಲೋಕಾಯುಕ್ತ ಅಧಿಕಾರಿಗಳ ವರದಿ ಯಾವ ಹಂತದಲ್ಲಿ ಇದೆ ಎಂಬುವುದೇ ಗ್ಯೌಪವಾಗಿಯೇ ಉಳಿದಿದೆ ಎಂದು ದೂರುದಾರರು ದೂರಿದ್ದಾರೆ.
ಇನ್ನೂ ಕ್ಷೇತ್ರದಲ್ಲಿ ಇದೇ ರೀತಿಯಲ್ಲಿ ಇನ್ನೆಷ್ಟು ಕಾಮಗಾರಿ ಕೆಲಸಗಳು ಇದೆ ತರಹ ಸಾಗಿವೆ ಎಂದು ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ.
ಏಕೆಂದರೆ ಕ್ಷೇತ್ರದಲ್ಲಿ ಹಲವಾರು ಕಡೆ ನಡೆದಿರುವ ಅನೇಕ ರೀತಿಯ ಕಾಮಗಾರಿಗಳ ಕೆಲಸದ ಗುಣಮಟ್ಟ ಹಾಗೂ ತನಿಖಾ ವರದಿ ಹಂತದ ಬಗ್ಗೆ
ಸೂಕ್ತ ನ್ಯಾಯಾಂಗ ತನಿಖೆ ಮಾಡಿದಾಗ ಮಾತ್ರ ಈ ರೀತಿಯಾಗಿ ಎರಡೆರಡು ಬಾರಿ ಭೂಮಿ ಪೂಜೆ ಮಾಡುವ ಕಾಮಗಾರಿಗಳ ಬಗ್ಗೆ ಸತ್ಯ ಹೊರ ಬರುತ್ತದೆ
ಎಂದು ದಲಿತ ಸಂಘರ್ಷ ಸಮಿತಿ (ಸಂಯೋಜಕ) ರಾಯಚೂರು ಜಿಲ್ಲಾ ಅಧ್ಯಕ್ಷ ಮಲ್ಲಪ್ಪ ಎಸ್ ಗೋನಾಳ ರವರು ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಹಾಗೂ ಈ ಮೇಲಿನ ಕಾಮಗಾರಿಯ ಬಗ್ಗೆ ಲೋಕಾಯುಕ್ತ ತನಿಖೆ ಹಂತದಲ್ಲಿದೆ ಎಂದು ಜಿಎಲ್ ಬಿ 4171 ಉಪಲೋಕ ಎಂಬ ಲೋಕಾಯುಕ್ತ ದೂರಿನ ಸಂಖ್ಯೆಯ
ಅರ್ಜಿಯ ಸ್ಥಿತಿಯನ್ನು ಹೇಳುತ್ತಿದ್ದರೂ.ಇಂದು ಪುನಃ ಮತ್ತೆ ಅದೇ ರಸ್ತೆಯಲ್ಲಿ ಮತ್ತೆ ಕಾಮಗಾರಿಗೆ ಶಂಕು ಸ್ಥಾಪನೆಯನ್ನು ಮಾಡಿದ್ದಾರೆಇದರಿಂದ ಸಾರ್ವಜನಿಕರು
ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಏಕೆಂದರೆ ಒಂದೇ ರಸ್ತೆಗೆ ಎರಡೆರಡು ಬಾರಿ ಪೂಜೆ ಮಾಡುವುದು ಎಷ್ಟರ ಮಟ್ಟಿಗೆ ಸಮಂಜಸ ಎಂದು ಹೇಳುತ್ತೀದ್ದಾರೆ.
ವರದಿ : ಎಚ್.ಕೆ.ಬಡಿಗೇರ್
ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಗುದ್ದಾಟ ರೋಗಿಗಳ ಪರದಾಟ