ಏಪ್ರಿಲ್ 14.ಭಾರತರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜಯಂತಿಯ ಅಂಗವಾಗಿ ವನಸಿರಿ ಫೌಂಡೇಶನ್ ವತಿಯಿಂದ ಇಂದು ತುರವಿಹಾಳ ಪಟ್ಟಣ ಪಂಚಾಯತಿ, ಪ್ರಾಥಮಿಕ ಆರೋಗ್ಯ ಕೇಂದ್ರ,ಪೋಲೀಸ್ ಠಾಣೆ, ಪೋಲಿಸ್ ವಸತಿ ಗೃಹಗಳ ಆವರಣ,ಈದ್ಗಾ ಮೈದಾನ ಹಾಗೂ ಇನ್ನಿತರ ಸ್ಥಳಗಳಲ್ಲಿ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ ಕಾರ್ಯಕ್ರಮ ನಡೆಯಿತು.
ತುರವಿಹಾಳ ಪಟ್ಟಣದ ಪೋಲಿಸ್ ಠಾಣೆಯ ಆವರಣದಲ್ಲಿ ಪಕ್ಷಿಗಳಿಗೆ ಅರವಟ್ಟಿಗೆ ಕಟ್ಟಿ ನೀರುಹಾಕಿ ಮಾತನಾಡಿದ ಪಿ.ಎಸ್.ಐ ಚಂದ್ರಪ್ಪ ವನಸಿರಿ ಫೌಂಡೇಶನ್ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಬಿಸಿಲು ಹೊಂದಿರುವುದರಿಂದ ಸಸಿಗಳನ್ನು ನೆಡುವುದು, ಗಿಡಮರಗಳನ್ನು ರಕ್ಷಣೆ ಮಾಡುವುದು,ಪ್ರಾಣಿಪಕ್ಷಿಗಳಿಗೆ ನೀರಿನ ಅರವಟ್ಟಿಗೆಗಳನ್ನು ನಿರ್ಮಿಸಿ ನೀರುಣಿಸುವ ಮೂಲಕ ಪಕ್ಷಿಗಳ ಸಂಕುಲ ಉಳಿಸುವ ಇಂತಹ ಕಾರ್ಯಗಳನ್ನು ಮಾಡುತ್ತಿರುವುದು ಅದ್ಭುತವಾದ ಕಾರ್ಯ ಇಂತಹ ಕಾರ್ಯಗಳಿಗೆ ಸಾರ್ವಜನಿಕರು ಕೂಡಾ ಕೈಜೋಡಿಸಿದಾಗ ಈ ಕಲ್ಯಾಣ ಕರ್ನಾಟಕವನ್ನು ಬಿಸಿಲು ನಾಡಿನಿಂದ ಹಸಿರು ನಾಡಾಗಿ ಪರಿವರ್ತಿಸುವುದರಲ್ಲಿ ಸಂದೇಹವಿಲ್ಲ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಶ್ರೀ ಅಮರೇಗೌಡ ಮಲ್ಲಾಪೂರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ವನಸಿರಿ ಫೌಂಡೇಶನ್ ಸದಸ್ಯರು ಹಾಗೂ ಪತ್ರಿಕಾ ಮಾದ್ಯಮ ಮಿತ್ರರು ಭಾಗವಹಿಸಿದ್ದರು.