ಏಪ್ರಿಲ್ 14 ಸಿಂಧನೂರು ತಾಲೂಕಿನ ತಿಡಿಗೋಳ ಗ್ರಾಮದಲ್ಲಿ ಮಾದಿಗ ಸಮಾಜದ ವತಿಯಿಂದ ಡಾ.ಬಾಬಾ.ಸಾಹೇಬ್ ಅಂಬೇಡ್ಕರ್ ರವರ 132ನೇ ಜಯಂತ್ಯೋತ್ಸವ ಆಚರಿಸಲಾಯಿತು.
ನಂತರ ಮಾತನಾಡಿದ ಬಾಲಸ್ವಾಮಿ ತಿಡಿಗೋಳ ಡಾ. ಭೀಮರಾವ್ ಅಂಬೇಡ್ಕರ್ ಅವರು ಮಧ್ಯಪ್ರದೇಶದ ಮೋವ್ನಲ್ಲಿ 1891 ರ ಏಪ್ರಿಲ್ 14 ರಂದು ಜನಿಸಿದರು. ಅವರು 1908ರಲ್ಲಿ ಎಲ್ಫಿನ್ ಸ್ಟೋನ್ ಹೈಸ್ಕೂಲ್ನಿಂದ ಮೆಟ್ರಿಕ್ಯೂಲೇಶನ್ ಪಾಸ್ ಮಾಡಿದರು. ಉನ್ನತ ಶಿಕ್ಷಣವನ್ನು ನ್ಯೂಯಾರ್ಕ್ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು.
1927 ರ ಜೂನ್ 8 ರಂದು ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದರು. ಅವರು ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ಬಗ್ಗೆ ಹೋರಾಟವನ್ನು ಪ್ರಬಲವಾಗಿ ಆರಂಭಿಸಿದರು ಶಿಕ್ಷಣ ಎನ್ನುವಂತಹದ್ದು ಪುರುಷರಿಗೆ ಎಷ್ಟು ಮುಖ್ಯವೋ, ಮಹಿಳೆಯರಿಗೂ ಅಷ್ಟೇ ಮುಖ್ಯ ಜ್ಞಾನವು ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಆಧಾರವಾಗಿದೆ.
ದೊಡ್ಡ ಪ್ರಯತ್ನಗಳನ್ನು ಹೊರತುಪಡಿಸಿ ಈ ಜಗತ್ತಿನಲ್ಲಿ ಯಾವುದೂ ಮೌಲ್ಯಯುತವಾಗಿಲ್ಲ ನೀವು ಮನಸ್ಸಿನಿಂದ ಮುಕ್ತರಾಗಿದ್ದರೆ ನೀವು ನಿಜವಾಗಿಯೂ ಸ್ವತಂತ್ರರು ಚೆನ್ನಾಗಿ ಕಾಣಬೇಕು ಎಂದು ಬದುಕುವ ಬದಲು ಒಳ್ಳೆಯವರಾಗಿ ಬದಕಲು ಪ್ರಯತ್ನಿಸಿ ಮನಸ್ಸಿನ ಅಭಿವೃದ್ಧಿ ಮಾನವ ಜನಾಂಗದ ಅಂತಿಮ ಗುರಿಯಾಗಿರಬೇಕು ಇತಿಹಾಸವನ್ನು ಮರೆತವರು ಇತಿಹಾಸವನ್ನು ನಿರ್ಮಿಸಲಾರರು ಬದುಕು ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು ಸಂವಿಧಾನ ದುರ್ಬಳಕೆಯಾಗುತ್ತಿದೆ ಎಂದು ಗೊತ್ತಾದರೆ ಅದನ್ನು ಸುಡುವ ಮೊದಲಿಗ ನಾನಾಗಿರುತ್ತೇನೆ ಕಾನೂನು ಮತ್ತು ಸುವ್ಯವಸ್ಥೆ ರಾಜಕೀಯ ದೇಹಕ್ಕೆ ಔಷಧಿ ಇದ್ದಂತೆ ರಾಜಕೀಯ ದೇಹ ಅನಾರೋಗ್ಯಕ್ಕೊಳಗಾದರೆ ಖಂಡಿತವಾಗಿಯೂ ಔಷಧಿ ನೀಡಬೇಕಾಗುತ್ತದೆ ವಿದ್ಯಾವಂತರಾಗಿ,ಸಂಘಟಿತರಾಗಿರಿ ಎಂದು ಸಾರಿದ್ದಾರೆಂದು ಹೇಳಿದರು
ಇದೇ ಸಂದರ್ಭದಲ್ಲಿ ಬಾಲಸ್ವಾಮಿ ತಿಡಿಗೋಳ, ಜಿಲ್ಲಾಧ್ಯಕ್ಷರು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ರಾಯಚೂರು,ಹುಲುಗಪ್ಪ ಗ್ರಾಮ ಪಂಚಾಯಿತಿ ಸದಸ್ಯರು, ಬಸವರಾಜ್ ಹಿರೇಮನಿ ಗ್ರಾಮ ಪಂಚಾಯಿತಿ ಸದಸ್ಯರು, ಗುರುನಾಥ ಗದ್ರಟಗಿ, ದುರುಗೇಶ ಬೇರ್ಗಿ,ದೇವರಾಜ್ ಹುಲಿಯಾರ್ ಶ್ರೀಧರ್ ಉಸ್ಕಿಹಾಳ, ನಾಗರಾಜ್, ಹನುಮಂತ, ಬಸವರಾಜ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು, ಹನುಮಂತ ನಾಗಲಾಪುರ, ಪಂಪಣ್ಣ ಕುರುಕುಂದ ಗ್ರಾಮ ಪಂಚಾಯಿತಿ ಸದಸ್ಯರು,ಗುಡದಪ್ಪ ಕುರುಕುಂದ ಗ್ರಾಮ ಪಂಚಾಯಿತಿ ಸದಸ್ಯರು, ಇನ್ನಿತರರು ಉಪಸ್ಥಿತರಿದ್ದರು