ರಾಯಚೂರು. ಜು 6 ಜಿಲ್ಲೆಯ ಲಿಂಗಸೂರು ನಗರದ ಶ್ರೀ ಉಟಕನೂರು ಬಸವಲಿಂಗ ತಾತ ಶಿಕ್ಷಣ ಟ್ರಸ್ಟ್ ಹಾಗೂ ಶ್ರೀಮತಿ ಬಸ್ಸಮ್ಮ ಗುರುಲಿಂಗಪ್ಪ ಕಾನೂನು ಮಹಾವಿದ್ಯಾಲಯ ಲಿಂಗಸೂಗುರು ಮತ್ತು ರೆಡ್ ಕ್ರಾಸ್ ಸಂಸ್ಥೆ ತಾಲೂಕು ಘಟಕದ ಸಹಭಾಗಿತ್ವದಲ್ಲಿ ಶುಕ್ರವಾರದಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮಾಡಲಾಯಿತು. ಶ್ರೀ ಉಟಕನೂರು ಬಸವಲಿಂಗ ತಾತ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರಾದ ಸಂಜೀವ್ ಕಂದಗಲ್ ಶಿಬಿರದ ಅಧ್ಯಕ್ಷೆತೆಯನ್ನು ವಹಿಸಿ ಮಾತನಾಡಿದ ಅವರು ರಕ್ತದಾನದಿಂದ ತುರ್ತು ಸನ್ನಿವೇಶದಲ್ಲಿ ಹಲವಾರು ಜೀವಗಳನ್ನು ಉಳಿಸಬಹುದು ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿರಬೇಕು ಎಂದರು.
ಸ್ವಯಂ ಪ್ರೇರಿತರಾಗಿ ರಕ್ತದಾನ ಹಾಗೂ ತಪಾಸಣೆ ಮಾಡಿದ ನಂತರ ರಕ್ತದಾನಿಗಳಿಗೆ ಜ್ಯೂಸ್ ಮತ್ತು ಬಿಸ್ಕೆಟ್,ಹಣ್ಣುಗಳನ್ನು ಡಾ. ಆರ್ ಕೆ ಜಾಗೀರ್ದಾರ್ ನೀಡಿದರು. ಈ ಸಂದರ್ಭದಲ್ಲಿ ಚನ್ನಬಸಪ್ಪ, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಎಲ್ಲಾ ರಕ್ತದಾನಿಗಳು ಸಿಬ್ಬಂದಿಗಳು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.