ರಾಯಚೂರು,ಮಾ.31,(ಕ.ವಾ):- 2022-23ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಈಗಾಗಲೇ ಬಿಳಿಜೋಳವನ್ನು ಮಾರಾಟ ಮಾಡಲು ನೋಂದಾಣಿ ಮಾಡಿಕೊಂಡಿರುವ ರೈತರಿಂದ ಬಿಳಿಜೋಳದ ಖರೀದಿ ಅವಧಿಯನ್ನು ಏ.30 ರವರೆಗೆ ವಿಸ್ತರಿಸಲಾಗಿದೆ, ಪ್ರಯುಕ್ತ ರೈತರು ತಮ್ಮ ಹತ್ತಿರದಲ್ಲಿರುವ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ಬಿಳಿಜೋಳವನ್ನು ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು, ಜಿಲ್ಲಾ ಟಾಸ್ಕ್ಪೋರ್ಸ್ ಸಮಿತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.